Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಿಕನ್, ಮಟನ್ ಬೋರ್ ಆಗಿದ್ಯಾ? ತಲೆ ಮಾಂಸ ಪೆಪ್ಪರ್ ಫ್ರೈ ಮಾಡಿ.. ಪೀಸ್ ಪೀಸ್‌ಗೆ ಮಸಾಲೆ
ಇದು ನಾನ್ ವೆಜ್ ಪ್ರಿಯರಿಗಾಗಿ! ಈ ರೀತಿ ಮಟನ್ ಫ್ರೈ ಮಾಡಿದ್ರೆ ತುಂಬಾ ಟೇಸ್ಟಿಯಾಗಿರುತ್ತದೆ. ಪೀಸ್ ಪೀಸ್‌ಗೆ ಮಸಾಲೆ ಹೋಗುತ್ತೆ. ಹೌದು, ಯಾವಾಗಲೂ ಮಟನ್ ತಿಂದೂ ಬೇಜಾರ್ ಆಗಿದ್ಯಾ? ಹಾಗಿದ್ರೆ, ತಪ್ಪದೇ ತಲೆ ಮಾಂಸ ಪೆಪ್ಪರ್ ಫ್ರೈ (Mutton head Pepper Fry) ಒಮ್ಮೆ ಟ್ರೈ ಮಾಡಿ. ಇದು ಮಟನ್ ಪ್ರಿಯರಿಗೆ ಫೇವರೆಟ್ ಫುಡ್. ಹಾಗಿದ್ರೆ, ತಲೆ ಮಾಂಸ ಪೆಪ್ಪರ್ ಫ್ರೈಗೆ ಬೇಕಾಗುವ ಪದಾರ್ಥಗಳು ಮತ್ತು ತಲೆ ಮಾಂಸ ಪೆಪ್ಪರ್ ಫ್ರೈ ಮಾಡುವುದು ಹೇಗೆ ಅಂತ ತಿಳಿಯೋಣ ಬನ್ನಿ.
ವೀಕೆಂಡ್ ಅಂದರೆ ನಾನ್‌ವೆಜ್ ಪ್ರಿಯರಿಗೆ ವಿಶೇಷ ದಿನ. ಪ್ರತಿ ವೀಕೆಂಡ್ ಏನಾದರೂ ಹೊಸತನ್ನು ಟ್ರೈ ಮಾಡಬೇಕೆಂದು ಬಯಸುವವರಿಗೆ ತಲೆ ಮಾಂಸದ ಪೆಪ್ಪರ್ ಫ್ರೈ ಅತ್ಯುತ್ತಮ ಆಯ್ಕೆ. ಮಟನ್ ತಿಂದು ಬೇಜಾರಾದವರಿಗೆ ಇದೊಂದು ರುಚಿಕರವಾದ ಬದಲಾವಣೆಯ ಅನುಭವ ನೀಡುತ್ತದೆ. ಅನ್ನದೊಂದಿಗೆ ಸವಿಯಲು ಸಖತ್ ಟೇಸ್ಟಿ ಆಗಿರುತ್ತದೆ. ಇದೊಂದು ಸುಲಭವಾದ ರೆಸಿಪಿ ಆಗಿದೆ. ವೀಕೆಂಡ್ ಮನೆಯಲ್ಲಿ ಡಿಫರೆಂಟ್ ಆಗಿ ನಾನ್‌ವೆಜ್ ರೆಸಿಪಿ ಮಾಡಲು ಪ್ಲಾನ್ ಇದ್ದರೆ, ಈ ತಲೆ ಮಾಂಸ ಪೆಪ್ಪರ್ ಫ್ರೈ (Mutton head Pepper Fry Recipe) ಪರ್ಫೆಕ್ಟ್ ಟ್ರೀಟ್.

ತಲೆ ಮಾಂಸ ಪೆಪ್ಪರ್ ಫ್ರೈಗೆ ಬೇಕಾಗುವ ಪದಾರ್ಥಗಳು
• ತಲೆ ಮಾಂಸ
• ಈರುಳ್ಳಿ
• ಟೊಮೆಟೊ
• ಶುಂಠಿ
• ಬೆಳ್ಳುಳ್ಳಿ
• ಸೋಂಪು
• ಜೀರಿಗೆ
• ಮೆಣಸು
• ಲವಂಗ
• ಎಣ್ಣೆ
• ತೊಗಟೆ
• ನಕ್ಷತ್ರ ಹೂವು
• ಅರಿಶಿನ ಪುಡಿ
• ಮೆಣಸಿನ ಪುಡಿ
• ಮಟನ್ ಮಸಾಲ
• ಕರಿಬೇವು
• ಕೊತ್ತಂಬರಿ ಸೊಪ್ಪು
• ಅಗತ್ಯಕ್ಕೆ ತಕ್ಕಷ್ಟು ನೀರು

ತಲೆ ಮಾಂಸ ಪೆಪ್ಪರ್ ಫ್ರೈ ಮಾಡುವ ವಿಧಾನ
ಈಗ ತಲೆ ಮಾಂಸ ಪೆಪ್ಪರ್ ಫ್ರೈ ಮಾಡುವುದು ಹೇಗೆ ಅಂತ ಹಂತ ಹಂತವಾಗಿ ತಿಳಿಯೋಣ. ಮೊದಲಿಗೆ ತಲೆ ಮಾಂಸವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದನ್ನು ಕುಕ್ಕರ್‌ಗೆ ಹಾಕಿ. ಬಳಿಕ ಜೀರಿಗೆ, ಈರುಳ್ಳಿ, ಟೊಮೆಟೊ, ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅಗತ್ಯವಿರುವಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ 2 ಸೀಟಿ ಬರುವವರೆಗೆ ಬೇಯಿಸಿ. ಈಗ ಒಂದು ಬಾಣಲೆಯನ್ನು ಸ್ಟವ್ ಮೇಲಿಡಿ. ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸೋಂಪು, ಜೀರಿಗೆ, ಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇವೆಲ್ಲವೂ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಬೇಯಿಸಿದ ತಲೆ ಮಾಂಸದಿಂದ ಮೂಳೆಗಳನ್ನು ಬೇರ್ಪಡಿಸಿ. ಮಾಂಸವನ್ನು ಪ್ರತ್ಯೇಕವಾಗಿ ತೆಗೆದಿಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾಗುತ್ತಿದ್ದಂತೆ ಸೋಂಪು, ಜೀರಿಗೆ ಮತ್ತು ಸಣ್ಣ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ರುಬ್ಬಿದ ಮಸಾಲಾ ಪೇಸ್ಟ್ ಅನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮೆಣಸಿನ ಪುಡಿ ಮತ್ತು ಮಟನ್ ಮಸಾಲವನ್ನು ಹಾಕಿ. ಮಸಾಲೆಗಳು ಚೆನ್ನಾಗಿ ಬೆರೆತು ಸುವಾಸನೆ ಬರುವವರೆಗೆ ಹುರಿಯಿರಿ.

ಇದಾದ ಬಳಿಕ ಬೇಯಿಸಿದ ತಲೆ ಮಾಂಸವನ್ನು ಮಸಾಲೆಯೊಂದಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ. ಈಹ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಷ್ಟು ಮಾಡಿದರೆ, ರುಚಿಕರವಾದ ತಲೆ ಮಾಂಸ ಪೆಪ್ಪರ್ ಫ್ರೈ ಸವಿಯಲು ಸಿದ್ಧ. ವೀಕೆಂಡ್ ಸ್ಪೆಷಲ್‌ಗೆ ಇದೊಂದು ವಿಭಿನ್ನ ಮತ್ತು ರುಚಿಕರವಾದ ಆಯ್ಕೆ.



Click it and Unblock the Notifications
