Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೊಡ್ಡಪತ್ರೆ ಚಟ್ನಿ ಹೀಗೆ ಮಾಡಿದರೆ ಸೂಪರ್ ಆಗಿರುತ್ತೆ, ಎಲೆಯ ವಾಸನೆಯೂ ಇರಲ್ಲ
ದೊಡ್ಡಪತ್ರೆ ಔಷಧೀಯ ಗುಣವುಳ್ಳ ಈ ಸಸ್ಯ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಂಡು ಬರುತ್ತದೆ. ಮಕ್ಕಳಿಗೆ ಚಿಕ್ಕ ಶೀತ ಬಂದರೆ ದೊಡ್ಡಪತ್ರೆ ಎಲೆಯಿಂದ ಮನೆ ಮದ್ದು ಮಾಡಲಾಗುವುದು, ದೊಡ್ಡ ಪತ್ರೆಯನ್ನು ಜ್ವರ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಅಲ್ಲದೆ ಈ ದೊಡ್ಡ ಪತ್ರೆ ಎಲೆಯ ಆರೈಕೆ ಕೂಡ ದೊಡ್ಡ ಕಷ್ಟವೇನಲ್ಲ, ಈ ದೊಡ್ಡ ಪತ್ರೆ ಎಲೆ ಬಳಸಿ ತುಂಬಾ ರುಚಿಕರವಾದ ಚಟ್ನಿ ಮಾಡಬಹುದು.
ದೊಡ್ಡಪತ್ರೆ ಎಲೆಯಿಂದ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಟೊಮೆಟೊ
ಈರುಳ್ಳಿ 1
ಹಸಿ ಮೆಣಸು
ಸ್ವಲ್ಪ ಪುದೀನಾ
ಸ್ವಲ್ಪ ಕೊತ್ತಂಬರಿ ಸೊಪ್ಪು
8-10 ದೊಡ್ಡ ಪತ್ರೆ ಎಲೆ
ರುಚಿಗೆ ತಕ್ಕ ಉಪ್ಪು
1 ಚಮಚ ಎಣ್ಣೆ
ಒಗ್ಗರಣೆಗೆ
1 ಚಮಚ ಎಣ್ಣೆ(ನಾವು ತೆಂಗಿನೆಣ್ಣೆ ಬಳಸಿದ್ದು, ನೀವು ಅಡುಗೆಗೆ ಬಳಸುವ ಯಾವುದೇ
ಎಣ್ಣೆಯಾದರೂ ಬಳಸಬಹುದು)
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ:
- ಟೊಮೆಟೊವನ್ನು ಎರಡು ಭಾಗ ಮಾಡಿ
- ಈಗ ಒಂದು ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಅದರಲ್ಲಿ ಟೊಮೆಟೊವನ್ನು ಮಗುಚಿ ಇಟ್ಟು ಬೇಯಿಸಿ, ಚೆನ್ನಾಗಿ ಬೇಯಲಿ
- ಟೊಮೆಟೊ ಮತ್ತೆಗಾದ ಮೇಲೆ ಅದನ್ನು ತೆಗೆದು ತಟ್ಟೆಗೆ ಹಾಕಿ, ಈಗ ಸೊಪ್ಪುಗಳನ್ನು ಅದರ ಹಸಿ ವಾಸನೆ ಹೋಗಲು ಫ್ರೈ ಮಾಡಿ, ಹಸಿ ವಾಸನೆ ಹೋದ ಮೇಲೆ ತಟ್ಟೆಗೆ ಹಾಕಿ.
- ಈಗ ಈ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ
- ರುಚಿಗೆ ತಕ್ಕ ಉಪ್ಪು, ಹಸಿ ಮೆಣಸು, ಈರುಳ್ಳಿ ಎಲ್ಲಾ ಹಾಕಿ ನುಣ್ಣನೆ ರುಬ್ಬಿ
ನಂತರ ಒಗ್ಗರಣೆ ಹಾಕಿ
ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್
ಶಬ್ದ ಮಾಡುವಾಗ ಕರಿ ಬೇವು ಹಾಕಿ, ನಂತರ ರುಬ್ಬಿದ ಚ್ಟನಿ ಹಾಕಿ, ಮಿಕ್ಸಿ ಜಾರ್‌ಗೆ
ಸ್ವಲ್ಪ ನೀರು ಹಾಕಿ ಅಲುಗಾಡಿಸಿ ಆ ನೀರನ್ನು ಕೂಡ ಸೇರಿಸಿ ಕುದಿಸಿ, ಉಪ್ಪು
ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ ದೋಸೆ ಅಥವಾ ಇಡ್ಲಿ ಜೊತೆ ಸರ್ವ್
ಮಾಡಿ.
ದೊಡ್ಡಪತ್ರೆ
ಕೆಮ್ಮು, ಉಬ್ಬಸ ಈ ಬಗೆಯ ಸಮಸ್ಯೆಗೆ ದೊಡ್ಡ ಪತ್ರೆಯನ್ನು ಮನೆಮದ್ದಾಗಿ
ಬಳಸಲಾಗುವುದು. ದೊಡ್ಡ ಪತ್ರೆ ಎಲೆಯನ್ನು ಕುಯ್ದು ಬಿಸಿ ಮಾಡಿ ಅದರ ನೀರನ್ನು
ಕುಡಿಸಲಾಗುವುದು. ಕೆಲವರು ದೊಡ್ಡಪತ್ರೆಯನ್ನು ಬಿಸಿ ಮಾಡಿ, ಅದು ಸ್ವಲ್ಪ ತಣ್ಣಗಾದ
ಮೇಲೆ (ತುಂಬಾ ಬಿಸಿ ಇರಬಾರದು) ಮಕ್ಕಳ ಎದೆಗೆ ಇಡಲಾಗುವುದು, ಹೀಗೆ ಇಡುವುದರಿಂದ
ಚಿಕ್ಕ ಮಕ್ಕಳಿಗೆ ಕಫದ ಸಮಸ್ಯೆ ಕಡಿಮೆಯಾಗುವುದು.
ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯಿದ್ದರೆ
ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯಿದ್ದರೆ ದೊಡ್ಡಪತ್ರೆಯನ್ನು ಮನೆಮದ್ದಾಗಿ
ಬಳಸಬಹುದು. ನೀವು ದೊಡ್ಡಪತ್ರೆ ಎಲೆಯನ್ನು ಬಿಸಿ ಮಾಡಿ ಆ ರಸಕ್ಕೆ ಸ್ವಲ್ಪ ಜೇನು
ಸೇರಿಸಿ ಮಿಕ್ಸ್ ಮಾಡಿ ಕುಡಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು.
ಕಜ್ಜಿಗೆ ರಾಮಬಾಣ
ದೊಡ್ಡಪತ್ರೆ ರಸವನ್ನು ಅರಿಶಿಣ ಬೆರೆಸಿ ಕಜ್ಜಿಗೆ ಬೆರೆಸಿ ಹಚ್ಚಿದರೆ ಕಜ್ಜಿ,
ತುರಿಕೆ ಕಡಿಮೆಯಾಗುವುದು.
ದೊಡ್ಡಪತ್ರೆ ಚಟ್ನಿ, ದೊಡ್ಡಪತ್ರೆ ತಂಬುಳಿ ಈ ಬಗೆಯ ಹಲವು ಬಗೆಯ ಅಡುಗೆ
ಮಾಡಲಾಗುವುದು.



Click it and Unblock the Notifications
