Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನೀವೆಂದು ತಿಂದಿರದ ಈ ನುಗ್ಗೆ ಸೊಪ್ಪಿನ ಮಸಾಲೆ ವಡೆ..! ಮಾಡೋದು ಸಿಕ್ಕಾಪಟ್ಟೆ ಸುಲಭ
ಸಂಜೆಯ ಸ್ನ್ಯಾಕ್ಸ್ ಹಾಗೆ ರಾತ್ರಿ ಊಟಕ್ಕೆಲ್ಲ ನೀವು ಮಸಾಲೆ ವಡೆ ಮಾಡಿ ಸವಿದಿರಬಹುದು. ಮಸಾಲೆ ವಡೆ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರ ಘಮಲು ಇಡಿ ಮನೆಯಲ್ಲಾ ತುಂಬಿಕೊಂಡಿರುತ್ತೆ. ಹೀಗಾಗಿ ಮಸಾಲೆ ವಡೆ ತುಂಬಾ ಫೇಮಸ್ ಖಾದ್ಯ. ಬೀದಿ ಬೀದಿಯಲ್ಲಿ ಮಸಾಲೆ ವಡೆ ಮಾಡುವುದನ್ನ ನಾವು ನೋಡಬಹುದು. ಬೆಳಗ್ಗೆ ತಿಂಡಿ ಸಂಜೆ ಸ್ನ್ಯಾಕ್ಸ್ ಹಾಗೆ ರಾತ್ರಿ ಊಟಕ್ಕೂ ಈ ಮಸಾಲೆ ವಡೆ ಇದ್ದರೆ ಊಟ, ತಿಂಡಿಯ ರುಚಿ ಹೆಚ್ಚಾಗುವುದು ಸಾಮಾನ್ಯ.
ಹಾಗೆ ಈ ಮಸಾಲೆ ವಡೆಯನ್ನ ಹತ್ತಾರು ಬಗೆಯಲ್ಲಿ ಮಾಡಬಹುದು ಎಂಬುದು ಕೂಡ ನಿಮಗೆ ತಿಳಿದಿರಬಹುದು. ಅದರಲ್ಲೂ ಕಡಲೇ ಬೇಳೆಯಿಂದ ಮಾಡುವ ಮಸಾಲೆ ವಡೆ ಸಿಕ್ಕಾಪಟ್ಟೆ ಫೇಮಸ್. ಸಂಜೆ ವೇಳೆ ಕಾಫಿ, ಟೀ ಜೊತೆ ಈ ಮಸಾಲ ವಡೆ ಸೇವಿಸುತ್ತಾರೆ, ಜೊತೆಗೆ ಬೆಳಗ್ಗೆಯ ತಿಂಡಿಗೂ ಈ ವಡೆ ಹೆಚ್ಚಾಗಿ ಬಳಸುತ್ತಾರೆ. ಅಲ್ಲದೆ ಸಂಜೆ ವೇಳೆ ಒಂದಿಷ್ಟು ಮಂದಿ ಈ ಮಸಾಲೆ ವಡೆ ಸವಿದೇ ಸವಿಯುತ್ತಾರೆ.

ಆದ್ರೆ ನಾವಿಂದು ನೀವು ಎಂದಿಗೂ ಸವಿಯದೇ ಇರುವ ರುಚಿಯಲ್ಲಿ ಮಾಡಲಾಗುವ ಮಸಾಲೆ ವಡೆ ಮಾಡುವುದುನ್ನು ನೋಡೋಣ. ಈ ವಡೆಯನ್ನು ನಾವು ನುಗ್ಗೆ ಸೊಪ್ಪಿನ ಮಸಾಲೆ ವಡೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ನುಗ್ಗೆ ಸೊಪ್ಪು ಆರೋಗ್ಯಕ್ಕೆ ಎಷ್ಟೊಂದು ಉತ್ತಮ ಎಂಬುದನ್ನು ನೀವು ತಿಳಿದಿರಬಹುದು. '
ಮಸಾಲೆ ವಡೆ ಮಾಡುವುದು ಹೇಗೆ?
ಈ ನುಗ್ಗೆ ಸೊಪ್ಪಿನ ಮಸಾಲೆ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ
- ಹೆಸರು ಬೇಳೆ
- ನುಗ್ಗೆ ಸೊಪ್ಪು
- ಉಪ್ಪು
- ಎಣ್ಣೆ
- ಜೀರಿಗೆ
- ಸೋಂಕಾಳು
- ಶುಂಠಿ
- ಹಸಿ ಮೆಣಸು
- ಒಣ ಮೆಣಸು
- ಬೆಳ್ಳುಳ್ಳಿ
- ಏಲಕ್ಕಿ
- ಲವಂಗ
ನುಗ್ಗೆ ಸೊಪ್ಪಿನಿಂದ ಮಸಾಲೆ ವಡೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ಗೆ ಒಂದು ಕಪ್ ಕಡಲೆಬೇಳೆ ಹಾಗೂ ಕಾಳು ಕಪ್ ಹೆಸರು ಬೇಳೆ ಹಾಕಿ ನೀರಿನಲ್ಲಿ ತೊಳೆದು ಬಳಿಕ ನೀರು ಹಾಕಿ 1 ಗಂಟೆ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಒಣ ಮೆಣಸು, ಸೋಂಕಾಳು, ಜೀರಿಗೆ, ಚಕ್ಕೆ, ಕಾಳು ಮೆಣಸು, ಲವಂಗ, ಏಲಕ್ಕಿ ಹಾಕಿ ಪೌಡರ್ ಮಾಡಿಕೊಳ್ಳಿ.
ನಂತರ ಮತ್ತೆ ಮಿಕ್ಸಿ ಜಾರ್ಗೆ 4 ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿಕೊಂಡು ಬೌಲ್‌ಗೆ ಹಾಕಿ ಇಡಿ. ಈಗ ನೀರಿನಲ್ಲಿ ನೆಂದಿರುವ ಕಡಲೆ ಬೇಳೆ, ಹೆಸರು ಬೇಳೆಯನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ನಂತರ ಈ ಬೇಳೆಗೆ ರುಬ್ಬಿಕೊಂಡಿರುವ ಮಸಾಲೆ ಹಾಕಿ, ನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ, ಹಾಗೆ ತೊಳೆದು ಸ್ವಚ್ಛ ಮಾಡಿರುವ ನುಗ್ಗೆ ಸೊಪ್ಪನ್ನು ಹಾಕಿಕೊಳ್ಳಿ. ಈಗ ಉಪ್ಪು ಅಡುಗೆ ಸೋಡಾ ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಹಿಟ್ಟಿನ ಜೊತೆ ಸೊಪ್ಪು ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಈಗ ಹಿಟ್ಟನ್ನು ಉಂಡೆ ಮಾಡಿಟ್ಟುಕೊಳ್ಳಿ.
ಈಗ ಉಂಡೆಯನ್ನು ಕೈಯಲ್ಲಿ ತಟ್ಟಿ ವಡೆ ಮಾಡಿಕೊಳ್ಳಿ. ಹಾಗೆ ಅದನ್ನು ಕಾದಿರುವ ಎಣ್ಣೆಯಲ್ಲಿ ಬಿಡಿ. ಎರಡೂ ಕಡೆ ಚೆನ್ನಾಗಿ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ನುಗ್ಗೆ ಸೊಪ್ಪಿನ ಮಸಾಲೆ ವಡೆ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
