Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
20 ರೂ. ಕಲ್ಲಂಗಡಿಯಿಂದ ಮನೆಯಲ್ಲೇ ಮಾಡಿ ಐಸ್‌ಕ್ರೀಮ್..! ಎಷ್ಟು ಸುಲಭ ಗೊತ್ತಾ?
ಬೇಸಿಗೆಯ ಈ ಉರಿ ಬಿಸಿಲಿನಲ್ಲಿ ಐಸ್ ಕ್ರೀಮ್ ಸವಿಯೋಕೆ ಯಾರಿಗೆ ಇಷ್ಟವಿರಲ್ಲ ಹೇಳಿ. ಅದ್ರಲ್ಲೂ ಮಕ್ಕಳಂತು ಐಸ್ ಕ್ರೀಮ್ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರು ಸುರಿಸುತ್ತಾರೆ. ಮಧ್ಯಾಹ್ನದ ಬಿಸಿಲಿನಲ್ಲಿ ಅಥವಾ ರಾತ್ರಿ ಊಟದ ಬಳಿಕ ಐಸ್ ಕ್ರೀಮ್ ಸವಿಯಲು ಎಲ್ಲರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ತಣ್ಣನೆಯ ಅನುಭವಕ್ಕಾಗಿ ಐಸ್ ಕ್ರೀಮ್ ಮೊರೆ ಹೋಗೋದು ಸಾಮಾನ್ಯ.
ಹೀಗಾಗಿ ಬೇಸಿಗೆಯ ಸಮಯದಲ್ಲಿ ಹಣ್ಣು ಹಾಗೂ ಐಸ್ ಕ್ರಿಮ್ ಅಂಗಡಿಗಳಲ್ಲಿ ಜನ ಸಾಲುಗಟ್ಟಿ ನಿಂತಿರುತ್ತಾರೆ. ಈಗಂತು ವಿಧ ವಿಧದ ಐಸ್‌ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಹಣ್ಣುಗಳಿಂದ ಹಿಡಿದು ಎಲ್ಲಾ ಮಾದರಿಯ ಐಸ್ ಕ್ರೀಮ್ ಸವಿಯಬಹುದು. ಹಾಗೆ ದುಬಾರಿ ಬೆಲೆಯ ಐಸ್ ಕ್ರೀಮ್‌ಗಳು ಕೂಡ ನೋಡಬಹುದು.
ಆದ್ರೆ ನೀವು ಎಂದಾದ್ರು ಮನೆಯಲ್ಲೇ ಐಸ್ ಕ್ರೀಮ್ ಮಾಡಿದ್ದೀರಾ? ಕೆಲವರು ಮನೆಯಲ್ಲಿ ಐಸ್ ಕ್ರೀಮ್ ಮಾಡಲು ಮುಂದಾಗಿ ಯಶಸ್ವಿಯೂ ಆಗಿರಬಹುದು. ಹಾಗೆ ಮತ್ತೆ ಕೆಲವರು ಐಸ್ ಕ್ರೀಮ್ ಮಾಡಲು ಹೋಗಿ ಫಲ ನೀಡದೆ ಇರುವುದು ಕೂಡ ನೋಡಬಹುದು. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ಕುಳಿತು ಐಸ್ ಕ್ರೀಮ್ ಮಾಡಿಕೊಳ್ಳುವ ಕುರಿತು ತಿಳಿದುಕೊಳ್ಳೋಣ.
ಅದರಲ್ಲೂ ಕಲ್ಲಂಗಡಿ ಹಣ್ಣಿನಿಂದ ಸುಲಭವಾಗಿ ಐಸ್ ಕ್ರೀಮ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಕಲ್ಲಂಗಡಿ ಹಣ್ಣಿನ ಐಸ್ ಕ್ರೀಮ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಐಸ್ ಕ್ರೀಮ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಲ್ಲಂಗಡಿ ಐಸ್ ಕ್ರೀಮ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಲ್ಲಂಗಡಿ ಹಣ್ಣು
- ಏಲಕ್ಕಿ ಪುಡಿ
- ಸಕ್ಕರೆ
- ನಿಂಬೆ ಹಣ್ಣಿನ ರಸ
- ಉಪ್ಪು
- ಸಿಲ್ವರ್ ಪೇಪರ್
ಕಲ್ಲಂಗಡಿ ಐಸ್ ಕ್ರೀಮ್ ಮಾಡುವ ಸುಲಭದ ವಿಧಾನ ಇಲ್ಲಿದೆ
ಮೊದಲು ಕಲ್ಲಂಗಡಿ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಸಾಂಬಾರ್ ಮಾಡಲು ಆಲೂಗಡ್ಡೆ ಹೆಚ್ಚಿಕೊಳ್ಳುವಂತಹ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಕಪ್ಪು ಬೀಜಗಳನ್ನು ತೆಗೆದುಕೊಂಡರೆ ಉತ್ತಮ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹೆಚ್ಚಿರುವ ಎಲ್ಲಾ ಕಲ್ಲಂಗಡಿಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ಎಷ್ಟು ಬೇಕೋ ಅಷ್ಟು ಸಕ್ಕರೆ, ಉಪ್ಪು, ಏಲಕ್ಕಿ ಪುಡಿ, ನಿಂಬೆ ಹಣ್ಣಿನ ರಸ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
ಚೆನ್ನಾಗಿ ರುಬ್ಬಿದ ಬಳಿಕ ಜರಡಿ ಹಿಡಿದು ಸೋಸಿಕೊಂಡು ಕಲ್ಲಂಗಡಿ ರಸವನ್ನು ಬೇರೆ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ನಿಮ್ಮ ಮನೆಯಲ್ಲಿ ಕ್ಯಾಂಡಿ ಮಾಡಲು ಅಚ್ಚು ಇದ್ದರೆ ಅದಕ್ಕೆ ಈ ಕಲ್ಲಂಗಡಿ ರಸ ಹಾಕಿಕೊಳ್ಳಿ. ಒಂದು ವೇಳೆ ಅಚ್ಚು ಇಲ್ಲ ಎಂದಾದರೆ ಮನೆಯಲ್ಲಿರುವ ಸ್ಟೀಲ್ ಲೋಟಕ್ಕೆ ಹಾಕಿಕೊಳ್ಳಿ. ನಂತರ ಈ ಲೋಟಗಳನ್ನು ಸಿಲ್ವರ್ ಪೇಪರ್‌ನಲ್ಲಿ ಚೆನ್ನಾಗಿ ಮುಚ್ಚಿಕೊಳ್ಳಬೇಕು.
ನಂತರ ಸಿಲ್ವರ್ ಕವರ್‌ನ ಮೇಲೆ ಸಣ್ಣದಾಗಿ ಹರಿದು ಅದಕ್ಕೆ ಐಸ್ ಕ್ರೀಮ್‌ಗೆ ಕಡ್ಡಿ ಹಾಕಬೇಕು. ನಂತರ ಈ ಲೋಟವನ್ನು ಫ್ರಿಡ್ಜ್‌ನ ಫ್ರೀಜರ್‌ನಲ್ಲಿ ಇಡಬೇಕು. ಒಂದು ರಾತ್ರಿ ಪೂರ್ತಿ ಇದನ್ನು ಫ್ರೀಜರ್‌ನಲ್ಲೇ ಇಡಬೇಕು. ಈಗ ಮಾರನೆ ದಿನ ಈ ಲೋಟವನ್ನು ತೆಗೆದು ಆ ಲೋಟವನ್ನು ನೀರಿನಲ್ಲಿ ಇಡಬೇಕು. ಇದು ಅಂಟಿಕೊಂಡಿರುವ ಐಸ್‌ಕ್ರೀಮ್ ಬಿಟ್ಟುಕೊಳ್ಳುವಂತೆ ಮಾಡುತ್ತೆ. ನಂತರ ತೆಗೆದು ಸವಿಯಲು ನೀಡಬಹುದು.
ಇದನ್ನು ಮಕ್ಕಳಿಗೆ ನೀಡಿದ್ರೆ ಇದ್ಟಪಟ್ಟು ತಿನ್ನುವ ಜೊತೆಗೆ ಹೊರಗಿನ ತಿಂಡಿಯಿಂದ ಮುಕ್ತರಾಗಿಸಬಹುದು. ಮಾಡೋದು ಕೂಡ ತುಂಬಾನೆ ಸುಲಭ.



Click it and Unblock the Notifications

