Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪ್ರಧಾನಿ ಮೋದಿ ಕೂಡ ಈ ಪರೋಟಾ ಮಾಡಿ ಸವಿಯುತ್ತಾರೆ.! ನುಗ್ಗೆಕಾಯಿ ಪರೋಟಾ ಮಾಡೋದು ಹೇಗೆ?
ನಮಗೆ ನಿತ್ಯದ ಕೆಲಸ ಕಾರ್ಯಗಳಲ್ಲಿ ದೇಹಕ್ಕೆ ಆಹಾರ ಎಷ್ಟು ಮುಖ್ಯ ಎಂಬುದನ್ನು ಅರಿತ್ತಿದ್ದೇವೆ. ಅದರಲ್ಲೂ ಪೌಷ್ಟಿಕ ಆಹಾರ, ವಿಟಮಿನ್ ಭರಿತ ಆಹಾರ ಸೇವನೆ ದೇಹಕ್ಕೆ ತುಂಬಾನೆ ಮುಖ್ಯ. ಅದರಲ್ಲಿ ನಿತ್ಯ ಗಂಟೆಗಳ ಕಾಲ ಕೆಲಸ ಮಾಡುವ ಮಂದಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕಾಗುತ್ತದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೇಹಕ್ಕೆ ಅತ್ಯುತ್ತಮ ಇಮ್ಯೂನಿಟಿ ಬೂಸ್ಟ್ರ್ ಆಗಿರುವ ನುಗ್ಗೆ ಕಾಯಿಯ ಪರೋಟಾ ಮಾಡಿ ಸವಿಯುತ್ತಿದ್ದರಂತೆ.
ಪ್ರಧಾನಿ ಮೋದಿ ಹಿಂದೊಮ್ಮೆ ಈ ರೀತಿ ತಮ್ಮ ಬ್ರೇಕ್ ಫಾಸ್ಟ್ ಕುರಿತು ಹೇಳಿಕೊಂಡಿದ್ದರು. ಅವರು ವಾರದಲ್ಲಿ ಎರಡು ಬಾರಿ ಈ ನುಗ್ಗೆ ಕಾಯಿಯ ಪರೋಟಾ ಮಾಡಿ ಸವಿಯುತ್ತಿದ್ದರಂತೆ. ಹಾಗೆ ಖುದ್ದು ಅವರೇ ಈ ಪರೋಟಾ ಮಾಡಿಕೊಳ್ಳುತ್ತಿದ್ದರಂತೆ. ಈ ಪರೋಟಾ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಎಂದು ಪ್ರಧಾನಿ ಮೋದಿ ಒಮ್ಮೆ ಹೇಳಿದ್ದರು.

ಹಾಗಾದ್ರೆ ನಾವಿಂದು ಈ ಆರೋಗ್ಯಕರ ನುಗ್ಗೆಕಾಯಿ ಪರೋಟಾ ಮಾಡುವ ಕುರಿತು ತಿಳಿದುಕೊಳ್ಳೋಣ. ನುಗ್ಗೆಕಾಯಿಯಲ್ಲಿ ಹಲವು ರೀತಿ ಖಾದ್ಯ ಮಾಡುವುದನ್ನು ನಾವು ತಿಳಿದಿದ್ದೇವೆ. ನುಗ್ಗೆಕಾಯಿ ಸಾರು ಎಲ್ಲದಕ್ಕಿಂತ ರುಚಿಕರವಾಗಿರುತ್ತೆ. ನಾವಿಂದು ಈ ನುಗ್ಗೆಕಾಯಿ ಪರೋಟಾ ಮಾಡುವುದನ್ನು ತಿಳಿಯೋಣ.
ನುಗ್ಗೆಕಾಯಿ ಪರೋಟಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಮನೆಯಲ್ಲಿ ಈ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡೋಣ.
ನುಗ್ಗೆಕಾಯಿ ಪರೋಟಾ ಮಾಡಲು ಬೇಕಾಗುವ ಪದಾರ್ಥಗಳು
- ನುಗ್ಗೆಕಾಯಿ
- ನುಗ್ಗೆ ಸೊಪ್ಪು
- ಗೋಧಿ ಹಿಟ್ಟು
- ಶುಂಠಿ
- ಅರಶಿನ
- ಜಿರಿಗೆ ಪುಡಿ
- ಖಾರದ ಪುಡಿ
- ಉಪ್ಪು
- ಕೊತ್ತಂಬರಿ ಸೊಪ್ಪು
- ಎಣ್ಣೆ
ನುಗ್ಗೆಕಾಯಿ ಪರೋಟಾ ಮಾಡುವುದು ಹೇಗೆ?
ಮೊದಲು ನುಗ್ಗೆಕಾಯಿಯನ್ನು ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ ಇಡಿ. ನಂತರ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಕತ್ತರಿಸಿಕೊಂಡಿರುವ ನುಗ್ಗೆಕಾಯಿಯನ್ನು ಹಾಕಿ ಕುದಿಯಲು ಬಿಡಿ. ನುಗ್ಗೆಕಾಯಿ ಮೆತ್ತಗಾಗುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಂದಿರುವ ಈ ನುಗ್ಗೆಕಾಯಿಯನ್ನು ತೆಗೆದು ಒಂದು ಜರಡಿಗೆ ಹಾಕಿ ಅದರ ನೀರು ಸಹ ಇಟ್ಟುಕೊಳ್ಳಿ.
ಈಗ ಬೆಂದಿರುವ ಎಲ್ಲಾ ನುಗ್ಗೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಅದರ ರಸ ಬಿಡುವಂತೆ ಪುಡಿ ಮಾಡಿಕೊಳ್ಳಿ. ಈಗ ನುಗ್ಗೆಯ ಕಡ್ಡಿಗಳು, ಉಳಿದ ಕಸವನ್ನು ಎತ್ತಿ ಅದರ ನೀರನ್ನು ಮಾತ್ರ ಇಟ್ಟುಕೊಂಡು ಅದಕ್ಕೆ ಒಂದು ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಶುಂಠಿ ಹೆಚ್ಚಿಕೊಂಡು ಹಾಕಿ, ನಂತರ ಅರಶಿನ, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಒಂದು ಕಪ್ ನುಗ್ಗೆ ಸೊಪ್ಪನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
ಈ ನೀರು ಬಿಸಿ ಇರುವ ಕಾರಣ ಕೈಯಿಂದ ಮಿಕ್ಸ್ ಮಾಡಬೇಡಿ, ತಣ್ಣಗಾದ ಬಳಿಕ ಕೈಯಿಂದ ಮಿಕ್ಸ್ ಮಾಡಿ, ಚಪಾತಿ ಹಿಟ್ಟಿನಂತೆ ಹದ ಬರುವಂತೆ ಎಣ್ಣೆ ಸಹ ಹಾಕಿಕೊಂಡು ಮೃದುವಾಗಿ ಹಿಟ್ಟು ರೆಡಿ ಮಾಡಿ ಪಾತ್ರೆಗೆ ಹಾಕಿ 30 ನಿಮಿಷ ಹದವಾಗಲು ಬಿಡಿ.
30 ನಿಮಿಷದ ಬಳಿಕ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಬೇಕು. ನಂತರ ಒಣ ಹಿಟ್ಟು ಹರಡಿಕೊಂಡು ಅದರ ಮೇಲೆ ಹಿಟ್ಟು ಇಟ್ಟು ಚಪಾತಿಯನ್ನು ಲಟ್ಟಿಸಿಕೊಳ್ಳಬೇಕು. ನಂತರ ಚಪಾತಿಯನ್ನು ಸಣ್ಣ ಸಣ್ಣ ಲೈನ್ ಹಾಕಿ ಕತ್ತರಿಸಿಕೊಳ್ಳಬೇಕು. ನಂತರ ಅಡ್ಡಲಾಗಿ ಮಡಚಿಕೊಂಡು ಮತ್ತೆ ಉಂಡೆಯಂತಹ ಆಕಾರಕ್ಕೆ ಬಂದ ಬಳಿಕ ಮತ್ತೆ ಲಟ್ಟಿಸಿಕೊಳ್ಳಬೇಕು, ಪರೋಟಾ ಯಾವಾಗಲು ಪದರ ಪದರವಾಗಿರುವುದನ್ನು ನಾವು ನೋಡಬಹುದು.
ಇದಾದ ಬಳಿಕ ಒಂದೊಂದೇ ಪರೋಟಾವನ್ನು ಕಾವಲಿ ಮೇಲೆ ಹಾಕಿ ಎರಡೂ ಕಡೆ ಬೇಯಿಸಿಕೊಳ್ಳಬೇಕು, ಇಷ್ಟಾದರೆ ನುಗ್ಗೆಕಾಯಿ ಪರೋಟಾ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
