Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲೇ ರುಚಿಕರ ರಸಂ ಪೌಡರ್ ಮಾಡುವುದು ಹೇಗೆ..? ಇಲ್ಲಿದೆ ನೋಡಿ ರೆಸಿಪಿ..!
ಪ್ರತಿಯೊಬ್ಬರ ಮನೆಯಲ್ಲೂ ರಸಂ ನಿತ್ಯದ ಊಟದ ರೆಸಿಪಿಯಾಗಿರುತ್ತೆ. ಮಾಂಸಹಾರವಾಗಿರಲಿ ಇಲ್ಲವೆ ಸಸ್ಯಹಾರವೇ ಆಗಿರಲಿ ರಸಂ ಇಲ್ಲದೆ ಊಟ ಪೂರ್ಣವಾಗುವುದೇ ಇಲ್ಲ ಎನ್ನುವವರೂ ಇದ್ದಾರೆ. ಅದೇ ರೀತಿ ವಿವಿಧಿ ರೀತಿಯ ರಸಂ ಮಾಡುವ ವಿಧಾನವೂ ನಮ್ಮ ನಡುವೆ ಇದೆ.
ಅದರಲ್ಲೂ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ರಸಂ ಪೌಡರ್ಗಳು ಸಿಗುತ್ತವೆ. ಎಲ್ಲವೂ ಕೃತಕ ರುಚಿ ನೀಡುತ್ತವೆ ಎನಿಸಿದರು ಅನಿವಾರ್ಯವಾಗಿ ಜನರು ಅವುಗಳ ಮೊರೆ ಹೋಗುತ್ತಾರೆ. ಜೊತೆಗೆ ಅದರಿಂದ ಬರುವ ಸುವಾಸನೆಗೆ ಕೆಲವರು ಮಾರುಹೋಗಿರುತ್ತಾರೆ.
ಆದರೆ ಇಂತಹ ಮಾರುಕಟ್ಟೆಯಲ್ಲಿ ಸಿಗುವ ರಸಂ ಪೌಡರ್ ಬಳಕೆ ಅಷ್ಟು ಆರೋಗ್ಯಕರ ಅಭ್ಯಾಸವಲ್ಲ. ಹೀಗಾಗಿ ನೀವು ಮನೆಯಲ್ಲೇ ಸುಲಭವಾಗಿ ರಸಂ ಪೌಡರ್ ಮಾಡಿಕೊಳ್ಳಬಹುದು. ಅದರಲ್ಲೂ ದಕ್ಷಿಣ ಭಾರತದ ಖಾದ್ಯಗಳ ಪಟ್ಟಿಯಲ್ಲಿ ರಸಂ ಅತ್ಯಂತ ರುಚಿಕರ ಆಹಾರವಾಗಿದೆ. ಹಾಗಾಗಿ ನಾವು ಮನೆಯಲ್ಲೇ ರಸಂ ಪೌಡರ್ ಮಾಡುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಪೆಪ್ಪರ್ ರಸಂ, ದಾಲ್ ರಸಂ, ಬೆಳ್ಳುಳ್ಳಿ ರಸಂ ಹೀಗೆ ಹಲವು ರುಚಿಗಳಲ್ಲಿ ಇದನ್ನು ತಯಾರಿಸಬಹುದು. ಜ್ವರ, ನೆಗಡಿಗಳಿಗೂ ರಸಂ ಉತ್ತಮ ಆಹಾರ. ಹಾಗಾದರೆ ಈ ರಸಂ ಪೌಡರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ರುಚಿಕರ ರಸಂ ಪೌಡರ್ ಮಾಡುವುದು ಹೇಗೆ ಎಂಬುದನ್ನು ನೋಡಿ.
ಅಗತ್ಯವಿರುವ ವಸ್ತುಗಳು:
- ಬೇಳೆ - 1 ಕಪ್
- ಕೊತ್ತಂಬರಿ ಬೀಜಗಳು - 1/2 ಕಪ್
- ಮೆಣಸಿನಕಾಯಿ - 10
- ಹುಣಸೆ ಹುಳಿ - 100 ಗ್ರಾಂ
- ಅರಿಶಿನ ಪುಡಿ - 1 ಚಮಚ
- ಸಾಸಿವೆ - 1 ಚಮಚ
- ಜೀರಿಗೆ - 1/2 ಕಪ್
- ಮೆಣಸು - 1/2 ಕಪ್
- ಬೆಲ್ಲ ಒಂದು ಉಂಡೆ
- ಕಲ್ಲು ಉಪ್ಪು - 2 ಚಮಚ
- ಕರಿಬೇವಿನ ಎಲೆಗಳು
ಪಾಕವಿಧಾನ:
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದು ಬಿಸಿಯಾದಾಗ ಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಣಸು, ಮೆಂತ್ಯ, ಹುಣಸೆ ಹುಳಿ ಮತ್ತು ಕಲ್ಲು ಉಪ್ಪನ್ನು ಒಂದರ ನಂತರ ಒಂದರಂತೆ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ.
ಗಮನಿಸಿ : ಇಂಗು ಉಂಡೆಯಾಗಿದ್ದರೆ ರುಬ್ಬಿ ನಂತರ ಹುರಿದುಕೊಳ್ಳಿ ಅಥವಾ ಪುಡಿಯಾಗಿದ್ದರೆ ನೇರವಾಗಿ ಹುರಿದುಕೊಳ್ಳಿ.
ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ, ಅವುಗಳನ್ನು ಮಿಕ್ಸಿಂಗ್ ಜಾರ್ಗೆ ಹಾಕಿ ಮತ್ತು ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಗಮನಿಸಿ: ಹುಣಸೆಹಣ್ಣು ಮಿಕ್ಸಿ ಜಾರ್ನಲ್ಲಿ ಸುಲಭವಾಗಿ ರುಬ್ಬುವುದಿಲ್ಲ ಆದ್ದರಿಂದ ಸಂಪೂರ್ಣವಾಗಿ ಪುಡಿಯಾಗುವವರೆಗೆ ಪದೇ ಪದೇ ರುಬ್ಬಿಕೊಳ್ಳಿ. ಕೊನೆಗೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪನ್ನು ಹುರಿದು ಪುಡಿಗೆ ಸೇರಿಸಿ. ಕರಿಬೇವನ್ನು ಸೇರಿಸುವ ಮೊದಲು ನಿಮ್ಮ ಕೈಗಳಿಂದ ಪುಡಿಮಾಡಿ. ಇಷ್ಟು ಮೊಡಿದರೆ ನಿಮ್ಮ ಮುಂದೆ ರಸಂ ಪೌಡರ್ ಸಿದ್ದವಾಗಿರುತ್ತದೆ.
ಆದರೆ ಇದನ್ನು ಎಷ್ಟು ಜೋಪಾನವಾಗಿಡುತ್ತೀರೋ ಅಷ್ಟು ಸಮಯ ಬಳಕೆಗೆ ಬರುತ್ತದೆ. ಅಂದರೆ ಗಾಜಿನ ಡಬ್ಬ, ಇಲ್ಲವೆ ಪ್ಲಾಸ್ಟಿನ್ ಡಬ್ಬವನ್ನು ಚೆನ್ನಾಗಿ ತೊಳೆದು ಒಣಗಿಸಿ ಅದರಲ್ಲಿ ಹಾಕಿ ಗಾಳಿಯಾಡದಂತೆ ಗಟ್ಟಿಯಾಗಿ ಮುಚ್ಚಳ ಹಾಕಿಟ್ಟರೆ ಬಹಳ ಕಾಲ ಉಪಯೋಗಿಸಬಹುದು.



Click it and Unblock the Notifications
