Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತರಕಾರಿ ಬಳಸದೆ ಈ ಮೊಸರಿಗೆ ಗ್ರೇವಿ ಮಾಡಿ..! ಸಖತ್ ರುಚಿ ಸಿಂಪಲ್ ರೆಸಿಪಿ
ನಾವು ಮೊಸರು, ಮಜ್ಜಿಗೆ ಬಳಸಿ ಎಷ್ಟೊಂದು ವಿಧವಾದ ಖಾದ್ಯಗಳ ತಯಾರಿಸುತ್ತೇವೆ. ಹಲವು ಖಾದ್ಯಗಳು ಬೊಂಬಾಟ್ ರುಚಿ ನೀಡಲಿವೆ. ಹಾಗೆ ನಾವು ಹಲವು ಖಾದ್ಯಗಳನ್ನು ಮೊಸರಿನಲ್ಲಿ ಮಾಡಿ ಸವಿಯಲು ಮುಂದಾಗುತ್ತೇವೆ. ಮೊಸರು ವಡೆ, ಮೊಸರು ಮಸಾಲೆ ಸಾರು, ಮೊಸರು ಸಾರು, ಮೊಸರು ಹುಳಿ, ಮೊಸರು ಗೊಜ್ಜು ಹೀಗೆ ಬಾಯಿ ರುಚಿಯ ಹತ್ತಾರು ಖಾದ್ಯವನ್ನಂತು ಮಾಡಿಯೇ ಮಾಡುತ್ತೇವೆ.
ಹಾಗೆ ಮೊಸರು ಉಪಯೋಗಿಸಿ ಮಾಡುವಂತಹ ಬಹುತೇಕ ಖಾದ್ಯಗಳು ಅತ್ಯಂತ ರುಚಿಕರವಾಗಿರುತ್ತೆ, ಊಟವೂ ಚೆನ್ನಾಗಿ ಮಾಡುತ್ತೇವೆ. ಆರೋಗ್ಯಕ್ಕೂ ಕೂಡ ಈ ಖಾದ್ಯಗಳು ಒಳ್ಳೆಯದು. ಇನ್ನು ನಾವು ಮಾಡುವಂತಹ ಹಲವು ಮೊಸರಿನ ಖಾದ್ಯಗಳ ಸಾಲಿನಲ್ಲಿ ಈ ಮೊಸರು ಗ್ರೇವಿ ಕೂಡ ಅದ್ಭುತ ರುಚಿ ನೀಡುವಂತಹ ಖಾದ್ಯ ಆಗಿದೆ. ಈ ಗ್ರೇವಿ ಮಾಡಲು ನಮಗೆ ಯಾವುದೇ ರೀತಿಯ ತರಕಾರಿಯ ಅವಶ್ಯಕತೆ ಇಲ್ಲ.

ಹೌದು ತರಕಾರಿ ಬಳಸದೆಯೇ ಮೊಸರನ್ನು ಬಳಸಿಕೊಂಡು ಈ ಗ್ರೇವಿ ಮಾಡಬಹುದು. ಚಪಾತಿ ಹಾಗೂ ಅನ್ನದ ಜೊತೆಗಂತು ಈ ಗ್ರೇವಿ ಇದ್ದರೆ ಬೊಂಬಾಟ್. ನೀವು ಕೂಡ ಒಮ್ಮೆ ಮಾಡಿದರೆ ಮತ್ತೆ ಮತ್ತೆ ಈ ಮೊಸರಿನ ಗ್ರೇವಿ ಮಾಡಿಯೇ ಮಾಡುತ್ತೀರಿ, ಇದಕ್ಕೆ ಹೆಚ್ಚು ಸಮಯವೂ ಹಿಡಿಯುವುದಿಲ್ಲ, ಹಾಗೆ ಹೆಚ್ಚು ವಸ್ತುಗಳು ಕೂಡ ಅವಶ್ಯಕತೆ ಇಲ್ಲ.
ಹಾಗಾದ್ರೆ ನಾವಿಂದು ಈ ಮೊಸರಿನ ಗ್ರೇವಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಮೊಸರಿನ ಗ್ರೇವಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಸರು ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗಟ್ಟಿ ಮೊಸರು
- ಖಾರದ ಪುಡಿ
- ಧನಿಯಾ ಪುಡಿ
- ಗರಂ ಮಸಾಲೆ
- ಉಪ್ಪು
- ಎಣ್ಣೆ
- ಈರುಳ್ಳಿ
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
ಮೊಸರು ಗ್ರೇವಿ ಮಾಡುವುದು ಹೇಗೆ?
ಮೊದಲು ಈ ಗ್ರೇವಿ ಮಾಡಲು ಗಟ್ಟಿ ಮೊಸರು ಬೇಕಾಗುತ್ತದೆ, ನಾವು ಮನೆಯಲ್ಲಿ ಗಟ್ಟಿ ಮೊಸರು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕೂಡ ಈ ಮೊದಲು ಹೇಳಿದ್ದೇವೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದನ್ನು ಕೂಡ ನೋಡಿಕೊಳ್ಳಿ. ಈ ಮೊಸರು ಆದಷ್ಟು ಗಟ್ಟಿಯಾಗಿರಲಿ.
ಬೌಲ್ ಗಟ್ಟಿ ಮೊಸರು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ಬಳಿಕ ಅದಕ್ಕೆ ಖಾರದ ಪುಡಿ ಹಾಕಿಕೊಳ್ಳಿ. ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಖಾರ ಹಾಕಿಕೊಳ್ಳಿ. ಹಾಗೆ ಧನಿಯಾ ಪುಡಿ, ಗರಂ ಮಸಾಲೆ ಸೇರಿಸಿ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಬೇಕು. ಎಲ್ಲಾ ಸೇರಿಸಿ ಒಂದು ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಇದೇ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿಕೊಂಡು 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಣ್ಣೆ ಹೆಚ್ಚಾಗಿಯೇ ಹಾಕಿಕೊಳ್ಳಿ. ಈಗ 4 ನಿಮಿಷದ ಬಳಿಕ ಮೊದಲು ಮಿಕ್ಸ್ ಮಾಡಿಕೊಂಡಿರುವ ಮೊಸರಿನ ಮಸಾಲೆ ನಿಧಾನವಾಗಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಅರ್ಧ ಕಪ್ ನೀರು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಧಾನವಾಗಿ ಕುದಿಬರಿಸಿಕೊಳ್ಳಿ, 3 ನಿಮಿಷ ಸಣ್ಣ ಉರಿಯಲ್ಲಿ ಕುದಿಬಂದರೆ ಸಾಕಾಗುತ್ತದೆ. ಇಷ್ಟಾದರೆ ತರಕಾರಿ ಹಾಕದೆಯೇ ಈ ಗ್ರೇವಿ ಮಾಡಬಹುದು. ಮೊಸರಿನ ಗ್ರೇವಿ ಸವಿಯಲ ಬಹಳ ರುಚಿ ನೀಡಲಿದೆ. ನೀವು ಕೂಡ ಒಮ್ಮೆ ಈ ಗ್ರೇವಿ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
