Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊಸರು ಮಜ್ಜಿಗೆ ಹುಳಿ ಮಾಡುವುದು ಹೇಗೆ? ಸುಲಭದ ರೆಸಿಪಿ ಟ್ರೈ ಮಾಡಿ!
ಊಟಕ್ಕೆ ಒಂದು ಹುಳಿ ಇದ್ದರೆ ಊಟದ ರುಚಿ ದುಪ್ಪಟ್ಟಾಗುತ್ತೆ. ಸಾಂಬಾರ್, ಸಾರು, ತಿಳಿ ಸಾರು, ಕರಿ ಹೀಗೆ ಯಾವುದಾದರೊಂದು ರಸ ಇರಲೇಬೇಕು. ನಾವು ನಿತ್ಯ ಅನ್ನದ ಜೊತೆಗೆ ಯಾವುದಾದರೊಂದು ಖಾದ್ಯವನ್ನಂತು ಮಾಡಿಯೇ ಮಾಡುತ್ತೇವೆ. ಹಾಗೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ಖಾದ್ಯಗಳ ಕುರಿತು ನಾವು ಹೆಚ್ಚು ಆಲೋಚಿಸುತ್ತೇವೆ.
ಹಾಗಾದ್ರೆ ನಾವಿಂದು ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ, ಅತ್ಯಂತ ರುಚಿ ರುಚಿಯ ಈ ಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಮಜ್ಜಿಗೆ, ಮೊಸರು ಬಳಸಿ ಅದ್ಭುತ ರುಚಿಯ ಮಜ್ಜಿಗೆ ಹುಳಿ ಮಾಡಿರುತ್ತೀರಿ, ಈ ಮಜ್ಜಿಗೆ ಹುಳಿಗೆ ಒಳ್ಳೆಯ ಒಂದು ಒಗ್ಗರಣೆ ನೀಡಿದರೆ ಅದರ ರುಚಿಗೆ ಮಾರು ಹೋಗದವರಿಲ್ಲ. ಮಜ್ಜಿಗೆ ಹುಳಿ, ತಂಬುಳಿ, ಮೊಸರಿನಿಂದ ಮಾಡುವ ಹುಳಿ ಬೊಂಬಾಟ್ ರುಚಿ ನೀಡುತ್ತೆ.

ಅನ್ನದ ಜೊತೆಗೆ ಈ ಹುಳಿ ಇದ್ದರೆ ಅದರ ರುಚಿಯೇ ಬೇರೆ. ಮಧ್ಯಾಹ್ನದ ಊಟಕ್ಕೆ ಮೊಸರು, ಮಜ್ಜಿಗೆ ಸಾರು ಒಳ್ಳೆಯ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಈ ಹುಳಿ ಕೆಟ್ಟು ಹೋದ ನಿಮ್ಮ ನಾಲಿಗೆಗೆ ಮತ್ತಷ್ಟು ರುಚಿ ತರಲಿದೆ.
ಹಾಗಾದ್ರೆ ಈ ಮೊಸರು, ಮಜ್ಜಿಗೆಯಿಂದ ಅದ್ಭುತ ರುಚಿ ನೀಡುವಂತಹ ಸಾರು ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೊಸರು ಮಜ್ಜಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಮೊಸರು ಅಥವಾ ಮಜ್ಜಿಗೆ
- ಉಪ್ಪು
- ಹಸಿ ಮೆಣಸು
- ಈರುಳ್ಳಿ
- ಇಂಗು
- ಕಡಲೆ ಬೇಳೆ
- ಒಣ ಮೆಣಸು
- ಜೀರಿಗೆ
- ಸಾಸಿವೆ
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅರಶಿನ
ಮೊಸರು ಮಜ್ಜಿಗೆ ಸಾರು ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಗೆ ಮೊಸರು ಒಡೆದು ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಂಡರೆ ಮಜ್ಜಿಯಾಗುತ್ತದೆ. ಹೀಗೆ ನಂತರ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸಿಡಿದ ಬಳಿಕ ಅದಕ್ಕೆ ಉದ್ದಿನ ವೇಳೆ, ಕಡಲೆ ಬೇಳೆ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಂಡು ಅನಂತರ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಇಂಗು, ಅರಶಿನ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ಸ್ವಲ್ಪ ತಣ್ಣಗಾಗಲು ಬಿಡಬೇಕು. ಈಗ ಪಾತ್ರೆಯಲ್ಲಿ ಮಾಡಿಕೊಂಡಿರುವ ಮಜ್ಜಿಯನ್ನು ಹಾಕಿಕೊಂಡಿ ಕಲಸಿಕೊಳ್ಳಿ. ಇಷ್ಟದಾರೆ ಮೊಸರು ಮಜ್ಜಿಗೆ ಹುಳಿ ರೆಡಿಯಾಗುತ್ತದೆ. ಸುಲಭವಾಗಿ ಇದನ್ನು ಮಾಡಬಹುದು.
ಇನ್ನೊಂದು ವಿಧಾನ
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಹಸಿ ಮೆಣಸು, ಬೆಳ್ಳುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಒಂದು ಮುಷ್ಟಿ ತೆಂಗಿನ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ತಣ್ಣಗಾಗಲು ಬಿಟ್ಟು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ವಸ್ತುಗಳ ಹಾಕಿ ಸ್ವಲ್ಪ ನೀರು ಹಾಗೂ ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ರುಬ್ಬಿಕೊಂಡಿರು ಮಸಾಲೆಗಳ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಕುದಿಯಲು ಆರಂಭಿಸಿದಾಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಶಿನ, ಇಂಗು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಇದು ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ಒಂದು ಕಪ್ ಮೊಸರನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮೊಸರು ಹುಳಿ ಸಾರು ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಈ ರುಚಿ ಟ್ರೈ ಮಾಡಿ ನೋಡಿ.



Click it and Unblock the Notifications
