Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮದುವೆ ಮನೆ ರುಚಿಯ ಡ್ರೈ ಜಾಮೂನ್ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ
ಮನೆಯಲ್ಲಿ ಸಿಹಿ ಸುಲಭವಾಗಿ ಸಿಹಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲದೆ ಯಾರಾದರು ಅತಿಥಿಗಳು ಬಂದರೆ ಅವರಿಗೆ ಸುಲಭವಾಗಿ ಡ್ರೈ ಜಾಮೂನ್ ಮಾಡಿಕೊಡಿ. ಈ ಡ್ರೈ ಜಾಮೂನ್ ಮಾಡುವುದು ಬಹಳ ಸುಲಭ ಹಾಗೂ ಕಡಿಮೆ ಸಮಯದಲ್ಲಿಯೇ ಮಾಡಬಹುದು.
ಅದರಲ್ಲೂ ನಾವು ಯಾರಾದರು ಮದುವೆಗೆ ಭೇಟಿ ನೀಡಿದಾಗ ಅಲ್ಲಿ ಡ್ರೈ ಜಾಮೂನ್ ಸವಿದಿರುತ್ತೇವೆ ತುಂಬಾನೆ ರುಚಿಕರ ಹಾಗೂ ಮತ್ತೆ ಮತ್ತೆ ಸವಿಯಬೇಕೆನಿಸುತ್ತದೆ. ಆದ್ರೆ ಮನೆಯಲ್ಲಿ ನಾವು ಡ್ರೈ ಜಾಮೂನ್ ಮಾಡುವುದು ಕಡಿಮೆ. ಸಕ್ಕರೆ ಪಾಕ ಹಾಕಿಯೆ ಜಾಮೂನ್ ಮಾಡುವುದು ಹೆಚ್ಚು. ಆದರೆ ಪಾಕದ ಜಾಮೂನ್‌ಗಿಂತಲೂ ಈ ಡ್ರೈ ಜಾಮೂನ್ ರುಚಿ ಹೆಚ್ಚು.

ಡ್ರೈ ಜಾಮೂನ್ ಮಾಡಲು ಹೆಚ್ಚು ವಸ್ತುಗಳು ಬೇಕು ಎಂದು ಹಲವರು ಅಂದುಕೊಂಡಿರುತ್ತಾರೆ. ಆದರೆ ಕಡಿಮೆ ವಸ್ತು ಬಳಸಿ ಸುಲಭವಾಗಿ ಇದನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲೇ ಡ್ರೈ ಜಾಮೂನ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡ್ರೈ ಜಾಮೂನ್ ಮಾಡಲು ಬೇಕಾಗುವ ಪದಾರ್ಥಗಳು
- ಜಾಮೂನ್ ಪೌಡರ್- 200 ಗ್ರಾಮ್
- ಸಕ್ಕರೆ
- ಎಣ್ಣೆ
- ಏಲಕ್ಕಿ ಪುಡಿ
- ನಿಂಬೆ ಹುಳಿ
- ಕೊಬ್ಬರಿ ಪುಡಿ
ಡ್ರೈ ಜಾಮೂನ್ ಮಾಡುವುದು ಹೇಗೆ?
ಮೊದಲಿಗೆ ಗುಲಾಬ್ ಜಾಮೂನ್ ಮಿಕ್ಸ್ ಪೌಡರ್ ಅನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೆ ಹಾಲು ಹಾಕಿಕೊಂಡು ಕಲಸಿಕೊಳ್ಳಬೇಕಾಗುತ್ತದೆ. ಹಿಟ್ಟು ಮೃದುವಾಗಿ ಬರುವಂತೆ ಕಲಸಿಕೊಳ್ಳಿ. ಬಳಿಕ ಇದಕ್ಕೆ ಪ್ಲೇಟ್ ಮುಚ್ಚಿ 15 ನಿಮಿಷ ಬದಿಗಿಡಿ.
ಈಗ ಸಕ್ಕರೆ ಪಾಕ ಮಾಡಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಸಕ್ಕರೆ ಕರಗುವ ವರೆಗೂ ಬಿಡಿ. ಬಳಿಕ ಸ್ವಲ್ಪ ನಿಂಬೆ ರಸ ಹಿಂಡುಕೊಳ್ಳಿ. 2 ನಿಮಿಷ ಕುದಿ ಬಂದರೆ ಸಾಕಾಗುತ್ತದೆ. ಇಷ್ಟು ಮಾಡಿದ ಬಳಿಕ ಜಾಮೂನ್ ಹಿಟ್ಟು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳ ಮಾಡಿ ಇಡಿ.
ಈಗ ಸಕ್ಕರೆ ಪಾಕಕ್ಕೆ ಏಲಕ್ಕೆ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಳಿಕ ಅದಕ್ಕೆ ಉಂಡೆ ಮಾಡಿದ ಜಾಮೂನ್ ಅನ್ನು ಹಾಕಿ ಕರಿದುಕೊಳ್ಳಿ. ಮೀಡಿಯಂ ಉರಿಯಲ್ಲಿ ಇಟ್ಟು ಕರಿದುಕೊಳ್ಳಿ. ಈ ಜಾಮೂನ್ ಗೋಲ್ಡನ್ ಕಲರ್ ಬರುವವರೆಗೂ ಕರಿದುಕೊಳ್ಳಿ.
ಈಗ ಜಾಮೂನ್ ಅನ್ನು ತೆಗದು ಸಕ್ಕರೆ ಪಾಕಕ್ಕೆ ಹಾಕಿಕೊಳ್ಳಿ. ಎಲ್ಲಾ ಜಾಮೂನ್ ಅನ್ನು 5 ನಿಮಿಷಗಳ ಬಳಿಕ ಪಾಕದಿಂದ ತೆಗೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ಬಳಿಕ ಅಂತಿಮವಾಗಿ ಇದಕ್ಕೆ ಕೊಬ್ಬರಿ ಪುಡಿಯನ್ನು ಮೇಲೆ ಹಾಕಿಕೊಂಡರೆ ನಿಮ್ಮ ಮುಂದೆ ಡ್ರೈ ಜಾಮೂನ್ ರೆಡಿಯಾಗುತ್ತದೆ. ಇದು ಜಾಮೂನ್ ಮಾಡುವ ಸುಲಭದ ವಿಧಾನವಾಗಿದೆ.
ನೀವು ಸಹ ಒಮ್ಮೆ ಈ ರೀತಿ ಡ್ರೈ ಜಾಮೂನ್ ಮಾಡಿ ಪ್ರಯತ್ನಿಸಿ.



Click it and Unblock the Notifications
