Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಯಲ್ಲಿ ನೀರು ತರಿಸುವ ನುಗ್ಗೆ ಗೊಜ್ಜು ಮಾಡಿ ನೋಡಿ..! ಎಷ್ಟು ಸುಲಭ ಗೊತ್ತಾ?
ನುಗ್ಗೆಕಾಯಿ ಸಾಂಬಾರ್ ಅಥವಾ ನುಗ್ಗೆಯ ಯಾವುದೇ ಖಾದ್ಯ ಅಂದ್ರ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ನುಗ್ಗೆಕಾಯಿ ಸಾಂಬಾರ್ ಅಂತು ಎಲ್ಲರ ಬಾಯಲ್ಲಿ ನೀರು ತರಿಸುತ್ತೆ. ವಿಶೇಷ ಸಮಯದಲ್ಲಿ ಶುಭ ದಿನದ ಸಮಯದಲ್ಲಿ ಮನೆಯಲ್ಲಿ ನುಗ್ಗೆ ಸಾಂಬಾರ್ ಸಾಮಾನ್ಯ. ನುಗ್ಗೆ ಆರೋಗ್ಯಕ್ಕೂ ಬಹಳ ಉತ್ತಮ. ಅದರ ಎಲೆಗಳಿಂದಲೂ ಕೂಡ ಹಲವು ಬಗೆಯ ಖಾದ್ಯ ಮಾಡಬಹುದು, ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನುಗ್ಗೆಕಾಯಿ ಅಂಶ ಬಹಳ ಮುಖ್ಯ. ಅತೀ ಹೆಚ್ಚು ವಿಟಮಿನ್ ಸಿ ಸಿಗುವ ಆಹಾರಗಳಲ್ಲಿ ಇದು ಕೂಡ ಒಂದು, ಫೈಬರ್, ಕರುಳಿನ ಆರೋಗ್ಯಕ್ಕೆ ಬೇಕಾದ ಅಂಶಗಳು ಕೂಡ ಇದರಿಂದ ಸಿಗುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಾಗಿ ಬೇಕಾದ ನುಗ್ಗೆಯನ್ನು ಆಗಾಗ ಸವಿಯುತ್ತಿರಿ. ನಾವಿಂದು ಈ ನುಗ್ಗೆಕಾಯಿಯಿಂದ ಮಾಡುವ ಅದ್ಭುತ ರುಚಿಯ ಗೊಜ್ಜಿನ ಕುರಿತು ತಿಳಿದುಕೊಳ್ಳೋಣ.

ನುಗ್ಗೆ ಸಾಂಬಾರ್ ನೀವೆಲ್ಲರು ಮಾಡಿ ಸವಿದಿರುತ್ತೀರಿ. ಆದ್ರೆ ನುಗ್ಗೆ ಗೊಜ್ಜು ಎಂದಾದರು ಮಾಡಿದ್ದೀರಾ? ನುಗ್ಗೆಕಾಯಿಯಿಂದ ಮಾಡುವ ಗೊಜ್ಜು ಅದ್ಭುತ ರುಚಿಯ ತರಲಿದೆ. ನಾವಿಂದು ಈ ಗೊಜ್ಜು ಮಾಡುವ ಕುರಿತು ತಿಳಿಯೋಣ. ನುಗ್ಗೆಕಾಯಿಯ ಗೊಜ್ಜನ್ನು ಊಟ, ತಿಂಡಿಯ ಜೊತೆಗೂ ಸವಿಯಬಹುದು. ಹಾಗಾದ್ರೆ ಈ ನುಗ್ಗೆ ಗೊಜ್ಜನ್ನು ಮಾಡುವುದು ಹೇಗೆ?
ನುಗ್ಗೆಕಾಯಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆಕಾಯಿ ಗೊಜ್ಜು ಮಾಡಲು ಬೇಕಾಗುವ ವಸ್ತುಗಳು
- ನುಗ್ಗೆ ಕಾಯಿ
- ಈರುಳ್ಳಿ
- ಹಸಿಮೆಣಸಿನಕಾಯಿ - 2
- ಕೊತ್ತಂಬರಿ ಸೊಪ್ಪು
- ಶುಂಠಿ
- ಬೆಳ್ಳುಳ್ಳಿ
- ತೆಂಗಿನಕಾಯಿ
- ಧನಿಯಾ ಪುಡಿ
- ಕರಿಬೇವು
- ಏಲಕ್ಕಿ
- ಅರಿಶಿನ ಪುಡಿ
- ಖಾರದ ಪುಡಿ
- ಗರಂ ಮಸಾಲೆ
- ಜೀರಿಗೆ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ನುಗ್ಗೆಕಾಯಿ ಗೊಜ್ಜು ಮಾಡುವ ವಿಧಾನವೇನು?
ಮೊದಲು ನುಗ್ಗೆಕಾಯಿಯನ್ನು ತೊಳೆದುಕೊಂಡು ಸಾಂಬಾರ್‌ಗೆ ಹೆಚ್ಚಿಕೊಳ್ಳುವಂತೆ ಹೆಚ್ಚಿ ಬದಿಗಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ತೆಂಗಿನಕಾಯಿ, ಧನಿಯಾ ಪುಡಿ, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಮೇಲೆ ಪಲಾವ್ ಎಲೆ, ಏಲಕ್ಕಿ ಹಾಕಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಿ, ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿ. ಇಗ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಖಾರದ ಪುಡಿ, ಅರಶಿಣ, ಜಿರಿಗೆ ಪುಡಿ, ಗರಂ ಮಸಾಲೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ 3 ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಈಗ ಕತ್ತರಿಸಿಕೊಂಡಿರುವ ನುಗ್ಗೆಕಾಯಿನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಉಪ್ಪು ಹಾಗೂ ಸ್ವಲ್ಪ ನೀರು ಕೂಡ ಹಾಕಿಕೊಳ್ಳಿ. ತಳ ಹಿಡಿಯಬಾರದು ಎಂಬ ಕಾರಣಕ್ಕೆ ಸ್ವಲ್ಪವೇ ನೀರು ಹಾಕಿ 1 ಗ್ಲಾಸ್ ಹಾಕಿದರೆ ಸಾಕು. ಬಳಿಕ ಇದನ್ನು ಮಧ್ಯಮ ಉರಿಯಲ್ಲಿ 10 ನಿಮಿಷ ಹಾಗೆಯೇ ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನುಗ್ಗೆ ಸಾಂಬಾರ್ ರೆಡಿಯಾಗುತ್ತದೆ. ನೀವು ಕೂಡ ಮಾಡಿ ನೋಡಿ.



Click it and Unblock the Notifications
