Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಸೊಪ್ಪಿನ ಸಾಂಬಾರ್: ಇಲ್ಲಿದೆ ನುಗ್ಗೆ ಸೊಪ್ಪಿನ ರೆಸಿಪಿ
ಊಟದ ಜೊತೆಗೆ ಆರೋಗ್ಯಕರ ಸಾಂಬಾರ್ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚಾಗಲಿದೆ. ನೀವು ಕೂಡ ಹಲವು ರೀತಿಯ ತರಕಾರಿಗಳು, ಬೇಳೆ ಕಾಳುಗಳಿ, ಸೊಪ್ಪುಗಳಿಂದ ಸಾಂಬಾರ್ ಮಾಡುವುದು ನೋಡಬಹುದು. ಎಲ್ಲಾ ಸಾಂಬಾರ್‌ಗಳು ರುಚಿ ಬರುವಂತೆ ಮಾಡುವುದು ಕೂಡ ಒಂದು ವಿಧಾನವಾಗಿದೆ. ಅದ್ರಲ್ಲೂ ನಾವಿಂದು ತಿಳಿಸುತ್ತಿರುವ ನುಗ್ಗೆ ಸೊಪ್ಪಿನ ಸಾಂಬಾರ್ ಕುರಿತಾಗಿ ನಿಮಗೆ ತಿಳಿದಿರಬಹುದು.
ಅದರಲ್ಲೂ ಈ ನುಗ್ಗೆ ಸೊಪ್ಪಿನಿಂದ ಆಗುವ ಆರೋಗ್ಯಕರ ಲಾಭಗಳ ಕುರಿತು ನೀವು ತಿಳಿದರೆ ಮನೆಯಲ್ಲಿ ಈ ಸಾಂಬಾರ್ ಯಾವಾಗಲು ಮಾಡಿ ಸವಿಯಲು ಮುಂದಾಗುವುದು ಖಚಿತ. ಹೀಗಾಗಿ ನಾವಿಂದು ಈ ನುಗ್ಗೆ ಸೊಪ್ಪಿನ ಲಾಭಗಳ ಕುರಿತಾಗಿ ಮೊದಲು ತಿಳಿದುಕೊಳ್ಳೋಣ. ಈ ನುಗ್ಗೆ ಸೊಪ್ಪಿನಲ್ಲಿರುವ ಕಬ್ಬಿಣಾಂಶ ಬೇರೆ ಯಾವುದೇ ಸೊಪ್ಪಿನಲ್ಲೂ ಸಿಗೋದಿಲ್ಲ.

ಹಾಗೆ ಈ ಸೊಪ್ಪಿನಲ್ಲಿರುವ ವಿಟಮಿನ್ ಸಿ, ಜಿಂಕ್, ವಿಟಮಿನ್ ಡಿ ಅಂಶಗಳು ಕೂಡ ನಮ್ಮ ದೇಹಕ್ಕೆ ಬಹಳ ಮುಖ್ಯವಾಗಲಿವೆ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೂ ಕೂಡ ಇದು ಸಹಕಾರಿಯಾಗಲಿದೆ. ನುಗ್ಗೆ ಸೊಪ್ಪಿನಲ್ಲಿ ಆಂಟಿ ಡಯಾಬಿಟಿಕ್ ಮತ್ತು ಆಂಟಿ - ಆಕ್ಸಿಡೆಂಟ್ ವಸ್ತುಗಳಿದ್ದು, ಇದು ಮಧುಮೇಹಿಳಿಗೆ ಉತ್ತಮವಾಗಿದೆ. ಹಾಗೆ ಇದು ಇನ್ಸುಲಿನ್ ಮಟ್ಟ ನಿಯಂತ್ರಿಸಲಿದೆ.
ಹಾಗಾದ್ರೆ ನಾವಿಂದು ಈ ನುಗ್ಗೆ ಸೊಪ್ಪಿನ ರುಚಿ ರುಚಿಯ ಸಾಂಬಾರ್ ಮಾಡಿ ಸವಿಯುವ ಕುರಿತಾಗಿ ನಾವು ತಿಳಿದುಕೊಳ್ಳೋಣ. ಈ ನುಗ್ಗೆ ಸೊಪ್ಪಿನ ಸಾಂಬಾರ್ ಊಟಕ್ಕೆ ಮಾತ್ರವಲ್ಲ ತಿಂಡಿಗೂ ಕೂಡ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ನುಗ್ಗೆ ಸೊಪ್ಪಿನ ರುಚಿ ರುಚಿಯ ಸಾಂಬಾರ್ ಮಾಡೋದು ಹೇಗೆ ಗೊತ್ತಾ? ಈ ನುಗ್ಗೆ ಸೊಪ್ಪಿನ ಸಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥ ಬೇಕು?
- ನುಗ್ಗೆ ಸೊಪ್ಪು
- ಟೊಮಟೋ
- ಬೇಳೆ
- ಅರಶಿಣ
- ಈರುಳ್ಳಿ
- ಎಣ್ಣೆ
- ಉಪ್ಪು
- ಸಾಸಿವೆ
- ಮೆಣಸು
- ತೆಂಗಿನಕಾಯಿ ತುರಿ
ನುಗ್ಗೆ ಸೊಪ್ಪಿನ ಸಾಂಬಾರ್ ಮಾಡುವುದು ಹೇಗೆ?
ಮೊದಲು ನುಗ್ಗೆ ಸೊಪ್ಪನ್ನು ಬಿಡಿಸಿಕೊಂಡು ಕ್ಲೀನ್ ಮಾಡಿಕೊಳ್ಳಬೇಕು. ತೊಳೆದು ಇಟ್ಟುಕೊಳ್ಳಿ. ಈಗ ಕುಕ್ಕರ್‌ಗೆ ಬೇಳೆ ಹಾಗೂ ಟೊಮೆಟೋ ಹಾಕಿಕೊಂಡು ನೀರು ಸಹ ಹಾಕಿಕೊಳ್ಳಿ. ನಂತರ ಅರಶಿಣ, ಎಣ್ಣೆ, ಹಾಕಿಕೊಂಡು 3 ಸೀಟಿ ಹೊಡೆಯಲು ಬಿಡಿ. ಮೂರು ಸೀಟಿ ಹೊಡೆದ ಬಳಿಕ ಕುಕ್ಕರ್‌ನ ಮುಚ್ಚಳ ತೆಗೆದು ಟೊಮೆಟೋ ಹಾಗೂ ಬೇಳೆಯನ್ನು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ ಸಿಡಿಯಲು ಬಿಡಿ. ನಂತರ ಈರುಳ್ಳಿ, ಒಣ ಮೆಣಸು ಅಥವಾ ಹಸಿ ಮೆಣಸು, ಹಾಕಿ ಫ್ರೈ ಆಗಲು ಬಿಡಿ. ನಂತರ ಬೇಯಿಸಿಕೊಂಡ ಬೇಳೆ ಹಾಗೂ ಟೊಮೆಟೋ ಕೂಡ ಇದಕ್ಕೆ ಹಾಕಿಕೊಂಡು ಕುದಿಬರಲು ಬಿಡಬೇಕು. ಕುದಿ ಬರಲು ಆರಂಭಿಸಿದಾಗ ಇದಕ್ಕೆ ಸಾಂಬಾರ್ ಪುಡಿ, ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಕುದಿಬರಲು ಬಿಡಿ.
ಸಾರು ಚೆನ್ನಾಗಿ ಕುದಿ ಬರಲು ಆರಂಭಿಸಿದಾಗ ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ತೊಳೆದು ಇಟ್ಟುಕೊಂಡಿರುವ ನುಗ್ಗೆ ಸೊಪ್ಪನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಬೇಯಿಸಿಕೊಳ್ಳಿ. 5ರಿಂದ 6 ನಿಮಿಷ ಚೆನ್ನಾಗಿ ಕುದಿಬರಲು ಬಿಟ್ಟರೆ ನಿಮ್ಮ ಮುಂದೆ ಈ ನುಗ್ಗೆ ಸೊಪ್ಪಿನ ಸಾಂಬಾರ್ ರೆಡಿಯಾಗುತ್ತೆ. ಊಟದ ಜೊತೆಗೆ ಇದರ ರುಚಿ ನೀವು ಕೂಡ ಸವಿದು ನೋಡಿ.



Click it and Unblock the Notifications
