Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಸಂಜೆ ಟೀ ಜೊತೆ ಸವಿಯಿರಿ ಈ ಸ್ಪೆಷಲ್ ಮಂಡಕ್ಕಿ
ಸಂಜೆ ಸ್ನ್ಯಾಕ್ಸ್ಗೆ ಏನು ಮಾಡ್ಲಿ ಎಂದು ಯೋಚಿಸುತ್ತಿದ್ದರೆ ಪಟ್ ಅಂತ ಮಾಡಿ ಮಂಡಕ್ಕಿ, ಬಿಸಿ ಬಿಸಿ ಟೀ, ಜೊತೆಗೆ ಮಂಡಕ್ಕಿ ಎಂಥ ಒಳ್ಳೆಯ ಕಾಂಬಿನೇಷನ್ ಅಲ್ವಾ? ಖಾರ -ಹುಳಿ ಮಿಶ್ರಿತ ಮಂಡಕ್ಕಿ ತಿನ್ನುತ್ತಿದ್ದರೆ ಮನಸ್ಸಿಗೆ ತುಂಬಾನೇ ಖುಷಿಯಾಗುವುದು. ಇಲ್ಲಿ ನಾವು ಪಟ್ ಅಂತ ಮಾಡಬಹುದಾದ ಆದರೆ ಇದನ್ನು ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಖಾಲಿ ಮಾಡಬೇಕು, ಅಂಥ ಮಂಡಕ್ಕಿ ರೆಸಿಪಿ ನೀಡಿದ್ದೇವೆ.....

ಬೇಕಾಗುವ ಸಾಮಗ್ರಿ
ನೆಲಗಡಲೆ 1/4 ಕಪ್
2 ಟೊಮೆಟೊ
ಈರುಳ್ಳಿ 2
ಹಸಿ ಮೆಣಸು 2-3
ಬೆಳ್ಳುಳ್ಳಿ 8-10 ಎಸಳು
ಕಡ್ಲೆ ಬೇಳೆ 2 ಚಮಚ
ಸ್ವಲ್ಪ ಕರಿಬೇವು
ಚಿಟಿಕೆಯಷ್ಟು ಅರಿಶಿಣ ಪುಡಿ
ಎಣ್ಣೆ 2 ಚಮಚ
ಮಾಡುವ ವಿಧಾನ
ಸ್ವಲ್ಪ ದೊಡ್ಡ ಬಾಣಲೆ ಇಟ್ಟು, ಬಾಣಲೆ ಬಿಸಿಯಾದಾಗ ಎಣ್ಣೆ ಹಾಕಿ, ಕರಿ ಬೇವು ಹಾಕಿ
ನಂತರ ನೆಲಗಡಲೆ, ಕಡ್ಲೆಬೇಳೆ ಹಾಕಿ 2-3 ನಿಮಿಷ ರೋಸ್ಟ್ ಮಾಡಿ ಬಳಿ ಈರುಳ್ಳಿ, ಹಸಿ
ಮೆಣಸು ಹಾಕಿ, ಅದಾದ ಬಳಿಕ ಟೊಮೆಟೊ ಹಾಕಿ ಹಾಕಿ, ಚಿಟಿಕೆಯಷ್ಟು ಅರಿಶಿಣ ಪುಡಿ
ಸೇರಿಸಿ, ನಂತರ ಸ್ವಲ್ಪ ಉಪ್ಪು ಪುಡಿ ಸೇರಿಸಿ, ನಂತರ ಕಡ್ಲೆ ಪುರಿ ಹಾಕಿ ಮಿಕ್ಸ್
ಮಾಡಿ, ಸ್ವಲ್ಪ ನಿಂಬೆರಸ ಹಿಂಡಿದರೆ ಮಂಡಕ್ಕಿ ರೆಡಿ.
ಮಂಡಕ್ಕಿ ಬಗ್ಗೆ: ಈ ಮಂಡಕ್ಕಿಯನ್ನು ನಾನಾ ರುಚಿಯಲ್ಲಿ ಮಾಡಬಹುದು, ಇದು ಸಂಜೆ ಟೀ ಜೊತೆ ಸವಿಯಲು ಸುಲಭವಾದ ವಿಧಾನ, ಅಲ್ಲದೆ ಸಂಜೆ ಹೊಟ್ಟೆ ತುಂಬುವುದು. ಇದನ್ನು ನೀವು ಎಣ್ಣೆ ಬದಲಿಗೆ ಸ್ವಲ್ಪ ತುಪ್ಪ ಹಾಕಿಯೂ ಮಾಡಬಹುದು, ತುಪ್ಪ ಹಾಕಿದರೆ ನೀವು ತಕ್ಷಣವೇ ತಿನ್ನಬೇಕು, ಇಲ್ಲಿ ನೀಡಿರುವ ರೆಸಿಪಿ ಕೂಡ ಅಷ್ಟೇ ಆವಾಗ ಮಾಡಿ ಆಗಲೇ ತಿನ್ನಬೇಕು.
- ತೆಂಗಿನೆಣ್ಣೆ ರುಚಿ ಇಷ್ಟಪಡುವುದಾದರೆ ತೆಂಗಿನೆಣ್ಣೆ ಹಾಕಿದರೆ ಆ ಫ್ಲೇವರ್ ಜೊತೆ ಸವಿಯಲು ಇನ್ನೂ ಸೂಪರ್ ಆಗಿರುತ್ತದೆ.ಖಾರ, ಹುಳಿ ಮಿಶ್ರಿತ ಮಂಡಕ್ಕಿ ಎಲ್ಲರಿಗೂ ಇಷ್ಟವಾಗುವುದು, ನೀವು ಹಸಿ ಮೆಣಸು ಬೇಡ ಎಂದರೆ ಮೆಣಸಿನ ಪುಡಿ ಹಾಕಬಹುದು.
- ಇನ್ನು ಒಂದೆರಡು ದಿನ ಇಡುವುದಾದರೆ ಈರುಳ್ಳಿ ಹಾಕಬೇಡಿ, ಟೊಮೆಟೊ ಸೇರಿಸಬಹುದು, ಅಥವಾ ಟೊಮೆಟೊ, ಈರುಳ್ಳಿ ಹಾಕದೆ ಮಂಡಕ್ಕಿ ಮಾಡಿದರೆ ನೀವು ವಾರದವರೆಗೆ ಇಟ್ಟು ಸವಿಯಬಹುದು.
- ಈಗ ಹಸಿ ಮಾವಿನಕಾಯಿ ಸಿಗುತ್ತದೆ, ಅದನ್ನು ಬೇಕಿದ್ದರೆ ತುರಿದು ಹಾಕಬಹುದು.
- ನೆಲಗಡಲೆ, ಕಡ್ಲೆಬೇಳೆ ನಿಮಗೆ ತುಂಬಾ ಬೇಕಿದ್ದರೆ ತುಂಬಾ ಹಾಕಬಹುದು, ಕರಿಬೇವು ಜೊತೆ ರೆಡಿಯಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.



Click it and Unblock the Notifications
