Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅದ್ಭುತ ರುಚಿ ನೀಡುವ ಕೊಬ್ಬರಿ ರೈಸ್: 10 ನಿಮಿಷದೊಳಗೆ ಮಾಡಿ!
ನೀವು ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ಎಷ್ಟೆಲ್ಲಾ ರೈಸ್ನಿಂದ ಮಾಡುವ ಖಾದ್ಯ ಮಾಡಿರುತ್ತೀರಿ. ಪಲಾವ್, ಚಿತ್ರಾನ್ನ, ಪುಳಿಯೋಗರೆ, ರೈಸ್ ಬಾತ್, ಬೆಳ್ಳುಳ್ಳಿ ರೈಸ್ ಹೀಗೆ ಹಲವು ರೀತಿಯ ಖಾದ್ಯ ಮಾಡಿಯೇ ಮಾಡಿರುತ್ತೀರಿ. ಬೆಳಗ್ಗೆ ಗಡಿ ಬಿಡಿಯಲ್ಲಿ ರೈಸ್ನಿಂದ ಮಾಡುವ ಯಾವುದಾದರು ಖಾದ್ಯ ಇದ್ದರೆ ರುಚಿ ಅದ್ಭುತವಾಗಿರುತ್ತೆ. ಸಾಮಾನ್ಯವಾಗಿ ಎಲ್ಲರು ಕುಕ್ಕರ್ನಲ್ಲಿ ಮಾಡುವಂತಹ ಖಾದ್ಯಗಳ ಮಾಡಿ ಸವಿಯುವುದು ಕಾಮನ್.
ಹಾಗೆ ನೀವು ಬ್ರೇಕ್ಫಾಸ್ಟ್ಗೆ ವಿಶೇಷವಾಗಿ ಯಾವುದಾದರು ಖಾದ್ಯ ಮಾಡಿ ಸವಿಯುವ ಬಯಕೆ ಇದ್ದರೆ ನೀವು ಸುಲಭವಾಗಿ ಈ ರೀತಿ ಕೊಬ್ಬರಿ ರೈಸ್ ಮಾಡಿ ಸವಿದು ನೋಡಿ. ಕೊಬ್ಬರಿ ಬಳಸಿ ಮಾಡುವ ಈ ರೈಸ್ ಅದ್ಭುತ ರುಚಿ ನೀಡಲಿದೆ. ಹಾಗೆ ಎಲ್ಲರಿಗೂ ಇಷ್ಟವಾಗುತ್ತೆ. ಬೆಳಗ್ಗೆ ತಿಂಡಿಗೆ ಮಾತ್ರವಲ್ಲ, ಮಧ್ಯಾಹ್ನದ ಬಾಕ್ಸ್ಗೂ ಕೂಡ ಇದು ರುಚಿಕರವಾಗಿರಲಿದೆ.

ಈ ರೀತಿ ಕೊಬ್ಬರಿ ರೈಸ್ ಅನ್ನು ನೀವು ಕೂಡ ಸವಿದಿರಬಹುದು. ಕೊಬ್ಬರಿ ತುರಿಯ ಈ ರೈಸ್ ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ. ಹಾಗೆ ರುಚಿ ಕೂಡ ಅದ್ಭುತವಾಗಿರುತ್ತೆ. ಹಾಗಾದ್ರೆ ಈ ಕೊಬ್ಬರಿ ರೈಸ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಕೊಬ್ಬರಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊಬ್ಬರಿ ತುರಿ ರೈಸ್ ಮಾಡುಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ
- ಕೊಬ್ಬರಿ ತುರಿ- 1 ಕಪ್
- ಸಾಸಿವೆ
- ಇಂಗು
- ಸೋಂಪು ಕಾಳು
- ಕಡಲೆ ಬೇಳೆ
- ಉದ್ದಿನ ಬೇಳೆ
- ಚಕ್ಕೆ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನಕಾಯಿ
- ಎಣ್ಣೆ (ಕೊಬ್ಬರಿ ಎಣ್ಣೆ ಇದ್ದರೆ ಉತ್ತಮ)
- ಉಪ್ಪು
ಕೊಬ್ಬರಿ ತುರಿ ರೈಸ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾದ ಬಳಿಕ ಸಾಸಿವೆ, ಇಂಗು, ಸೋಂಪು ಕಾಳು, ಕಡಲೆ ಬೇಳೆ, ಉದ್ದಿನ ಬೇಳೆ, ಚಕ್ಕೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಈಗ ಹಸಿ ಮೆಣಸು ಹಾಕಿಕೊಳ್ಳಬೇಕು. ಈ ವೇಳೆ ನಿಮಗೆ ಬೇಕಿದ್ದ ಗೋಡಂಬಿ ಹಾಗೂ ದ್ರಾಕ್ಷಿ ಹಾಕಿಕೊಳ್ಳಬಹುದು, ಇದರಿಂದ ರುಚಿಯೂ ಹೆಚ್ಚಾಗುತ್ತದೆ.
ಈಗ ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಒಗ್ಗೆರಣೆಗೆ ಒಂದು ಕಪ್ ತುರಿದ ಕೊಬ್ಬರಿ ಹಾಕಿ ಫ್ರೈ ಮಾಡಿ. ಅದನ್ನು 1 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಅನಂತರ ಮೊದಲು ಮಾಡಿಟ್ಟುಕೊಂಡಿರುವ ಹುಡಿ ಹಿಡಿಯಾದ ಅನ್ನವನ್ನು ಇದಕ್ಕೆ ಹಾಕಿಕೊಳ್ಳಿ. ಉರಿಯನ್ನು ಸಣ್ಣ ಮಾಡಿಕೊಳ್ಳಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳ. ಎಲ್ಲಾ ಪದಾರ್ಥಗಳು ಈ ಅನ್ನಕ್ಕೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಕೊಬ್ಬರಿ ಎಣ್ಣೆ ಬಳಸಿದರೆ ಮತ್ತಷ್ಟು ರುಚಿ ನೀಡಲಿದೆ. ಕೊನೆಯಲ್ಲಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ಆಯಿತು. ಮಿಕ್ಸ್ ಆದ ಬಳಿಕ ಒಲೆ ಆಫ್ ಮಾಡಿಕೊಳ್ಳಿ, ಇಷ್ಟಾದರೆ ನಿಮ್ಮ ಮುಂದೆ ಕೊಬ್ಬರಿ ರೈಸ್ ರೆಡಿಯಾಗುತ್ತೆ.
ಇದನ್ನು ಬಹಳ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದು. ನೀವು ಕೂಡ ಬೆಳಗ್ಗೆ ತಿಂಡಿಯ ಸಮಯದಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
