Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊಸರು ಸಾರು ಹೀಗೆ ಮಾಡಿ ನೋಡಿ ರುಚಿ ಸೂಪರ್ ಆಗಿರುತ್ತೆ, ಮಾಡುವುದು ಕೂಡ ತುಂಬಾ ಸುಲಭ
ಮೊಸರು ಸಾರು ಒಂದಿದ್ದರೆ ಸಾಕು ಬೇರೆ ಯಾವ ಸಾರು ಇಲ್ಲದಿದ್ದರೂ ಊಟ ಮಾಡಬಹುದು, ಅಲ್ಲದೆ ಹಬ್ಬ-ಹರಿದಿನದ ವಿಶೇಷ ಅಡುಗೆಗಳಲ್ಲಿ ಈ ಮೊಸರು ಸಾರು ಕೂಡ ಸೇರಿಸಬಹುದು, ಈ ಮೊಸರು ಸಾರು ಮಾಡುವುದು ತುಂಬಾ ಸುಲಭ. ಮೊಸರು ಸಾರನ್ನು ಅನೇಕ ರುಚಿಯಲ್ಲಿ ಮಾಡಬಹುದು, ಇಲ್ಲಿ ತೆಂಗಿನಕಾಯಿ ಹಾಕಿ ಮಾಡುವ ಮೊಸರು ಸಾರಿನ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮೊಸರು 1/2 ಲೀಟರ್
ತೆಂಗಿನ ತುರಿ 1 ಕಪ್
ಹಸಿ ಮೆಣಸು 4-5
ಜೀರಿಗೆ 1 ಚಮಚ
ಅರಿಶಿಣ ಪುಡಿ 1/ 2 ಚಮಚ
ಬೆಳ್ಳುಳ್ಳಿ 3-4 ಎಸಳು
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಒಣ ಮೆಣಸು 2
ಸ್ವಲ್ಪ ಸಾಸಿವೆ
ಕರಿಬೇವು
ಸ್ವಲ್ಪ ಮೆಂತೆ
ಮೊಸರು ಮಾಡುವ ವಿಧಾನ
- ನೀವು ತೆಂಗಿನ ತುರಿಗೆ ಜೀರಿಗೆ, ಬೆಳ್ಳುಳ್ಳಿ , ಅರಿಶಿಣ ಹಾಕಿ ನುಣ್ಣನೆ ರುಬ್ಬಿಕೊಳ್ಳಿ.
- ಈ ನೀವು ಸಾರು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ ಅದರಲ್ಲಿ ಹಸಿ ಮೆಣಸು 2 ಭಾಗ ಮಾಡಿ ಹಾಕಿ
- ನೀರು ಕುದಿಯುತ್ತಾ ಆವಿಯಾಗುತ್ತಾ ಬರುವಾಗ ರುಬ್ಬಿದ ತೆಂಗಿನಕಾಯಿ ಮಿಶ್ರಣ ಹಾಕಿ.
- ರುಚಿಗೆ ತಕ್ಕ ಉಪ್ಪು ಸೇರಿಸಿ
- ಮಿಶ್ರಣ ಕುದಿ ಬರುವಾಗ ಗ್ಯಾಸ್ ಆಫ್ ಮಿಶ್ರಣ ಸ್ವಲ್ಪ ತಣ್ಣಗಾಗಲು ಬಿಡಿ
- ಅದೇ ಸಮಯದಲ್ಲಿ ಮೊಸರಿಗೆ 2-3 ಹಸಿ ಮೆಣಸು ಹಾಕಿ ಮಿಕ್ಸಿಯಲ್ಲಿ ರುಬ್ಬಿ
- ನಂತರ ಕುದಿಸಿ ತಣ್ಣಗಾಗಲು ಇಟ್ಟ ಮಿಶ್ರಣಕ್ಕೆ ಮೊಸರು ಸೇರಿಸಿ(ಸಾರು ಬಿಸಿ ಇರಬಾರದು, ಹಾಗೆಯೇ ತುಂಬಾನೇ ತಣ್ಣಗಿರಲೂ ಬಾರದು)
ಒಗ್ಗರಣೆ
ಒಗ್ಗರಣೆ ಮಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಸ್ವಲ್ಪ
ಮೆಂತೆ ಹಾಕಿ
ನಂತರ ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಸೇರಿಸಿದರೆ ಮೊಸರು ಸಾರು ರೆಡಿ.
ಹಬ್ಬದ ಅಡುಗೆಗಳಲ್ಲಿ ಮೊಸರು ಸಾರಿನ ಪ್ರಾಮುಖ್ಯತೆ ಏನು
ಗೊತ್ತೆ?
ಜೀರ್ಣಕ್ರಿಯೆಗೆ ಒಳ್ಳೆಯದು: ವಿಧವಿಧದ ಅಡುಗೆ
ಸವಿದಿರುತ್ತೇವೆ, ಈ ಮೊಸರು ಸಾರು ಕುಡಿದರೆ ಸಾಕು ಜೀರ್ಣಕ್ರಿಯೆಗೆ ತುಂಬಾನೇ
ಒಳ್ಳೆಯದು. ದೇಹವು ಪೋಷಕಾಂಶವನ್ನು ಹೀರಿಕೊಳ್ಳುತ್ತದೆ, ಗ್ಯಾಸ್ಟ್ರಿಕ್
ಸಂಬಂಧಿಸಿದ ಸಮಸ್ಯೆ ತಡೆಗಟ್ಟುತ್ತದೆ
ತೂಕ ನಿಯಂತ್ರಣಕ್ಕೂ ಒಳ್ಳೆಯದು: ಮೊಸರು ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ, ಮೊಸರು ಹಸಿವು ನಿಯಂತ್ರಿಸುತ್ತದೆ, ಚಯಪಚಯ ಕ್ರಿಯೆ ಉತ್ತಮ ನಡೆಯುವಂತೆ ನೋಡಿಕೊಳ್ಳುತ್ತದೆ.
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಮೊಸರು ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ,
ಸಕ್ಕರೆಯಂಶ ಬೇಗನೆ ಹೆಚ್ಚಾಗಲು ಬಿಡುವುದಿಲ್ಲ.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮೊಸರಿನಲ್ಲಿರುವ ಕ್ಯಾಲ್ಸಿಯಂ ಮೂಳೆಯನ್ನು ಬಲಪಡಿಸುತ್ತದೆ.



Click it and Unblock the Notifications
