Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಾಮೂಲಿ ಅಲ್ಲ ರುಚಿ ರುಚಿಯ ಖಾರ ಚಪಾತಿ ಇದು: ಮಾಡೋದು ಕೂಡ ಬಹಳ ಸುಲಭ!
ಬೆಳಗ್ಗೆ ತಿಂಡಿಗೆ ಚಪಾತಿ ಮಾಡಿ ಸವಿಯೋದು ಕಾಮನ್, ಅದ್ರಲ್ಲೂ ಹಲವರಿಗೆ ಸುಲಭವಾಗಿ ಮಾಡಿ ಸವಿಯುವ ಖಾದ್ಯಗಳು, ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಚಪಾತಿ ಆರೋಗ್ಯಕ್ಕೂ ಬಹಳ ಉತ್ತಮ ಆಗಿರೋದ್ರಿಂದ ಎಲ್ಲರು ಸವಿಯಲು ಮುಂದಾಗುತ್ತಾರೆ. ಚಪಾತಿಯಲ್ಲು ಹಲವು ರೀತಿಯಲ್ಲಿ ಸವಿಯುವ ಬಗೆ ಇದೆ. ಇಂತಹ ಚಪಾತಿಯಲ್ಲಿ ನಾವಿಂದು ಹೊಸ ರೀತಿಯ ಚಪಾತಿ ಮಾಡುವ ಕುರಿತು ತಿಳಿಯೋಣ.
ಅದ್ರಲ್ಲೂ ಚಪಾತಿಯಲ್ಲಿ ನಾವಿಂದು ಖಾರ ಚಪಾತಿ ಮಾಡುವ ಕುರಿತು ತಿಳಿಯೋಣ. ಚಪಾತಿ ರುಚಿಯಾಗಿ ಇರುವುದಿಲ್ಲ, ಗೋಧಿ ಹಿಟ್ಟು ಮಾತ್ರ ಹಾಕಿ ಮಾಡುವುದರಿಂದ ಚಪಾತಿ ಸವಿಯಲು ಯಾವುದಾದರು ಖಾದ್ಯ ಬೇಕಾಗುತ್ತದೆ. ಆದ್ರೆ ನಾವಿಂದು ಸುಲಭವಾಗಿ ಮಾಡಿ ಸವಿಯಬಹುದಾದ ಖಾರ ಚಪಾತಿ ಕುರಿತು ತಿಳಿಯೋಣ.

ಖಾರ ಚಪಾತಿಯು ಎಲ್ಲರು ಒಷ್ಟಪಟ್ಟು ಸವಿಯುತ್ತಾರೆ. ಕೆಲ ಮಸಾಲೆಗಳ ಹಾಕಿ ಈ ಚಪಾತಿ ರೆಡಿ ಮಾಡಬಹುದು. ಹಾಗಾದ್ರೆ ಈ ಖಾರ ಚಪಾತಿ ಮಾಡುವುದು ಹೇಗೆ? ಈ ಚಪಾತಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈ ಖಾರ ಚಪಾತಿ ಎಲ್ಲರಿಗೂ ರುಚಿ ತರುವ ಇಷ್ಟ ತಿಂಡಿಯಾಗಲಿದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ಸವಿದು ನೋಡಿ.
ಖಾರ ಚಪಾತಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಗೋಧಿ ಹಿಟ್ಟು
- ಉಪ್ಪು
- ಅರಶಿಣ
- ಖಾರದ ಪುಡಿ
- ಕರಿಬೇವು
- ಜೀರಿಗೆ ಪುಡಿ
- ಧನಿಯಾ ಪುಡಿ
- ಬಿಳಿ ಎಳ್ಳು
ಖಾರ ಚಪಾತಿ ಮಾಡುವ ವಿಧಾನವೇನು?
ಮೊದಲಿಗೆ ಪ್ಲೇಟ್‌ಗೆ 2 ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ನಂತರ ಇದಕ್ಕೆ ಕೆಂಪು ಖಾರದ ಪುಡಿ, ಅರಶಿಣ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಬಿಳಿ ಎಳ್ಳು, ಸಣ್ಣದಾಗಿ ಕತ್ತರಿಸಿಕೊಂಡ ಕರಿಬೇವು ಹಾಕಿ ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.
ಚಪಾತಿ ಹಿಟ್ಟು ಹದವಾಗಿ ಮೃದುವಾಗಿ ಬರಬೇಕು. ಅಷ್ಟರವರೆಗೂ ನಾದಿಕೊಂಡು ಮೃದುವಾಗಿಸಿ. ಕೊನೆಯಲ್ಲಿ 1 ಸ್ಪೂನ್ ಎಣ್ಣೆಯನ್ನು ಹಿಟ್ಟಿನ ಮೇಲೆ ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ಮತ್ತೆ ಈ ಹಿಟ್ಟನ್ನು ಮಿಕ್ಸ್ ಮಾಡಿಕೊಂಡು ಮತ್ತೆ ಹದ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ ಹದ ಮಾಡಿ.
ಈಗ ಹಿಟ್ಟನ್ನು ತೆಗೆದುಕೊಂಡು ಒಂದು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಬೇಕು. ನಂತರ ಲಟ್ಟಿಸಿಕೊಳ್ಳಲು ಮುಂದಾಗಬೇಕು. ನಂತರ ಸಾಮಾನ್ಯ ಚಪಾತಿಯಂತೆಯೇ ಕಾವಲಿಯಲ್ಲಿ ಹಾಕಿ ಕಾಯಿಸಿಕೊಳ್ಳಿ. ಎಣ್ಣೆ ಹಾಕಿಕೊಂಡು ಚೆನ್ನಾಗಿ ಕಾಯಿಸಿಕೊಂಡರೆ ನಿಮ್ಮ ಮುಂದೆ ಖಾರ ಚಪಾತಿ ರೆಡಿಯಾಗುತ್ತದೆ.
ಈ ಚಪಾತಿ ಸಾಮಾನ್ಯ ಚಪಾತಿಗಿಂತಲೂ ಸುಲಭವಾಗಿ ಮಾಡುವ, ಹಾಗೆ ರುಚಿ ರುಚಿಯಾಗಿರಲಿದೆ. ಈ ಚಪಾತಿ ಸವಿಯಲು ಬೇರೆ ಯಾವುದೇ ಚಟ್ನಿಯೂ ಬೇಕಾಗಿಲ್ಲ ಇದು ಖಾರ ಖಾರವಾಗಿ ರುಚಿ ರುಚಿಯಾಗಿ ಇರಲಿದೆ.



Click it and Unblock the Notifications
