Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಗೋಧಿ ಹಿಟ್ಟಿನಿಂದ 10 ನಿಮಿಷದಲ್ಲಿ ಮಾಡಿ ಧಾರವಾಡ ಪೇಡ..! ಏನೆಲ್ಲಾ ಬೇಕು?
ಹಬ್ಬಗಳು ಆರಂಭಗೊಂಡಿವೆ. ದಸರಾ, ದೀಪಾವಳಿ ಒಂದರ ಹಿಂದೆ ಒಂದರಂತೆ ಬರುತ್ತದೆ. ಹಬ್ಬ ಎಂದ ಮೇಲೆ ಅಲ್ಲಿ ಸಿಹಿ ತಿಂಡಿ ಇರಲೇಬೇಕು. ಯಾವುದಾದರು ಒಂದು ತಿಂಡಿ ಮಾಡಿದ ಬಳಿಕವೇ ಹಬ್ಬ ಪೂರ್ಣವಾಗೋದು. ಆದ್ರೆ ಹಬ್ಬದಲ್ಲಿ ಇರುವಷ್ಟು ಕೆಲಸ ಬೇರೆ ದಿನ ಇರುವುದಿಲ್ಲ. ಹೀಗಾಗಿ ಹಬ್ಬದಲ್ಲಿ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಯಾವ ತಿಂಡಿ ಮಾಡಬಹುದು ಎಂಬುದು ನಿಮ್ಮ ಆಲೋಚನೆಯಾಗಿರುತ್ತೆ. ಆದ್ರೆ ಅಷ್ಟು ಸುಲಭವಾಗಿ ಯಾವ ತಿಂಡಿ ಮಾಡಬಹುದು?
ಹೌದು ಹಬ್ಬದಲ್ಲಿ ಸುಲಭವಾಗಿ ಯಾವ ತಿಂಡಿ ಮಾಡಬಹುದು ಎಂಬುದಕ್ಕೆ ನಿಮ್ಮ ಬಳಿ ಉತ್ತರ ಇರುವುದಿಲ್ಲ. ಆದ್ರೆ ಮನೆ ಮಂದಿಯಲ್ಲ ಇಷ್ಟ ಪಟ್ಟು ಸವಿಯಬಹುದಾದ ತಿಂಡಿ ಮಾಡಬೇಕು ಎಂಬುದು ನಿಮ್ಮ ಮನದಲ್ಲಿರುತ್ತೆ. ಅಂತಹ ಆಲೋಚನೆ ನಿಮ್ಮಲ್ಲೂ ಇದ್ದರೆ ನಾವಿಂದು ಹೇಳುವ ಈ ತಿಂಡಿ ಮಾಡಿ. ಸುಲಭವಾಗಿ ಗೋಧಿ ಹಿಟ್ಟಿನ ಮೂಲಕ ಧಾರವಾಡ ಪೇಡ ಮಾಡಿ ಸವಿದು ನೋಡಿ.

ಧಾರವಾಡ ಪೇಡ ಅಂದ್ರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಮಕ್ಕಳಂತು ಈ ಪೇಡವನ್ನ ಒಮ್ಮೆ ಸವಿದರೆ ಸಾಕು ಇದರ ರುಚಿಗೆ ಫಿದಾ ಆಗುತ್ತಾರೆ. ಧಾರವಾಡದಲ್ಲಿ ಈ ಪೇಡವಂತು ತುಂಬಾನೆ ಫೇಮಸ್, ಬೆಳಗಾವಿಯಲ್ಲಿ ಸಿಗುವ ಕುಂದದಂತೆ ಧಾರವಾಡದ ಈ ಪೇಡ ಕೂಡ ವಿಶ್ವದಲ್ಲಿ ಹೆಸರಾದ ಸಿಹಿ ತಿಂಡಿ.
ಹಾಗಾದ್ರೆ ಮನೆಯಲ್ಲಿ ಧಾರವಾಡ ಪೇಡ ಮಾಡುವುದು ಹೇಗೆ? ಧಾರವಾಡ ಪೇಡ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧಾರವಾಡ ಪೇಡ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು
- ಏಲಕ್ಕಿ ಪುಡಿ
- ತುಪ್ಪ
- ಸಕ್ಕರೆ
- ಹಾಲಿನ ಪುಡಿ
ಧಾರವಾಡ ಪೇಡ ಮಾಡುವುದು ಹೇಗೆ?
ಒಂದು ಮಿಕ್ಸಿ ಜಾರ್‌ಗೆ ಅರ್ಧ ಕಪ್ ಸಕ್ಕರೆ ಹಾಗೂ ಅರ್ಧ ಸ್ಪೂನ್ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ. ಇದು ನುಣ್ಣಗೆ ಪುಡಿಯಾಗಬೇಕು. ಈಗ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಒಂದು ಕಪ್ ಗೋಧಿ ಗಿಟ್ಟು ಹಾಕಿಕೊಂಡು ಫ್ರೈ ಮಾಡಬೇಕು. ಸಣ್ಣ ಉರಿಯಲ್ಲಿ 3 ನಿಮಿಷ ಹುರಿದುಕೊಳ್ಳಬೇಕು. ಈಗ ಇದಕ್ಕೆ 2 ಸ್ಪೂನ್ ತುಪ್ಪ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. 3 ನಿಮಿಷ ಬಳಿಕ ಮತ್ತೊಂದು ಸ್ಪೂನ್ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಹುರಿದುಕೊಂಡ ಬಳಿಕ ಕಾಲು ಕಪ್ ಹಾಲಿನ ಪುಡಿಯನ್ನು ಸಹ ಹಾಕಿಕೊಂಡು ಫ್ರೈ ಮಾಡಿ. ಈ ಪುಡಿ ಕಂದು ಅರಶಿಣ ಬಣ್ಣಕ್ಕೆ ತಿರುಗಿದಾಗ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ನಂತರ ಈ ಮಿಶ್ರಣ ತಣ್ಣಗಾಗಲು ಹಾಗೆಯೇ ಬಿಡಿ. ಈಗ ಇದಕ್ಕೆ ಮೊದಲು ರುಬ್ಬಿಕೊಂಡಿದ್ದ ಸಕ್ಕರೆ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅಷ್ಟು ಸಕ್ಕರೆ ಪುಡಿ ಹಾಕಿಕೊಳ್ಳಬೇಡಿ, 1 ಸ್ಪೂನ್ ಪುಡಿ ಹಾಗೆ ಬದಿಗೆ ಇಟ್ಟುಕೊಂಡಿರಿ. ಗಂಟುಗಳು ಇಲ್ಲದಂತೆ ಈ ಪುಡಿಯನ್ನು ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟು ಉಂಡೆ ಮಾಡಲು ಬರುವಂತಿರಬೇಕು ಒಂದು ವೇಳೆ ಗಟ್ಟಿಯಾಗಿದೆ ಎಂದು ಎನಿಸಿದರೆ 1 ಸ್ಪೂನ್ ತುಪ್ಪ ಹಾಕಿಕೊಂಡು ಮತ್ತೆ ಕಲಸಿಕೊಳ್ಳಿ. ಈಗ ಸಣ್ಣ ಸಣ್ಣ ಉಂಡೆ ಕಟ್ಟಿಕೊಂಡು ಇಟ್ಟುಕೊಂಡು. ಮೊಟ್ಟೆ ಆಕಾರದಲ್ಲಿ ಅಲ್ಲದೆ ಚಂಪಾಕಲಿಯ ಆಕಾರದಲ್ಲಿ ಈ ಪೇಡ ಮಾಡಿಕೊಳ್ಳಿ. ಈಗ ಮೊದಲು ಎಗೆದು ಇಟ್ಟುಕೊಂಡ ಸಕ್ಕರೆ ಪುಡಿಯನ್ನು ಒಂದು ತಟ್ಟೆಗೆ ಹಾಕಿ ಅದರಲ್ಲಿ ಈ ಉಂಡೆ ಮಾಡಿದ ಪೇಡಗಳ ಹಾಕಿ ಸಕ್ಕರೆ ಪುಡಿ ಚೆನ್ನಾಗಿ ಹಿಡಿಯುವಂತೆ ಅದರ ಮೇಲೆ ಹೊರಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಧಾರವಾಡ ಪೇಡ ರೆಡಿಯಾಗುತ್ತದೆ. ಬಹಳ ಸುಲಭವಾಗಿ ಮಾಡಬಹುದಾದ ಒಂದು ರುಚಿಕರ ತಿಂಡಿ ಇದಾಗಿದೆ. ನೀವು ಸಹ ಹಬ್ಬದಲ್ಲಿ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications