Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಘಮ ಘಮ ಎನ್ನುವಂತಹ ದಾಲ್ ಸಾಂಬಾರ್ ಕುಕ್ಕರ್ನಲ್ಲಿ ಮಾಡಿ..! ಊಟಕ್ಕೆ ಅದ್ಭುತ
ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನಮಗೆ ಯಾವುದಾದರೊಂದು ಸಾಂಬಾರ್ ಇರಬೇಕು. ತರಕಾರಿ ಸಾಂಬಾರ್ ಸವಿಯುವುದು ಅಂದ್ರೆ ಅದರ ಮಜವೇ ಬೇರೆ. ಊಟದ ಜೊತೆಗೆ ಬಾಯಿ ರುಚಿ ಹೆಚ್ಚಿಸಲು ತರಕಾರಿ ಸಾಂಬಾರ್ ಬಹಳವೇ ಮುಖ್ಯ. ಹಾಗೆ ಎಲ್ಲರಿಗೂ ದಾಲ್ ಸಾಂಬಾರ್, ದಾಲ್ ಕರಿ, ದಾಲ್ ತಡ್ಕಾ ಸವಿಯುವುದ ಅಂದ್ರೆ ಇಷ್ಟವಾಗುತ್ತೆ.
ದಾಲ್ ಆರೋಗ್ಯಕ್ಕೂ ಬಹಳ ಉತ್ತಮ. ನಾವು ಹೆಚ್ಚಾಗಿ ಡಾಬಾ ಗಳಲ್ಲಿ ರಸ್ಟೋರೆಂಟ್, ಹೋಟೆಲ್ಗಳಲ್ಲಿ ದಾಲ್ನಿಂದ ಮಾಡಿರುವ ಹಲವು ರೀತಿ ಖಾದ್ಯಗಳ ಸವಿದಿರುತ್ತೇವೆ. ಅದರಂತೆ ನಾವು ಮನೆಯಲ್ಲೂ ದಾಲ್ನಿಂದ ಮಾಡುವ ಹಲವು ಖಾದ್ಯ ಮಾಡಿರುತ್ತೇವೆ. ಆದ್ರೆ ನಾವಿಂದು ಸ್ಪೆಷಲ್ ಆಗಿ ಕುಕ್ಕರ್ನಲ್ಲಿ ದಾಲ್ ಸಾಂಬಾರ್ ಮಾಡುವುದನ್ನು ನೋಡೋಣ.

ಘಮ ಘಮಿಸುವಂತೆ ಕುಕ್ಕರ್ನಲ್ಲಿ ದಾಲ್ ಸಾಂಬಾರ್ ಮಾಡುವುದು ಬಹಳ ಸುಲಭ. ಅನ್ನಕ್ಕೆ ಈ ದಾಲ್ ಸಾಂಬಾರ್ ಮಾಡಿದ್ರೆ ಅದರ ರುಚಿಗೆ ಒಂಚೂರು ಹೆಚ್ಚು ಊಟ ಮಾಡೋದು ಪಕ್ಕ. ಹಾಗಾದ್ರೆ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಘಮ ಘಮಿಸುವ ದಾಲ್ ಸಾಂಬಾರ್ ಮಾಡಿದ್ರೆ ಬಾಯಿ ರುಚಿಯ ಅದ್ಭುತ ಊಟ ಮಾಡಬಹುದು. ಹಾಗಾದ್ರೆ ಈ ದಾಲ್ ಸಾಂಬಾರ್ ಕುಕ್ಕರ್ನಲ್ಲಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದಾಲ್ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ದಾಲ್ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಕಾಳು
- ತೊಗರಿ ಬೇಳೆ- 1 ಕಪ್
- ಅರಶಿನ
- ಟೊಮೆಟೋ
- ಸಾಂಬಾರ್ ಈರುಳ್ಳಿ
- ಎಣ್ಣೆ
- ಸಾಂಬಾರ್ ಪುಡಿ
- ಖಾರದ ಪುಡಿ
- ಧನಿಯಾ
- ಸಾಸಿವೆ
- ಜೀರಿಗೆ
- ಕರಿಬೇವು
- ಕೊತ್ತಂಬರಿ
- ಬೆಳ್ಳುಳ್ಳಿ
- ಉಪ್ಪು
ದಾಲ್ ಸಾಂಬಾರ್ ಮಾಡುವುದು ಹೇಗೆ?
ಒಂದು ಬೌಲ್ಗೆ ತೊಗರಿ ಬೇಳೆ ಹಾಗೂ ಒಂದು ಕಪ್ ಹೆಸರು ಕಾಳು ಹಾಕಿಕೊಂಡು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ನೀರು ಹಾಕಿ ನೀರು ಬಿಸಿಯಾದ ಬಳಿಕ ಈ ನೆನೆಸಿಟ್ಟ ಬೇಳೆ ಹಾಗೂ ಕಾಳನ್ನು ಇದಕ್ಕೆ ಹಾಕಿಕೊಳ್ಳಿ. ಅನಂತರ ಇದಕ್ಕೆ ಒಂದು ಹೆಚ್ಚಿಕೊಂಡಿರುವ ಈರುಳ್ಳಿ, 2 ಟೊಮೆಟೋ, ಅರಶಿಣ, ಎಣ್ಣೆ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ಅಥವಾ 3 ಸೀಟಿ ಹೊಡೆಯಲು ಬಿಡಿ.
ಮೂರು ಸೀಟಿ ಹೊಡೆದ ಬಳಿಕ ಮುಚ್ಚಳ ತೆರೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ಬೇಳೆ ಗಟ್ಟಿಯಾಗಿದ್ದರೆ ಅದನ್ನು ಮೆತ್ತಗಾಗುವಂತೆ ಪುಡಿ ಪುಡಿ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟು ಇದಕ್ಕೆ ಸಾಂಬಾರ್ ಪುಡಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ.
ಸಾಂಬಾರ್ ಕುದಿಯಲು ಆರಂಭಿಸಿದಾಗ ಹುಣಸೆ ಹುಳಿಯ ನೀರನ್ನು ತೆಗೆದು ಇದಕ್ಕೆ ಹಾಕಿಕೊಳ್ಳಿ. ಈ ಸಮಯದಲ್ಲಿ ಒಂದು ಗ್ಲಾಸ್ ನೀರು ಸಹ ಹಾಕಿಕೊಂಡಿ ತಿರುಗಿಸಿಕೊಂಡು ಕುದಿಯಲು ಬಿಡಿ. 3 ನಿಮಿಷ ಕುದಿಬಂದ ಬಳಿಕ ಸಣ್ಣ ಉರಿಯಲ್ಲಿ ಇಟ್ಟು ಇನ್ನೊಂದು ಕಡೆ ಒಗ್ಗರಣೆ ಮಾಡಿಕೊಳ್ಳಿ.
ಸಣ್ಣ ಪಾತ್ರೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಸಣ್ಣದಾಗಿ ಹೆಚ್ಚಿದ ಸಾಂಬಾರ್ ಈರುಳ್ಳಿ, ಕರಿಬೇವು ಹಾಕಿಕೊಂಡು ಒಗ್ಗರಣೆ ಮಾಡಿ ಇದಕ್ಕೆ ಹಾಕಿ ಒಂದು ಸುತ್ತು ತಿರುಗಿಸಿ. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯಲ್ಲಿ ದಾಲ್ ಸಾಂಬಾರ್ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
