Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್!
ದೀಪಾವಳಿಗೆ ಬೇಕು ಈ ಸಿಹಿ.. ಬಾಯಲ್ಲಿ ಕರಗುವ ಸಾಫ್ಟ್ ಮಾಲ್ಪುವಾ! ಮಾಡೋದು ಹೇಗೆ?
ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ, ಅದು ಸಿಹಿ ತಿನಿಸುಗಳು ಮತ್ತು ಸಂಭ್ರಮದ ಪ್ರತೀಕ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಸಿಹಿ ಖಾದ್ಯಗಳಿಗೆ ಒಂದು ವಿಶೇಷ ಸ್ಥಾನವಿದೆ. ಅವುಗಳಲ್ಲಿ ಮಾಲ್ಪುವಾ ಕೂಡ ಒಂದು. ತುಪ್ಪದಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ನೆನೆಸಿದ, ಮೃದುವಾದ ಮತ್ತು ಗೋಲ್ಡ್ ಕಲರ್ ಮಾಲ್ಪುವಾ (Malpua) ಹಬ್ಬದ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.
ದಕ್ಷಿಣ ಭಾರತದಲ್ಲಿ ಹೋಳಿಗೆ ಎಷ್ಟು ಜನಪ್ರಿಯವೋ, ಉತ್ತರ ಭಾರತದಲ್ಲಿ ಗುಲಾಬ್ ಜಾಮೂನ್ ಹೇಗೋ, ಅದೇ ರೀತಿ ಮಾಲ್ಪುವಾ ಕೂಡ ಭಾರತದಾದ್ಯಂತ ಜನಪ್ರಿಯವಾಗಿರುವ ಸಿಹಿ ತಿಂಡಿಯಾಗಿದೆ. ಇದರ ಅಂಚುಗಳು ಸ್ವಲ್ಪ ಗರಿಗರಿಯಾಗಿದ್ದು, ಮಧ್ಯಭಾಗವು ನವಿರಾಗಿ ಮೃದುವಾಗಿರುತ್ತದೆ. ಈ ದೀಪಾವಳಿಗೆ (Diwali) ನಿಮ್ಮ ಮನೆಯವರನ್ನು ಸಂತೋಷಪಡಿಸಲು ವಿಶೇಷ ಮಾಲ್ಪುವಾ ರೆಸಿಪಿ (Malpua Recipe) ಇಲ್ಲಿದೆ.

ಮಾಲ್ಪುವಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮೈದಾ - 1 ಕಪ್
• ಸೂಜಿ (ರವೆ) - ½ ಕಪ್
• ತೆಂಗಿನಕಾಯಿ ಪುಡಿ - ⅓ ಕಪ್
• ಸಕ್ಕರೆ - ¾ ಕಪ್ (ಪುಡಿ ಮಾಡಿ)
• ಸೋಂಪು - 1 ಚಮಚ
• ಏಲಕ್ಕಿ ಪುಡಿ - ½ ಚಮಚ
• ಹಾಲು - ಅಗತ್ಯವಿರುವಷ್ಟು
• ತುಪ್ಪ ಅಥವಾ ಎಣ್ಣೆ - ಕರಿಯಲು
• ಕತ್ತರಿಸಿದ ಗೋಡಂಬಿ / ಬಾದಾಮಿ - ಅಲಂಕಾರಕ್ಕೆ
ಮಾಲ್ಪುವಾ ತಯಾರಿಸುವ ವಿಧಾನ ಇಲ್ಲಿದೆ
ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ, ರವೆ (ಸೂಜಿ), ತೆಂಗಿನಕಾಯಿ ಪುಡಿ, ಪುಡಿ ಸಕ್ಕರೆ, ಸೋಂಪು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸುತ್ತಾ ಗಂಟುಗಳಿಲ್ಲದಂತೆ ದಪ್ಪ ಮತ್ತು ಹರಿಯುವ ಹದದ ಹಿಟ್ಟನ್ನು ತಯಾರಿಸಿ. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಾಗಿರಬೇಕು.
ಹಿಟ್ಟು ತಯಾರಾದ ನಂತರ, ರವೆ ಮತ್ತು ಮೈದಾ ಹಾಲನ್ನು ಚೆನ್ನಾಗಿ ಹೀರಿಕೊಳ್ಳಲು ಅನುಕೂಲವಾಗುವಂತೆ ಕನಿಷ್ಠ 30 ನಿಮಿಷಗಳ ಕಾಲ ಮುಚ್ಚಿಡಿ. ಇದರಿಂದ ರವೆ ಮೃದುವಾಗುತ್ತದೆ. ಇದು ಮಾಲ್ಪುವಾದ ಮೃದುತ್ವಕ್ಕೆ ಅತ್ಯಗತ್ಯವಾಗಿದೆ.
ಸಕ್ಕರೆ ಪಾಕ ತಯಾರಿಸುವ ವಿಧಾನ: ಒಂದು ಕಪ್ ಸಕ್ಕರೆಗೆ ಅರ್ಧ ಕಪ್ ನೀರು ಸೇರಿಸಿ. ಸಕ್ಕರೆ ಕರಗಿದ ನಂತರ ಸುಮಾರು 5 ನಿಮಿಷಗಳ ಕಾಲ ಕುದಿಸಿ. ಪಾಕವು ಒಂದು ಎಳೆಯ ಹದಕ್ಕೆ ಬರಬೇಕಿಲ್ಲ, ಸ್ವಲ್ಪ ಅಂಟಂಟಾಗಿದ್ದರೆ ಸಾಕು. ತಯಾರಾದ ಪಾಕವನ್ನು ಬಿಸಿಯಾಗಿಡಿ.

ಮಾಲ್ಪುವಾ ಕರಿಯುವ ವಿಧಾನ: ಒಂದು ಅಗಲವಾದ ಬಾಣಲೆಯಲ್ಲಿ ಮಾಲ್ಪುವಾ ಕರಿಯಲು ಸಾಕಷ್ಟು ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ತಯಾರಿಸಿದ ಹಿಟ್ಟಿನಿಂದ ಒಂದು ಸಣ್ಣ ಸೌಟು ತೆಗೆದುಕೊಂಡು ನಿಧಾನವಾಗಿ ಬಾಣಲೆಯ ಮಧ್ಯದಲ್ಲಿ ಸುರಿಯಿರಿ. ಹಿಟ್ಟು ತಾನಾಗಿಯೇ ಹರಡಿ ವೃತ್ತಾಕಾರ ಪಡೆಯುತ್ತದೆ.
ಮಾಲ್ಪುವಾದ ಅಂಚುಗಳು ಗೋಲ್ಡನ್ ಬಣ್ಣಕ್ಕೆ ತಿರುಗಿ, ಮಧ್ಯದಲ್ಲಿ ನೊರೆ ಕಡಿಮೆಯಾದಾಗ ನಿಧಾನವಾಗಿ ತಿರುಗಿಸಿ. ಎರಡೂ ಕಡೆ ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಕರಿದ ಮಾಲ್ಪುವಾಗಳನ್ನು ಎಣ್ಣೆಯಿಂದ ತೆಗೆದ ತಕ್ಷಣ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ 1-2 ನಿಮಿಷಗಳ ಕಾಲ ನೆನೆಸಿ.
ಅಲಂಕಾರ ಮತ್ತು ಬಡಿಸುವ ವಿಧಾನ: ಸಕ್ಕರೆ ಪಾಕದಿಂದ ಹೊರತೆಗೆದ ಮಾಲ್ಪುವಾವನ್ನು ಒಂದು ತಟ್ಟೆಯಲ್ಲಿ ಜೋಡಿಸಿ. ಮೇಲೆ ಕತ್ತರಿಸಿದ ಗೋಡಂಬಿ, ಬಾದಾಮಿ ಮತ್ತು ಸ್ವಲ್ಪ ಪಿಸ್ತಾದಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ಮಾಲ್ಪುವಾಗಳನ್ನು ತುಪ್ಪದಲ್ಲಿ ಕರಿದರೆ ರುಚಿ ಮತ್ತು ವಾಸನೆ ಎರಡೂ ಹೆಚ್ಚಾಗುತ್ತವೆ.
ಈ ದೀಪಾವಳಿಯಂದು ನಿಮ್ಮ ಮನೆಯಲ್ಲಿ ಈ ವಿಶೇಷ ಮಾಲ್ಪುವಾವನ್ನು (Diwali Malpua) ತಯಾರಿಸಿ, ಸವಿಯಿರಿ ಮತ್ತು ಹಬ್ಬದ ಸಿಹಿಯನ್ನು ಹೆಚ್ಚಿಸಿ.



Click it and Unblock the Notifications
