Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಓವನ್, ಮೊಟ್ಟೆ ಇಲ್ಲದೆಯೂ ಸುಲಭವಾಗಿ ಕಪ್ ಕೇಕ್ ಮಾಡಿ..!
ಮನೆಯಲ್ಲಿ ಮಕ್ಕಳಿಗೆ ಕೇಕ್ ಮಾಡಿಕೊಟ್ಟರೆ ಇಷ್ಟ ಪಟ್ಟು ಸವಿಯುತ್ತಾರೆ, ಹಾಗೆ ನಿಮ್ಮ ಫ್ರೀ ಟೈಮ್ನಲ್ಲಿಯೂ ಕೂಡ ಇಂತಹ ಯಾವುದಾದರು ಒಂದು ಕೇಕ್ ರುಚಿ ಮಾಡಿ ಸವಿದಿರುತ್ತೀರಿ. ಅದರಲ್ಲೂ ಹಬ್ಬಗಳು, ಶುಭ ಕಾರ್ಯಗಳು, ಮನೆಗೆ ಯಾರಾದರು ಅತಿಥಿಗಳು ಬರುತ್ತಾರೆ ಎಂಬ ಸಮಯದಲ್ಲಿ ಇಂತಹ ಕೇಕ್ಗಳ ಮಾಡಿದರೆ ಸವಿಯಲು ಬಲು ರುಚಿಯಾಗಿರುತ್ತೆ.
ಆದ್ರೆ ಕೇಕ್ ಮಾಡಬೇಕು ಅಂದ್ರೆ ಓವನ್, ಮೊಟ್ಟೆ ಬಳಸಬೇಕು ಎಂದು ಕೆಲವರು ತಪ್ಪಾಗಿ ತಿಳಿದಿರುತ್ತಾರೆ. ಆದ್ರೆ ಓವಬನ್ ಇಲ್ಲದೆಯೂ ಮೊಟ್ಟೆ ಬಳಸೆಯೂ ಕೇಕ್ ಮಾಡಬಹುದು. ಅದರಲ್ಲೂ ಕಪ್ ಕೇಕ್ಗಳು ಅಂದ್ರೆ ಎಲ್ಲರಿಗೂ ಇಷ್ಟಾವಗುತ್ತೆ. ಬೇಕರಿಯಲ್ಲಿ ಸಿಗುವಂತಹ ಈ ಕಪ್ ಕೇಕ್ಗಳ ತಂದು ಮನೆಯಲ್ಲಿ ಸವಿಯುತ್ತಾರೆ. ಮಕ್ಕಳಿಗಂತು ಕಪ್ಕೇಕ್ಗಳು ಅಂದ್ರೆ ಪಂಚಪ್ರಾಣ.

ಕಪ್ ಕೇಕ್ ಸಹ ಮಾಡೋದು ಬಹಳ ಸುಲಭ. ಆದ್ರೆ ಎಲ್ಲರೂ ಇದನ್ನು ಮಾಡಲು ಹಲವು ವಸ್ತುಗಳು, ಹೆಚ್ಚು ಸಮಯ ಹಿಡಿಯುತ್ತೆ ಎಂದುಕೊಂಡಿರುತ್ತಾರೆ. ಹೀಗಾಗಿ ನಾವಿಂದು ಸುಲಭ ಮಾರ್ಗದಲ್ಲಿ ಕಪ್ ಕೇಕ್ ಮಾಡುವ ಕುರಿತು ತಿಳಿದುಕೊಳ್ಳೋಣ. ಕಪ್ ಕೇಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನ ಏನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಪ್ ಕೇಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು - 1 ಕಪ್
- ಸಕ್ಕರೆ ಪುಡಿ - 1/2 ಕಪ್
- ಕೋಕೋ ಪೌಡರ್ - 1/4 ಕಪ್
- ಹಾಲು - 1/2 ಕಪ್
- ಮೊಸರು - 1/2 ಕಪ್
- ಚೋಕೋ ಚಿಪ್ಸ್ - 1/4 ಕಪ್
- ವಿನೆಗರ್ - 1 ಟೀಸ್ಪೂನ್
- ಬೇಕಿಂಗ್ ಪೌಡರ್ - 1 ಟೀಸ್ಪೂನ್
- ಅಡಿಗೆ ಸೋಡಾ - 1/2 ಟೀಸ್ಪೂನ್
- ವೆನಿಲ್ಲಾ ಎಸೆನ್ಸ್ - 1 ಟೀಸ್ಪೂನ್
- ಎಣ್ಣೆ
ಕಪ್ ಕೇಕ್ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಅಥವಾ ಯಾವುದೇ ಪಾತ್ರೆ ಇಟ್ಟು ಪಾತ್ರೆ ಬಿಸಿ ಮಾಡಿ. ನಂತರ ಕೇಕ್ ಸ್ಯಾಂಡ್ ಅಥವಾ ಒಂದು ಸ್ಟೀಲ್ ಪಾತ್ರೆ ತಿರುಗಿಸಿ ಒಳಗೆ ಇಟ್ಟುಕೊಳ್ಳಿ. ಹಾಗೆ ಒಂದು ಪ್ಲೇಟ್ ಅದರ ಮೇಲೆ ಇಟ್ಟುಕೊಳ್ಳಿ. ಈಗ ಕುಕ್ಕರ್ ಮುಚ್ಚಳ ಮುಚ್ಚಿ ಬಿಸಿಯಾಗಲು ಬಿಡಿ. ಕುಕ್ಕರ್ ಮುಚ್ಚಳಕ್ಕೆ ರಬ್ಬರ್ ಹಾಗೂ ಸೀಟಿ ಎರಡು ಹಾಕದೆ ಸಣ್ಣ ಉರಿಯಲ್ಲಿ ಬಿಸಿ ಮಾಡಿದರೆ ಸಾಕು.
ಈಗ ಒಂದು ಪಾತ್ರೆಯಲ್ಲಿ ಮೊಸರು, ಎಣ್ಣೆ, ಸಕ್ಕರೆ ತೆಗೆದುಕೊಂಡು ಎಲ್ಲವು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಇ. ಗಂಟು ಇರದಂತೆ ಇದು ಮಿಕ್ಸ್ ಆಗಬೇಕು. 2 ನಿಮಿಷ ಮಿಕ್ಸ್ ಮಾಡಿ. ಈಗ ಇದಕ್ಕೆ ಮೈದಾ ಹಿಟ್ಟು, ಕೋಕಾ ಪೌಡರ್, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಕಿ ಬಿಸಿ ಮಾಡಿರುವ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ.
ಇದು ತೆಳುವಾಗಿ ಅಥವಾ ತೀರಾ ಗಟ್ಟಿಯಾಗಿ ಇರದಂತೆ ನೋಡಿಕೊಳ್ಳಿ. ಹಾಗೆ ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ, ಬಳಿಕ ಚಾಕೋ ಚಿಪ್ಸ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಕಪ್ಗೆ ಹಾಕಬೇಕು. ನೀವು ಅಂಗಡಿಯಲ್ಲಿ ಕಪ್ ಕೇಕ್ ಪೇಪರ್ ಸಿಗುತ್ತದೆ, ಇದರಿಂದಲ ಮಾಡಬಹುದು, ಇಲ್ಲವೆ ಟೀ ಕುಡಿಯಲು ಬಳಸುವ ಸಣ್ಣ ಪೇಪರ್ ಕಪ್ಗಳನ್ನು ಕೂಡ ಇದಕ್ಕೆ ಬಳಸಬಹುದು. ಇಲ್ಲವೆ ಸ್ಟೀಲ್ ಕಪ್ಗೂ ಎಣ್ಣೆ ಹಚ್ಚಿಕೊಂಡು ಈ ಹಿಟ್ಟು ಹಾಕಬಹುದು.
ಈಗ ಕಪ್ಗಳಿಗೆ ಅರ್ಧದಷ್ಟು ಹಿಟ್ಟು ಹಾಕಿಕೊಂಡು ಅದರ ಮೇಲೆ ಚಾಕೋ ಚಿಪ್ಸ್ ಹಾಕಿಕೊಂಡು ಕುಕ್ಕರ್ ಮುಚ್ಚಳ ತೆರೆದು ಅದರ ಒಳಗಿರುವ ಪ್ಲೇಟ್ ಮೇಲೆ ಎಲ್ಲಾ ಕೇಕ್ ಕಪ್ಗಳನ್ನು ಇಟ್ಟುಬಿಡಿ. ಒಟ್ಟು 20 ನಿಮಿಷ ಚೆನ್ನಾಗಿ ಕಾಯಲು ಬಿಡಿ. ಕುಕ್ಕರ್ ಮುಚ್ಚಳಕ್ಕೆ ಸೀಟಿ ಹಾಕಬೇಡಿ. ಹಾಗೆ 20 ನಿಮಿಷ ಬಿಡಿ.
ಇಷ್ಟಾದರೆ ಅದ್ಭುತ ರುಚಿಯ ಕಪ್ ಕೇಕ್ ರೆಡಿಯಾಗುತ್ತೆ. ಇದಕ್ಕೆ ಓವನ್, ಮೊಟ್ಟೆ ಯಾವುದೂ ಬೇಡ ಸುಲಭವಾಗಿ ಮಾಡಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ.



Click it and Unblock the Notifications
