Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಡಾಬಾ ಶೈಲಿಯ ಪನೀರ್ ಕರಿ ಮನೆಯಲ್ಲೇ ಮಾಡಿ ಸವಿದು ನೋಡಿ: ಇಲ್ಲಿದೆ ರೆಸಿಪಿ
ನಮ್ಮಲ್ಲಿ ಹೆಚ್ಚಿನವರು ಢಾಬಾ ಊಟವನ್ನು ಬಹಳ ಇಷ್ಟಪಡುತ್ತಾರೆ. ಅಲ್ಲಿ ಸಿಗುವಂತಹ ಖಾದ್ಯಗಳಿಗೆ ಹೆಚ್ಚಿನ ಪದಾರ್ಥಗಳ ಬಳಸಿ ರುಚಿ ರುಚಿಯಾಗಿ ಮಾಡುತ್ತಾರೆ, ಅದ್ರೆಲ್ಲೂ ರೊಟ್ಟಿಗಳು, ವಿವಿಧ ಬಗೆಯ ಗ್ರೇವಿಗಳು, ಪರೋಟಾ, ಚಪಾತಿ ಹೀಗೆ ಹತ್ತು ಹಲವು ಖಾದ್ಯಗಳು ಬಹಳ ರುಚಿಯಾಗಿರುವುದು ಸವಿದಿರಬಹುದು. ಹಾಗೆ ಹಲವು ರೀತಿಯ ಗ್ರೇವಿಗಳ ಸವಿಯೋಕೆ ನೀವು ಇಷ್ಟಪಡುತ್ತೀರಿ.
ಡಾಬಾದಲ್ಲಿ ಸಿಗುವಂತಹ ಗ್ರೇವಿಗಳ ಪೈಕಿ ಪನೀರ್ ಗ್ರೇವಿ ಎಲ್ಲರಿಗೂ ಇಷ್ಟವಾಗುತ್ತೆ. ಬಹಳ ರುಚಿ ರುಚಿಯಾಗಿ ಪನೀರ್ ಗ್ರೇವಿಯನ್ನು ರೊಟ್ಟಿ, ಪಲವ್, ಪರೋಟಾ, ವೆಚ್ ಬಿರಿಯಾನಿಯೊಂದಿಗೆ ಸವಿಯಲು ಕೂಡ ಬಳಸಬಹುದು. ಅಲ್ಲಿನ ರುಚಿಗೆ ನೀವು ಮತ್ತೆ ಮತ್ತೆ ಡಾಬಾದಲ್ಲಿ ಈ ಪನೀರ್ ಗ್ರೇವಿ ಸವಿಯಲು ಇಷ್ಟಪಡುತ್ತೀರಿ.

ಪನೀರ್ ಇಷ್ಟಪಡದವರು ಸಹ ಒಮ್ಮೆ ಈ ಡಾಬಾ ಶೈಲಿಯ ಪನೀರ್ ಕರಿ ಎಂದಿಗೂ ಮರೆಯುತ್ತಿಲ್ಲ. ನೀವು ಡಾಬಾ ಶೈಲಿಯ ಊಟ ತಿಂಡಿ ಖಾದ್ಯಗಳ ಮನೆಯಲ್ಲಿ ಮಾಡಿ ಸವಿದರೆ ನೀವು ಮತ್ತೆ ಮತ್ತೆ ಮಾಡಿ ಸವಿಯುವುದು ಖಚಿತ. ಹಾಗಾದ್ರೆ ಈ ಡಾಬಾ ಶೈಲಿಯ ಪನೀರ್ ಗ್ರೇವಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಡಾಬಾ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡಾಬಾ ಶೈಲಿಯ ಪನೀರ್ ಗ್ರೇವಿ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೋ
- ಈರುಳ್ಳಿ
- ಗರಂ ಮಸಾಲೆ
- ಕೊತ್ತಂಬರಿ ಸೊಪ್ಪು
- ಜೀರಿಗೆ ಪುಡಿ
- ಪನೀರ್
- ಎಣ್ಣೆ
- ಧನಿಯ ಪುಡಿ
- ಉಪ್ಪು
- ಅರಿಶಿನ
- ಪಲಾವ್ ಎಲೆ
- ಲವಂಗ
- ದಾಲ್ಚಿನ್ನಿ
- ಕಸೂರಿ ಮೆಂತ್ಯ
- ಮೊಸರು
- ಖಾರದ ಪುಡಿ
- ಜೀರಿಗೆ
ಡಾಬಾ ಶೈಲಿಯ ಪನೀರ್ ಕರಿ ಮಾಡುವುದು ಹೇಗೆ?
ಮೊದಲು 200 ಗ್ರಾಮ್ ಪನೀರ್ ಅನ್ನು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಅರ್ಧ ಚಮಚ ದನಿಯಾ ಪುಡಿ, ಕಾಲು ಚಮಚ ಗರಂ ಮಸಾಲ, ಅರ್ಧ ಚಮಚ ಮೆಣಸಿನ ಪುಡಿ, ಕಾಲು ಚಮಚ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕತ್ತರಿಸಿದ ಪನೀರ್ ತುಂಡುಗಳನ್ನು ಅದರಲ್ಲಿ ಸೇರಿಸಿ ಮತ್ತು ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಮಸಾಲೆ ಪನೀರ್‌ಗೆ ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಿ.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಪನೀರ್ ತುಂಡುಗಳನ್ನು ಮಸಾಲೆಗಳೊಂದಿಗೆ ಬೆರೆಸಿ 2 ನಿಮಿಷ ಹುರಿಯಿರಿ. ಸ್ವಲ್ಪ ಬಾಡಿಕೊಳ್ಳುವಂತೆ ಹುರಿದುಕೊಳ್ಳಿ. ನಂತರ ಈ ಹುರಿದ ಪನೀರ್ ಅನ್ನು ತೆಗೆದು ಬದಿಗಿಟ್ಟುಕೊಳ್ಳಿ. ನಂತರ ಒಲೆಯ ಮೇಲೆ ಪ್ಯಾನ್‌ನಲ್ಲಿ ಉಳಿದ ಎಣ್ಣೆಯಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ 2 ನಿಮಿಷ ಹುರಿದುಕೊಳ್ಳಿ. ಬಳಿಕ ಅದಕ್ಕೆ ಟೊಮೆಟೋ ಹಾಕಿ ಮೃದುವಾಗುವವರೆಗೂ ಫ್ರೈ ಮಾಡಿ. ನಂತರ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.
ಈಗ ಇನ್ನೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಏಲಕ್ಕಿ, ಲವಂಗ, ದಾಲ್ಚಿನ್ನಿ, ಪಲಾವ್ ಎಲೆಗಳ ಹಾಕಿ ಹುರಿಯಿರಿ. ಈಗ ಈ ಮೊದಲು ಪೇಸ್ಟ್ ಮಾಡಿದ್ದ ಈರುಳ್ಳಿ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಕಿದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬೇಯಲು ಬಿಡಿ.
ಬಳಿಕ ಇದಕ್ಕೆ 1 ಚಮಚ ದನಿಯಾ ಪುಡಿ, ಅರ್ಧ ಚಮಚ ಹುರಿದ ಜೀರಿಗೆ ಪುಡಿ, 2 ಚಮಚ ಖಾರದ ಪುಡಿ, ಒಂದು ಚಿಟಿಕೆ ಅರಿಶಿನ ಮತ್ತು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಮಸಾಲೆ ಸೇರಿಸಿದ ಬಳಿಕ ಇದಕ್ಕೆ 4 ಚಮಚ ಮೊಸರು ಸೇರಿಸಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಹಾಗೆ ನಿಮಗೆ ಬೇಕಾದಷ್ಟು ನೀರು ಸಹ ಹಾಕಿ ಮಿಕ್ಸ್ ಮಾಡಿ ಕಾಯಲು ಬಿಡಿ.
ಕೊನೆಯಲ್ಲಿ ಹುರಿದುಕೊಂಡಿದ್ದ ಪನೀರ್ ತುಂಡುಗಳನ್ನು ಇದಕ್ಕೆ ಸೇರಿಸಿಕೊಂಡು
ಮಿಕ್ಸ್ ಮಾಡಿ. ಮಧ್ಯಮ ಉರಿಯಲ್ಲಿ 3 ನಿಮಿಷ ಬಿಡಿ. ಕೊನೆಯಲ್ಲಿ
ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಸೇರಿಸಿ ಚೆನ್ನಾಗಿ ಮಿಕ್ಸ್
ಮಾಡಿ ಒಲೆ ಆಫ್ ಮಾಡಿದರೆ ಡಾಬಾ ಶೈಲಿಯ ಪನೀರ್ ಕರಿ ಸಿದ್ದವಾಗುತ್ತೆ.



Click it and Unblock the Notifications
