Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಬ್ರೇಕ್ಫಾಸ್ಟ್ಗೆ ಈ ರೀತಿ ದಾಲ್ ಚಟ್ನಿ ಒಳ್ಳೆ ರುಚಿ ನೀಡುತ್ತೆ..! ಮಾಡೋದು ಹೇಗೆ?
ನೀವು ಬೆಳಗ್ಗೆ ತಿಂಡಿಗೆ ಅದೆಷ್ಟು ರೀತಿಯ ಚಟ್ನಿಗಳ ಮಾಡಿ ಸವಿದಿರುತ್ತೇವೆ. ದೋಸೆಗೊಂದು, ಇಡ್ಲಿಗೊಂದು ಎನ್ನುವಂತೆ ಹೊಸ ಹೊಸ ರೀತಿಯ ಚಟ್ನಿಯನ್ನೆಲ್ಲಾ ಮಾಡಿ ಸವಿಯುತ್ತೇವೆ. ತರಕಾರಿ, ಕಡಲೆ, ಬೇಳೆ, ಕಾಳುಗಳನ್ನೆಲ್ಲಾ ಹಾಕಿ ಚಟ್ನಿ ಮಾಡುತ್ತೇವೆ. ಬೆಳಗ್ಗೆ ತಿಂಡಿಗೆ ಚಟ್ನಿ ಇರುವುದು ಬಹಳ ಮುಖ್ಯ.
ಹೀಗಾಗಿ ನಾವಿಂದು ಯಾವುದೇ ತಿಂಡಿ ಮಾಡಿದ್ರೂ ಕೂಡ ಅದಕ್ಕೆ ರುಚಿ ನೀಡುವಂತಹ ಹೊಸ ಬಗೆಯ ಚಟ್ನಿ ಕುರಿತು ತಿಳಿದುಕೊಳ್ಳೋಣ. ನೀವು ಯಾವುದೇ ತಿಂಡಿ ಮಾಡಿದ್ರೂ ಈ ದಾಲ್ ಚಟ್ನಿ ಅದಕ್ಕೆ ಅದ್ಭುತ ರುಚಿ ನೀಡುವುದು ಖಚಿತ. ದಾಲ್ ಚಟ್ನಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿಯೋಣ.

ದಾಲ್ ಚಟ್ನಿ ಸಾಮಾನ್ಯವಾಗಿ ದೋಸೆ, ಇಡ್ಲಿ ರುಚಿಯನ್ನು ಹೆಚ್ಚಿಸುತ್ತೆ. ಹಾಗೆ ದಾಲ್ ಚಟ್ನಿ ಮಾಡೋದು ಕೂಡ ತುಂಬಾನೆ ಸುಲಭ. ಇದನ್ನು ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ. ದಾಲ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ದಾಲ್ ಚಟ್ನಿ ಮಾಡುವ ವಿಧಾನವೇನು? ದಾಲ್ ಚಟ್ನಿ ಮಾಡಲು ಎಷ್ಟು ಸಮಯ ಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದಾಲ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೆಂಗಿನಕಾಯಿ - 1 ಕಪ್
- ಕಡಲೆ ಬೇಳೆ
- ಉದ್ದಿನ ಬೇಳೆ
- ಈರುಳ್ಳಿ-1
- ಒಣ ಮೆಣಸಿನಕಾಯಿ
- ತೊಗರಿ ಬೇಳೆ
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಹುಣಸೆಹಣ್ಣು
- ಕರಿಬೇವು
- ಇಂಗು
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ದಾಲ್ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಬಳಿಕ ಇದಕ್ಕೆ ತೊಗರಿ ಬೇಳೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಒಣ ಮೆಣಸು ಹಾಕಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ, ಇಂಗು, ಶುಂಠಿ ಕೂಡ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ. ಈಗ ಮತ್ತೆ ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಹಾಗೆ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆ ಹುಳಿ, ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಒಲೆಯನ್ನು ಆಫ್ ಮಾಡಿಕೊಂಡು ತಣಗಾಗಲು ಬಿಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಅದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಉಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈ ಚಟ್ನಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಬೌಲ್ಗೆ ಹಾಕಿಕೊಂಡು ಈಗ ಒಗ್ಗರಣೆ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿಕೊಂಡು ಉದ್ದಿನ ಬೇಳೆ, ಕಡಲೆ ಬೇಳೆ, ಜಿರಿಗೆ, ಕರಿಬೇವು, ಒಣ ಮೆಣಸು ಹಾಕಿ ಒಂದು ಸಣ್ಣದಾಗಿ ಒಗ್ಗರಣೆ ರೆಡಿ ಮಾಡಿಕೊಂಡು ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ದಾಲ್ ಚಟ್ನಿ ರೆಡಿಯಾಗುತ್ತದೆ. ನೀವು ಯಾವುದೇ ತಿಂಡಿ ಮಾಡಿದ್ರೂ ಇದರ ರುಚಿ ಹೆಚ್ಚಿಸಲಿದೆ.



Click it and Unblock the Notifications
