Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಸಿ ತೆಂಗಿನಕಾಯಿಯ ಬೆಣ್ಣೆಯಂತಹ ಸ್ವೀಟ್ ಮಾಡಿ! ಬಹಳ ಸುಲಭದ ತಿಂಡಿ!
ಮನೆಯಲ್ಲಿ ಶುಭ ಕಾರ್ಯಗಳಿದ್ದಾಗ ಇಲ್ಲವೆ ಯಾರಾದರು ಅತಿಥಿಗಳು ಬಂದಾಗ, ಹಬ್ಬಗಳಿದ್ದಾಗ ಯಾವುದಾದರೊಂದು ತಿಂಡಿ ಮಾಡಿ ಸವಿಯೋದು ನೋಡಬಹುದು. ಸಿಹಿ ತಿಂಡಿ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಈ ಹಬ್ವಗಳ ಸೀಸನ್‌ನಲ್ಲಿ ಒಂದಾದರು ಸಿಹಿ ತಿಂಡಿ ಮಾಡಿ ಸವಿಯೋದು ನೋಡಬಹುದು.
ಆದ್ರಲ್ಲೂ ಸುಲಭವಾಗಿ ಮಾಡುವಂತಹ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ಸಿಹಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ನಿಮಗೆ ಕೆಲವೇ ವಸ್ತುಗಳಿಂದ ಮಾಡುವ ತೆಂಗಿನಕಾಯಿ ಸಿಹಿ ಬಗ್ಗೆ ಗೊತ್ತಿದ್ಯಾ?. ತೆಂಗಿನಕಾಯಿ ಬಳಸಿ ಹಲವು ಸಿಹಿ ತಿಂಡಿ ಮಾಡುವುದು ನಿಮಗೆ ತಿಳಿದಿರಬಹುದು. ಆದ್ರೆ ವಿಭಿನ್ನ ರುಚಿ ನೀಡುವ ಹೊಸ ರೀತಿ ತಿಂಡಿ ಮಾಡುವ ಕುರಿತು ನಾವಿಲ್ಲಿ ಹೇಳಲಿದ್ದೇವೆ.

ಒಂದೇ ಒಂದು ತೆಂಗಿನಕಾಯಿ ಇದ್ದರೆ ಸಾಕು ಈ ಸಿಹಿ ತಿಂಡಿಯನ್ನು ಮಾಡಬಹುದು. ಹಬ್ಬದ ದಿನದಲ್ಲಿ ವಿಶೇಷ ದಿನಗಳಲ್ಲಿ, ಪಿತೃಪಕ್ಷಕ್ಕೆ ಹಾಗೆ ಯಾವುದೇ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಈ ಸಿಹಿ ತಿಂಡಿ ಪರ್ಫೆಕ್ಟ್ ಆಗಿರಲಿದೆ. ಹಾಗಾದ್ರೆ ಈ ಸಿಹಿ ತಿಂಡಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ತೆಂಗಿನ ಕಾಯಿ ಸ್ವೀಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತೆಂಗಿನ ಕಾಯಿ ಸ್ವೀಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹಸಿ ತೆಂಗಿನಕಾಯಿ
- ತುಪ್ಪ
- ಹಾಲಿನ ಪುಡಿ
- ಹಾಲು
- ಡ್ರೈ ಫ್ರೂಟ್ಸ್
ತೆಂಗಿನ ಕಾಯಿ ಸ್ವೀಟ್ ಮಾಡುವ ವಿಧಾನವೇನು?
ಮೊದಲು ಅರ್ಧ ತೆಂಗಿನ ಕಾಯಿ ಅಥವಾ ಪೂರ್ಣ ತೆಂಗಿನಕಾಯಿ ತೆಗೆದುಕೊಂಡು ಅದನ್ನು ಕತ್ತರಿಸಿ ತೆಗೆದುಕೊಳ್ಳಿ, ತುರಿದುಕೊಳ್ಳಬೇಡಿ. ಹಾಗೆ ಕತ್ತರಿಸಿಕೊಂಡ ಬಳಿಕ ಅದರಲ್ಲಿನ ಕಪ್ಪು ಭಾಗವನ್ನು ನೀವು ತೆಗೆದುಕೊಳ್ಳಬಹುದು. ಇಲ್ಲವೆ ಹಾಗೆಯೂ ಬಳಸಬಹುದು. ಕತ್ತರಿಸಿಕೊಂಡ ಕಾಯಿಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ನೀರನ್ನು ಹಾಕದೆ ರುಬ್ಬಿಕೊಂಡರೆ ಇದು ಪೌಡರ್ ರೀತಿ ಬರಬೇಕು.
ತರಿ ತರಿಯಾಗಿ ರುಬ್ಬಿಕೊಂಡ ಬಳಿಕ ಇದಕ್ಕೆ ಅರ್ಧ ಕಪ್ ಹಾಲು ಹಾಕಿಕೊಂಡು ಮತ್ತೆ ನುಣ್ಣೆಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಬಿಸಿಯಾಗಲು ಬಿಟ್ಟು ನಂತರ ರುಬ್ಬಿದ ತೆಂಗಿನ ಕಾಯಿ ಪೇಸ್ಟ್ ಅನ್ನು ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷ ಬಿಟ್ಟು ನಂತರ ಇದಕ್ಕೆ 1 ಸ್ಪೂನ್ ತುಪ್ಪ ಹಾಕಿಕೊಂಡು ಮತ್ತೆ ಫ್ರೈ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಅರ್ಧ ಕಪ್ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ಕರಗಲು ಆರಂಭವಾದಾಗ ನೀರು ಬಿಡಲಿದೆ. ನಂತರ 5 ಸ್ಪೂನ್ ಹಾಲಿನ ಪುಡಿ ಇದ್ದರೆ ಹಾಕಿಕೊಳ್ಳಿ. ಹಾಗೆ ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. (ಹಾಲಿನ ಪುಡಿ ಹಾಕದಿದ್ದರೂ ನಡೆಯುತ್ತೆ) ನಂತರ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿಕೊಂಡು ಒಲೆ ಆಫ್ ಮಾಡಿ ಈ ಮಿಶ್ರಣವನ್ನು ತಟ್ಟೆಗೆ ಹಾಕಿ ಸಮವಾಗಿ ತಟ್ಟಿಕೊಳ್ಳಿ. ಮೇಲೆ ಡ್ರೈ ಫ್ರೂಟ್ಸ್ ಹಾಕಿಕೊಂಡು ಚೆನ್ನಾಗಿ ತಟ್ಟಿ ತಣ್ಣಗಾಗಲು ಬಿಡಿ. 2 ಗಂಟೆಯಾದರು ಬಿಟ್ಟು ನಂತರ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತೆಂಗಿನ ಕಾಯಿ ಸ್ವೀಟ್ ರೆಡಿಯಾಗುತ್ತೆ. ಬರ್ಫಿ ರೀತಿಯ ಈ ಸಿಹಿ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಹಬ್ಬದ ದಿನದಲ್ಲಂತು ಬಾಯಲ್ಲಿ ನೀರು ತರಲಿಸಲಿದೆ.



Click it and Unblock the Notifications
