Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಿಸಿಲಿಗೆ ಸ್ಪೆಷಲ್ ನಿಂಬೆ ಹಣ್ಣಿನ ಜ್ಯೂಸ್ ಮಾಡಿ; ಈ ರೀತಿ ಜ್ಯೂಸ್ ನೀವೆಂದು ಮಾಡಿರಲ್ಲ!
ಬೇಸಿಗೆಯ ಸಮಯದಲ್ಲಿ ದೇಹ ತಂಪಾಗಿಡಲು ಹಲವು ರೀತಿಯ ಜ್ಯೂಸ್ ನೀವು ಸೇವಿಸಿರಬಹುದು. ಅದ್ರಲ್ಲೂ ನಿಂಬೆ ಜ್ಯೂಸ್ ಯಾರು ತಾನೆ ಕುಡಿದಿರಲ್ಲ. ಒಂದು ನಿಂಬೆ ಚೂರು ಸಕ್ಕರೆ ಇದ್ರೆ ಥಟ್ ಅಂತ ಈ ನಿಂಬೆ ಜ್ಯೂಸ್ ಮಾಡಿ ಸವಿಯಬಹುದು. ಅದ್ರಲ್ಲೂ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಕ್ಯೂಸ್ ಬಹಳ ಸಹಕಾರಿ. ಹೀಗಾಗಿ ಬಹುತೇಕರ ಮನೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಅಂತು ಮಾಡಿಯೇ ಮಾಡುತ್ತಾರೆ.
ಅದ್ರಲ್ಲೂ ಹಲವು ಮಂದಿ ಮನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಹಲವು ರೀತಿಯ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ಹಾಗೆ ಈ ನಿಂಬೆ ಜ್ಯೂಸ್ ಕುಡಿಯೋದು ಸಹ ನೋಡಿರುತ್ತೇವೆ. ಆದ್ರೆ ನಾವಿಂದು ವಿಶೇಷ ರೀತಿಯಲ್ಲಿ ಈ ನಿಂಬೆ ಜ್ಯೂಸ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ನೀವೆಂದು ಮಾಡಿರದೆ ಇರುವ ರೀತಿಯಲ್ಲಿ ಹಾಗೆ ವಿಭಿನ್ನ ರುಚಿಯ ಈ ನಿಂಬೆ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಪೆಷಲ್ ನಿಂಬೆ ಹಣ್ಣಿನ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ನಿಂಬೆ ಹಣ್ಣು
- ಸಕ್ಕರೆ
- ಉಪ್ಪು
- ಏಲಕ್ಕಿ
- ಶುಂಠಿ
- ಗೋಡಂಬಿ
ಸ್ಪೆಷಲ್ ನಿಂಬೆ ಹಣ್ಣಿನ ಜ್ಯೂಸ್ ಮಾಡುವುದು ಹೇಗೆ?
ಮೊದಲು ನಿಂಬೆ ಹಣ್ಣನ್ನು ಕತ್ತರಿಸಿಕೊಂಡು ಅದನ್ನ ಒಂದು ಬೌಲ್‌ಗೆ ಹಿಂಡಿಕೊಳ್ಳಿ. ಚಿಕ್ಕ ಗಾತ್ರದ ಶುಂಠಿಯನ್ನು ಹೆಚ್ಚಿಕೊಂಡು ಅದನ್ನು ಇಟ್ಟುಕೊಳ್ಳಿ. 5 ಗೋಡಂಬಿಯನ್ನು ನೀರಿನಲ್ಲಿ 15 ನಿಮಿಷ ನೆನೆಸಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 3 ಏಲಕ್ಕಿ, ಕತ್ತರಿಸಿದ ಶುಂಠಿ, ನೀರಿನಲ್ಲಿ ನೆನೆಸಿಟ್ಟಿದ್ದ ಗೋಡಂಬಿಯನ್ನು ಸಹ ಇದಕ್ಕೆ ಹಾಕಿಕೊಳ್ಳಿ.
ಈಗ ಇದಕ್ಕೆ ಹಿಂಡಿಕೊಂಡಿದ್ದ ನಿಂಬೆ ಹಣ್ಣಿನ ರಸವನ್ನು ಸಹ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿಕೊಂಡು ಚಿಟಿಕೆ ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಜರಡಿ ಹಿಡಿದು ಈ ಜ್ಯೂಸ್ ಹಾಕಿಕೊಳ್ಳಿ.
ಇದೇ ಪಾತ್ರೆಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಳ್ಳಿ. ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ. ಅನಂತರ ಇದಕ್ಕೆ ಐಸ್ ಕ್ಯೂಬ್ ಇದ್ದರೆ ಹಾಕಿಕೊಳ್ಳಬಹುದು. ಇಷ್ಟು ಮಾಡಿ ಗ್ಲಾಸ್‌ಗೆ ಹಾಕಿ ಸವಿಯಲು ನೀಡಿ. ಇಷ್ಟಾದರೆ ಮನೆಯಲ್ಲಿ ಸುಲಭದ ನಿಂಬೆ ಜ್ಯೂಸ್ ಕುಡಿಯಿರಿ. ಇದನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಈ ರೀತಿ ನಿಂಬೆ ರಸ ಮಾಡಿ ಸವಿದು ನೋಡಿ. ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಬಿಸಿಲಿನಲ್ಲಿ ಇದು ನಿಮ್ಮ ದೇಹಕ್ಕೆ ತಂಪು ನೀಡಲಿದೆ.



Click it and Unblock the Notifications
