Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಡಾಬಾ ಸ್ಟೈಲ್ನ ಮೊಟ್ಟೆ ಗ್ರೇವಿ ಬಾಯಲ್ಲಿ ನೀರು ತರಿಸಲಿದೆ...ಮಾಡುವ ವಿಧಾನ ಇಲ್ಲಿದೆ!
ನೀವು ನಾನ್ ವೆಬ್ ಪ್ರಿಯರಾಗಿದ್ದರೆ ಮೊಟ್ಟೆಯಿಂದ ಮಾಡಿ ಸವಿಯುವ ಹಲವು ಖಾದ್ಯಗಳು ಎಷ್ಟವಾಗುತ್ತವೆ. ಮೊಟ್ಟೆ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಆಗಿರೋದ್ರಿಂದ ಎಲ್ಲರು ಸವಿಯಬಹುದು. ಹಾಗೆ ಮೊಟ್ಟೆಯಿಂದ ಹಲವು ರೀತಿಯ ಖಾದ್ಯಗಳನ್ನು ಥಟ್ ಎಂದು ರೆಡಿ ಮಾಡಬಹುದು. ಹಾಗೆ ಮೊಟ್ಟೆಯಿಂದ ಮಾಡುವಂತಹ ಎಲ್ಲಾ ಖಾದ್ಯಗಳು ಬಹಳ ರುಚಿಕರವಾಗಿರಲಿದೆ. ಹೀಗಾಗಿ ಮೊಟ್ಟೆಯ ರೆಸಿಪಿಯನ್ನು ಎಲ್ಲರು ಇಷ್ಟಪಡುತ್ತಾರೆ.
ನಾವಿಂದು ಡಾಬಾಗಳಲ್ಲಿ ಮಾಡುವಂತಹ ರುಚಿ ರುಚಿಯ ಮೊಟ್ಟೆ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಸಹ ಡಾಬಾಗಳಿಗೆ ಹೋದಾಗ ಅಲ್ಲಿ ರೊಟ್ಟಿ, ಪರೋಟ, ಚಪಾತಿ, ಊಟದೊಂದಿಗೆ ಸವಿಯಲು ನೀಡುವ ಮೊಟ್ಟೆ ಗ್ರೇವಿ ಸವಿಯಲು ಬಹಳ ರುಚಿ ನೀಡಲಿದೆ. ಹೀಗಾಗಿ ಹಲವರಿಗೆ ಡಾಬಾದಲ್ಲಿ ಊಟ ಮಾಡುವುದು ಅಂದ್ರೆ ಬಾಯಲ್ಲಿ ನೀರು ತರಿಸುತ್ತದೆ.

ಡಾಬಾ ಸ್ಟೈಲ್ನಲ್ಲಿ ನೀವು ಬಯಸುವಂತಹ ರುಚಿಯ ಈ ಮೊಟ್ಟೆ ಗ್ರೇವಿಯನ್ನು ನಾವಿಂದು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ. ಈ ರೀತಿ ಮೊಟ್ಟೆ ಗ್ರೇವಿಯನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ನೋಡೋಣ. ಹಾಗಾದ್ರೆ ಈ ಮೊಟ್ಟೆ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡಾಬಾ ಸ್ಟೈಲ್ನ ಈ ಮೊಟ್ಟೆ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಟ್ಟೆ
- ಈರುಳ್ಳಿ
- ಟೊಮೆಟೋ
- ಅರಶಿಣ
- ಉಪ್ಪು
- ಎಣ್ಣೆ
- ಖಾರದ ಪುಡಿ
- ಚಕ್ಕೆ
- ಲವಂಗ
- ತೆಂಗಿನ ಕಾಯಿ ತುರಿ
- ಏಲಕ್ಕಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ದನಿಯಾ
- ಕಾಳು ಮೆಣಸಿನ ಪುಡಿ
ಡಾಬಾ ಸ್ಟೈಲ್ನ ಈ ಮೊಟ್ಟೆ ಗ್ರೇವಿ ಮಾಡುವುದು ಹೇಗೆ?
ಮೊದಲು ಮೊಟ್ಟೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಸ್ವಲ್ಪ ಆಳವಾಗಿ ಕತ್ತರಿಸಿಕೊಳ್ಳಿ. ಆದರೆ ತುಂಡು ಮಾಡಬೇಡಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಮೊಟ್ಟೆಗಳ ಅದರ ಒಳಗೆ ಹಾಕಿ ಅರಶಿಣ, ಉಪ್ಪು, ಖಾರದ ಪುಡಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದರೆ ಮೊಟ್ಟೆ ಸ್ವಲ್ಪ ಗಟ್ಟಿಯಾಗಲಿದೆ.
ನಂತರ ಈಗ ಮೊಟ್ಟೆಯನ್ನು ತೆಗೆದಿಟ್ಟುಕೊಳ್ಳಿ. ಅನಂತರ ಅದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿಕೊಂಡು ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ 2 ರಿಂದ ಮೂರು ನಿಮಿಷ ಫ್ರೈ ಮಾಡಿ. ಈ ನಡುವೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿ, ಲವಂಗ, ಚಕ್ಕೆ ಹಾಕಿ ತರಿ ತರಿಯಾಗಿ ರುಬ್ಬಿದ ಬಳಿಕ 2 ಟೊಮೆಟೋ ಕೂಡ ಇದಕ್ಕೆ ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಂಡು ಈ ಪೇಸ್ಟ್ ತೆಗೆದಿಟ್ಟುಕೊಳ್ಳಿ.
ಒಲೆ ಮೇಲಿನ ಈರುಳ್ಳಿ ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಬಿಟ್ಟು ಬಳಿಕ ಅರಶಿಣ, ದನಿಯಾ ಪುಡಿ, ಕಾಳು ಮೆಣಸಿನ ಪುಡಿ, ಖಾರದ ಪುಡಿ ಹಾಕಿ ಫ್ರೈ ಮಾಡಿ. ತಳ ಹಿಡಿಯದಂತೆ ಮಾಡಲು ಸ್ವಲ್ಪ ನೀರು ಹಾಕಿ. 1 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಈಗ ಈ ಬಾಣಲೆಗೆ ರುಬ್ಬಿಕೊಂಡಿದ್ದ ಮಸಾಲ ಪೇಸ್ಟ್ ಕೂಡ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರು ಸಹ ಹಾಕಿಕೊಳ್ಳಿ.
ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದ ಬಳಿಕ ಬೇಕಿದ್ದ ಮತ್ತೆ ನೀರು ಹಾಕಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ. ಅನಂತರ ಈ ಮೊದಲು ಫ್ರೈ ಮಾಡಿಕೊಂಡಿದ್ದ ಮೊಟ್ಟೆಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಡಾಬಾ ಸ್ಟೈಲ್ನ ಮೊಟ್ಟೆ ಗ್ರೇವಿ ಸಿದ್ದವಾಗಲಿದೆ.



Click it and Unblock the Notifications