Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆರೋಗ್ಯಕ್ಕೆ ಅತ್ಯುತ್ತಮ ಈ ಜೀರಿಗೆ ಮೆಣಸಿನ ರಸ..! ಮಾಡೋದು ಹೇಗೆ?
ಹವಾಮಾನ ಬದಲಾವಣೆಯಿಂದಾಗಿ ನಾವು ಶೀತ, ಕೆಮ್ಮು, ಗಂಟಲು ನೋವು, ಜ್ವರದಂತಹ ಸಮಸ್ಯೆಗೆ ಒಳಗಾಗುತ್ತಲೇ ಇರುತ್ತೇವೆ. ಈ ವೇಳೆ ನಾವು ಮನೆಯಲ್ಲಿ ಕಷಾಯ, ಜೀರಿಗೆ ಕಾಫಿ, ಮೆಣಸಿನಕಾಳಿನ ಸಾರು, ಶುಂಠಿ ಟೀ ಹೀಗೆ ಹಲವು ರೀತಿಯ ಪರಿಹಾರ ನಾವು ಮಾಡಿರುತ್ತೇವೆ. ಏಕೆಂದರೆ ಈ ರೀತಿಯ ಕಷಾಯ, ಖಾದ್ಯಗಳು ಆರೋಗ್ಯಕ್ಕೆ ಉತ್ತಮ. ಹಾಗೆ ದೇಹಕ್ಕಾಗಿರುವ ತಂಪನ್ನು ಮತ್ತ ಸಮತೋಲನಕ್ಕೆ ತರುತ್ತದೆ.
ಹೀಗೆ ಆರೋಗ್ಯಕರ ಖಾದ್ಯದಲ್ಲಿ ಜೀರಿಗೆ ಹಾಗೂ ಮೆಣಸಿನ ರಸಂ ಮಾಡಿದ್ದೀರಾ? ಜೀರಿಗೆ ಹಾಗೂ ಹಸಿ ಮೆಣಸಿನ ಸಾರು ಎಷ್ಟೊಂದು ರುಚಿ ನೀಡುತ್ತೆ ಅಂದ್ರೆ ನೀವು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ. ಅನ್ನದ ಜೊತೆ ಮಾತ್ರವಲ್ಲ ಇದನ್ನು ಲೋಟಕ್ಕೆ ಹಾಕಿಕೊಂಡು ಕುಡಿಯಬಹುದು. ಜೀರಿಗೆ ಸಾರು ಎಲ್ಲರು ಇಷ್ಟಪಡುವ ಒಂದು ಆರೋಗ್ಯಕರ ಖಾದ್ಯ.

ಹಾಗಾದ್ರೆ ರುಚಿ ರುಚಿಯ ಜೀರಿಗೆ ಮೆಣಸಿನ ಸಾರು ಮಾಡುವುದು ಹೇಗೆ? ಈ ಜೀರಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಜೀರಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಕಾಳು ಮೆಣಸು - ಸ್ವಲ್ಪ
- ಜೀರಿಗೆ
- ಟೊಮೆಟೋ - 2
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಒಣ ಮೆಣಸಿನಕಾಯಿ
- ಬೆಳ್ಳುಳ್ಳಿ
- ಇಂಗು
- ಸಾಸಿವೆ
- ಅರಿಶಿನದ ಪುಡಿ
- ಹುಣಸೆಹಣ್ಣು
- ಎಣ್ಣೆ
- ಉಪ್ಪು
ಜೀರಿಗೆ ಮೆಣಸಿನ ಸಾರು ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರ ಇಟ್ಟು ಅದಕ್ಕೆ ಕಾಳು ಮೆಣಸುಗಳನ್ನು ಹಾಕಬೇಕು. ನಂತರ ಇದಕ್ಕೆ ಜೀರಿಗೆ ಹಾಕಿ ಹುರಿದುಕೊಳ್ಳಬೇಕು. 4 ನಿಮಿಷದ ಬಳಿಕ ಒಲೆ ಆಪ್ ಮಾಡಿಕೊಂಡು ಸಣ್ಣ ಮಿಕ್ಸಿ ಜಾರ್ಗೆ ಈ ಹುರಿದ ಪದಾರ್ಥಗಳ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಸಣ್ಣದಾಗಿ ಪುಡಿ ಮಾಡಿಕೊಂಡ ಈ ಪುಡಿಯನ್ನು ಬದಿಗಿಟ್ಟುಕೊಳ್ಳಿ.
ಈಗ ಒಂದು ಬೌಲ್ನಲ್ಲಿ ನಿಂಬೆ ಹಣ್ಣು ಗಾತ್ರದ ಹುಣಸೆಹಣ್ಣನ್ನು ಹಾಕಿ ಪುಡಿ ಮಾಡಿಕೊಳ್ಳಿ, ಇದರಿಂದ ಬಂದ ನೀರು ತೆಗೆದಿಟ್ಟುಕೊಳ್ಳಿ. ಈಗ ಮತ್ತೊಂದು ಬೌಲ್ಗೆ ಟೊಮೆಟೋ ಹಣ್ಣನ್ನು ದೊಡ್ಡದಾಗಿ ಹೆಚ್ಚಿಕೊಂಡು ಹಾಕಿ ಸ್ವಲ್ಪ ನೀರು ಹಾಕಿ ಪುಡಿ ಮಾಡಿಕೊಳ್ಳಬೇಕು. ಕಿವುಚಿಕೊಂಡು ಅದರ ನೀರು ಸಹ ಎತ್ತಿಟ್ಟುಕೊಳ್ಳಿ. ಈಗ ಬೆಳ್ಳುಳ್ಳಿಯನ್ನು ಸಹ ಜಜ್ಜಿ ಬದಿಗೆ ಇಟ್ಟುಕೊಳ್ಳಿ.
ನಂತರ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಇಂಗು, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಕರಿಬೇವು ಹಾಕಿ ಬಿಸಿ ಮಾಡಿಕೊಂಡು ನಂತರ ಹುಣಸೆ ಹುಳಿಯನ್ನು ಹಾಕಿಕೊಳ್ಳಿ, ಹಾಗೆ ಇದಕ್ಕೆ ಟೊಮೆಟೋ ನೀರನ್ನು ಸಹ ಹಾಕಿಕೊಳ್ಳಿ.
ಇದಾದ ಬಳಿಕ ಅರಶಿನ ಹಾಕಿ ನಂತರ ಮೊದಲು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಮಸಾಲೆಯ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ 2 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಬಿಸಿ ಬಿಸಿ ಜೀರಿಗೆ ಮೆಣಸಿನ ರಸ ರೆಡಿಯಾಗುತ್ತದೆ. ಇದು ಆರೋಗ್ಯಕರ ರಸಂ ಆಗಿದೆ. ಚಳಿಗಾಲದಲ್ಲಿ ಒಳ್ಳೆಯ ರೆಸಿಪಿ, ಇದನ್ನು ಮನೆಯಲ್ಲಿ ನೀವು ಸಹ ಮಾಡಿ ನೋಡಿ. ಎಲ್ಲರ ಆರೋಗ್ಯಕ್ಕೂ ಇದು ಅತ್ಯುತ್ತಮ ಖಾದ್ಯ.



Click it and Unblock the Notifications
