Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಡಾಬಾ ಸ್ಟೈಲ್‌ನ ಚೋಲೆ ಭಟುರಾ ಮಾಡೋದು ಹೇಗೆ? ಇಲ್ಲಿದೆ ಎರಡೂ ರೆಸಿಪಿ!
ನೀವು ಬ್ರೇಕ್‌ಫಾಸ್ಟ್‌ಗೆ ಯಾವುದಾದರು ರುಚಿ ರುಚಿ ಖಾದ್ಯ ಮಾಡಿ ಸವಿಯಲು ಮುಂದಾದರು ಹೆಚ್ಚಾಗಿ ಹೋಟೆಲ್ ರುಚಿಯ ಯಾವುದಾದರು ತಿಂಡಿ ಮಾಡುವ ಆಲೋಚನೆ ಇದ್ದರೆ ಈ ಚೋಲೆ ಭಟುರಾ ಟ್ರೈ ಮಾಡಿ. ಉತ್ತರ ಭಾರತದಲ್ಲಿ ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಈ ಚೋಲೆ ಭಟುರಾ ಬಹಳ ಫೇಮಸ್. ಈಗ ಎಲ್ಲಾ ಹೋಟೆಲ್ , ರೆಸ್ಟೋರೆಂಟ್‌ನಲ್ಲೂ ಚೋಲೆ ಭಟುರಾ ಬಹ:ಳ ಫೇಮಸ್ ಖಾದ್ಯ.
ಆದ್ರೆ ನೀವು ಎಂದಾದ್ರು ಈ ಚೋಲರ ಭಟುರಾ ಮನೆಯಲ್ಲಿ ಮಾಡಿ ಸವಿದಿದ್ದೀರಾ? ಹೋಟೆಲ್ ರುಚಿಯಲ್ಲಿ ಈ ಚೋಲೆ ಭಟುರಾವನ್ನ ಮನೆಯಲ್ಲೇ ಮಾಡಿ ಸವಿಯಬಹುದು. ಅದರಲ್ಲೂ ಮಕ್ಕಳಿಗ ಸೇರಿ ಮನೆ ಮಂದಿಗೆಲ್ಲಾ ಇದು ಇಷ್ಟವಾಗುತ್ತೆ. ಹಾಗೆ ಎಲ್ಲರು ಭಟುರಾ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುವಂತೆ ನೀವು ಮಾಡಬಹುದು.

ಹಾಗಾದ್ರೆ ಈ ಚೋಲೆ ಭಟುರಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚೋಲೆ ಭಟುರಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ 2 ಕಪ್
- ಚಿರೋಟಿ ರವೆ 1/4 ಕಪ್
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ 2 ಚಮಚ
- ಮೊಸರು 1/4 ಚಮಚ
- ಸಕ್ಕರೆ 1 ಚಮಚ
- ಬೇಕಿಂಗ್ ಸೋಡಾ 1/4 ಚಮಚ
- ಕಾಬೂಲ್ ಕಡಲೆ 1 ಕಪ್
- ಕರಿವೇವು
- ದಾಲ್ಚಿನ್ನಿ
- ಏಲಕ್ಕಿ
- ಲವಂಗ
- ಉಪ್ಪು
- ಎಣ್ಣೆ
- ಈರುಳ್ಳಿ
- ಬೆಳ್ಳುಳ್ಳಿ ಶುಂಠಿ ಪೇಸ್ಟ್
- ಮೆಣಸಿನ ಪುಡಿ
- ಅರಿಶಿನ ಪುಡಿ
- ಚೋಲೆ ಮಸಾಲ
- ಜೀರಿಗೆ ಪುಡಿ
- ಧನಿಯಾ ಪುಡಿ
- ಟೊಮೆಟೋ
ಚೋಲೆ ಭಟುರಾ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಗೆ ಮೈದಾ ಹಿಟ್ಟು, ಚಿರೋಟಿ ರವೆ, ಉಪ್ಪು, ಅಡುಗೆ ಸೋಡಾ, ಸಕ್ಕರೆ ಪುಡಿ ಹಾಕಿಕೊಂಡು ಚೆನ್ನಾಗಿ ಡ್ರೈ ಮಿಕ್ಸ್ ಮಾಡಿ. ನಂತರ ಕಾಲು ಕಪ್ ಮೊಸರು, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಹಿಟ್ಟು ಕಲಸಿಕೊಳ್ಳಿ. ಈ ಹಿಟ್ಟು ಚಪಾತಿ ಹಿಟ್ಟನಂತೆ ಹದ ಮಾಡಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳು ಇರಲಿ.
ನಂತರ ಒಂದು ಪಾತ್ರೆಯಲ್ಲಿ ಇಟ್ಟು ಎಣ್ಣೆ ಸವರಿ ಮುಚ್ಚಳ ಮುಚ್ಚಿ ಇಟ್ಟುಕೊಳ್ಳಿ. ಈಗ ಚೋಲೆ ಮಾಡುವುದು ಹೇಗೆ ನೋಡಿಕೊಳ್ಳಿ. ಹಿಂದಿನ ದಿನ ರಾತ್ರಿಯೇ ಕಾಬೂಲ್ ಕಡಲೆಯನ್ನು ನೆನೆಸಿಟ್ಟುಕೊಳ್ಳಬೇಕು. ಈಗ ಒಂದು ಕುಕ್ಕರ್‌ಗೆ ಈ ಕಾಬೂಲ್ ಹಾಕಿಕೊಂಡು, ಪಲಾವ್ ಎಲೆ, ಅಡುಗೆ ಸೋಡಾ, ಉಪ್ಪು, ಚಕ್ಕೆ ಲವಂಗ ಏಲಕ್ಕಿ, ಹಾಗೆ ನೀರು ಕೂಡ ಹಾಕಿಕೊಳ್ಳಿ. ಕಡಲೆಗಿಂತ ಮೇಲೆ ನೀರು ಹಾಕಿ 4 ಸೀಟಿ ಹೊಡೆಸಿಕೊಳ್ಳಿ.
ಈಗ ಬೆಂದರುವ ಕಾಳನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಒಂದು ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿ ಅದರ ಪೇಸ್ಟ್ ಹಾಕಿಕೊಳ್ಳಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪು ಬಣ್ಣಕ್ಕೆ ಬರುವಂತೆ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ರುಬ್ಬಿದ ಒದು ಟೊಮೆಟೋ ಪೇಸ್ಟ್ ಸಹ ಇದಕ್ಕೆ ಹಾಕಿ 3 ನಿಮಿಷ ಬೇಯಿಸಿಕೊಳ್ಳಿ.
ಈಗ ಖಾರದ ಪುಡಿ, ಅರಶಿಣ, ಉಪ್ಪು, ಧನಿಯಾ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಜೀರಿಗೆ ಪುಡಿ, ಚೋಲೆ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಹುರಿದ ಬಳಿಕ ಕಾಳು ಬೇಯಿಸಿದ ನೀರನ್ನು ಇದಕ್ಕೆ ಹಾಕಿ. ಆ ನೀರು ಇಲ್ಲದಿದ್ದರೆ ಹಾಗೆ ನೀರು ಹಾಕಿಕೊಳ್ಳಬಹುದು. ಸ್ವಲ್ಪ ತೆಳುವಾಗಿರಲಿ, ಹಾಗೆ ಕುದಿಯಲು ಬಿಡಿ.
3 ನಿಮಿಷ ಕುದಿ ಬಂದ ಬಳಿಕ ಇದಕ್ಕೆ ಬೇಯಿಸಿಕೊಂಡ ಕಾಳುಗಳನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಯಲು ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಈಗ ಭಟುರಾ ಹಿಟ್ಟು ತೆಗೆದುಕೊಂಡು ಮತ್ತೆ ಹದ ಮಾಡಿ. ಸಣ್ಣ ಉಂಡೆಗಳ ಮಾಡಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ನಂತರ ಪೂರಿ ಲಟ್ಟಿಸಿದಂತೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಬಿಟ್ಟುಕೊಳ್ಳಿ. ಇಷ್ಟಾದರೆ ಭಟುರಾ ಕೂಡ ರೆಡಿಯಾಗುತ್ತದೆ.



Click it and Unblock the Notifications
