Latest Updates
-
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ?
ಖರ್ಚು ಕಡಿಮೆ, ರುಚಿ ಜಾಸ್ತಿ! 1 ಕಪ್ ಕಡಲೆಬೇಳೆ ಸಾಕು.. ದೀಪಾವಳಿಗೆ ಸೂಪರ್ ಲಡ್ಡು ಮಾಡಿ
ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಹಬ್ಬದ ಸಮಯದಲ್ಲಿ ಮನೆಯಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದು ಒಂದು ಪ್ರಮುಖ ಸಂಭ್ರಮ. ಅದರಂತೆ, ನಿಮ್ಮ ಹಬ್ಬದ ಸಿಹಿತಿಂಡಿಗಳ ಪಟ್ಟಿಯಲ್ಲಿ ಲಡ್ಡು (laddu) ಇದೆಯೇ? ಸಾಮಾನ್ಯವಾಗಿ ಲಡ್ಡು ಮಾಡಲು ಬೂಂದಿಯನ್ನು ಎಣ್ಣೆಯಲ್ಲಿ ಕರಿಯಬೇಕಾಗುತ್ತದೆ. ಆದರೆ, ಈ ವಿಧಾನವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಎಣ್ಣೆಯ ಬಳಕೆಯಿಂದ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಎಣ್ಣೆಯಲ್ಲಿ ಕರಿಯದೆ ಅತ್ಯುತ್ತಮ ಲಡ್ಡು ತಯಾರಿಸಬಹುದು. ಈ ಸುಲಭ ಮತ್ತು ರುಚಿಯಾದ ಲಡ್ಡು ರೆಸಿಪಿಯನ್ನು ಈ ದೀಪಾವಳಿಗೆ (diwali) ಮಿಸ್ ಮಾಡದೇ ಟ್ರೈ ಮಾಡಿ ನೋಡಿ.
ಒಮ್ಮೆ ಈ ವಿಧಾನದಲ್ಲಿ ಲಡ್ಡು (laddoo) ಮಾಡುವುದನ್ನು ಕಲಿತರೆ, ಯಾವುದೇ ಹಬ್ಬ ಬಂದರೂ ನೀವು ಕ್ಷಣಾರ್ಧದಲ್ಲಿ ಲಡ್ಡು ತಯಾರಿಸಬಹುದು. ನಿಮಗಾಗಿ ಇಲ್ಲಿ, ಎಣ್ಣೆಯಲ್ಲಿ ಹೆಚ್ಚು ಕರಿಯುವ ತೊಂದರೆ ಇಲ್ಲದೆ, ಕೇವಲ 1 ಕಪ್ ಕಡಲೆಬೇಳೆಯನ್ನು (Chana Dal) ಬಳಸಿ ಸುಲಭವಾಗಿ ಮತ್ತು ಅತಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರುಚಿಕರ ಲಡ್ಡು ರೆಸಿಪಿಯನ್ನು ನೀಡಲಾಗಿದೆ. ಈ ದೀಪಾವಳಿಗೆ ಎಣ್ಣೆಯಲ್ಲಿ ಕರಿಯದೆ ಲಡ್ಡು (diwali special laddu) ಮಾಡುವುದು ಹೇಗೆ ಎಂದು ತಿಳಿಯಲು ಬಯಸುವಿರಾ? ಈ ಲೇಖನದಲ್ಲಿ ಲಡ್ಡು ರೆಸಿಪಿಯ ಸರಳ ವಿಧಾನವನ್ನು ತಿಳಿಸಲಾಗಿದೆ. ಒಮ್ಮೆ ಈ ರೆಸಿಪಿ ಟ್ರೈ ಮಾಡಿ. ನಿಮಗೆ ಇಷ್ಟವಾದರೆ, ಸ್ನೇಹಿತರ ಜೊತೆ ಹಂಚಿಕೊಳ್ಳಿ.

ಈ ಲಡ್ಡುಗೆ ಬೇಕಾಗುವ ಸಾಮಗ್ರಿಗಳು
• ಕಡಲೆಬೇಳೆ - 1 ಕಪ್ (ನೀರಿನಲ್ಲಿ ನೆನೆಸಿದ್ದು)
• ಎಣ್ಣೆ - ಕರಿಯಲು ಬೇಕಾಗುವಷ್ಟು
• ಸಕ್ಕರೆ - 1 ಕಪ್
• ಉಪ್ಪು - 1 ಚಿಟಿಕೆ (ರುಚಿಗೆ ತಕ್ಕಷ್ಟು)
• ಏಲಕ್ಕಿ - 3
• ಅರಿಶಿನ ಪುಡಿ - 1 ಚಿಟಿಕೆ
• ನೀರು - 1 ಕಪ್
• ತುಪ್ಪ - 2 ಸ್ಪೂನ್
• ಗೋಡಂಬಿ - 15
ಸುಲಭವಾಗಿ ಲಡ್ಡು ತಯಾರಿಸುವ ವಿಧಾನ
- ಮೊದಲು ಕಡಲೆಬೇಳೆಯನ್ನು ಎರಡು ಬಾರಿ ನೀರಿನಲ್ಲಿ ತೊಳೆಯಿರಿ. ಬಳಿಕ ನೀರು ಹಾಕಿ ಎರಡು ಗಂಟೆಗಳ ಕಾಲ ಚೆನ್ನಾಗಿ ನೆನೆಸಬೇಕು. ಎರಡು ಗಂಟೆಗಳ ನಂತರ, ನೆನೆಸಿದ ಕಡಲೆಬೇಳೆಯನ್ನು ಮಿಕ್ಸರ್ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ಇದಾದ ಬಳಿಕ ಒಂದು ಬಾಣಲೆಯನ್ನು ಒಲೆ ಮೇಲೆ ಇಡಿ. ಬೂಂದಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ, ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು, ಕುರುಕುಲು ಆಗುವವರೆಗೆ ಕರಿದು ತೆಗೆಯಿರಿ.
- ಈಗ ದೊಡ್ಡ ಮಿಕ್ಸರ್ ಜಾರ್ಗೆ ಕರಿದ ಮಿಶ್ರಣವನ್ನು ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ಮತ್ತೊಂದು ಬಾಣಲೆಯಲ್ಲಿ 1 1/4 ಕಪ್ ಸಕ್ಕರೆ, 1 ಚಿಟಿಕೆ ಉಪ್ಪು, 3 ಏಲಕ್ಕಿ ಮತ್ತು ಅರಿಶಿನ ಪುಡಿ ಸೇರಿಸಿ, 1 1/2 ಕಪ್ ನೀರನ್ನು ಹಾಕಿ.
- ಸಕ್ಕರೆ ಕರಗಿ ಒಂದು ಎಳೆ ಪಾಕ ಬಂದ ನಂತರ, ರುಬ್ಬಿದ ಮಿಶ್ರಣವನ್ನು ಸೇರಿಸಿ ಎರಡು ನಿಮಿಷಗಳ ಕಾಲ ಕಲಸಿ. ನಂತರ ಉರಿಯಿಂದ ಇಳಿಸಿ ಕೈ ಮುಟ್ಟುವಷ್ಟು ತಣ್ಣಗಾಗಲು ಬಿಡಿ. ಒಂದು ಬಾಣಲೆಯಲ್ಲಿ 2 ಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಅದರಲ್ಲಿ ಗೋಡಂಬಿಯನ್ನು ಹುರಿಯಿರಿ.
- ಹುರಿದ ಗೋಡಂಬಿಯನ್ನು ತಣ್ಣಗಾದ ಮಿಶ್ರಣಕ್ಕೆ ಸೇರಿಸಿ. ಈಗ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ಉಗುರುಬೆಚ್ಚಗಿನ ಸ್ಥಿತಿಗೆ ಬಂದಾಗ, ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಲಡ್ಡು ಆಕಾರದಲ್ಲಿ ಬಿಗಿಯಾಗಿ ಸುತ್ತಿದರೆ, ನಿಮ್ಮ ಬಾಯಲ್ಲಿ ಕರಗುವ ರುಚಿಕರ ಲಡ್ಡು ಸಿದ್ಧ.



Click it and Unblock the Notifications
