Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಉರಿ ಬಿಸಿಲಿನಲ್ಲಿ ತಂಪಾಗಿಡುವ ತಂಬುಳಿ; 2 ನಿಮಿಷದೊಳಗೆ ಸಿದ್ದ ಮಾಡಿ!
ಚಳಿಗಾಲದ ಸಮಯದಲ್ಲಿ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತೆ. ಅದ್ರಲ್ಲೂ ಹಗಲಿನಲ್ಲಿ ಬಿಸಿಲು ಹಾಗೆ ರಾತ್ರಿ ಸಮಯದಲ್ಲಿ ಶೀತಗಾಳಿ ಹಿನ್ನಲೆ ನಮ್ಮ ದೇಹವು ಸರಿಯಾಗಿ ಹೊಂದಿಕೊಳ್ಳಬೇಕು. ಆದ್ರೆ ಹಗಲಿನ ತಾಪ ಏರಿಕೆಯಿಂದಾಗಿ ದೇಹದಲ್ಲಿ ಹಲವು ರೀತಿ ಬದಲಾವಣೆಗಳ ನೋಡಬಹುದು. ಈ ಸಮಯದಲ್ಲಿ ಉರಿ ಶೀತ, ಒಣ ಕೆಮ್ಮು, ಜ್ವರದಂತಹ ಅನಾರೋಗ್ಯ ಸಮಸ್ಯೆ ಸಾಮಾನ್ಯವಾಗಿರಲಿದೆ.
ಈ ಸಮಯದಲ್ಲಿ ನಮ್ಮ ಆಹಾರ ಕ್ರಮಗಳ ಮೇಲೆ ನಾವು ಹೆಚ್ಚಿನ ನಿಗಾ ಇಡಬೇಕಾಗುತ್ತದೆ. ಹೀಗಾಗಿ ನಾವಿಂದು ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ನಮ್ಮ ಆರೋಗ್ಯಕ್ಕೂ ಉತ್ತಮ ಎನಿಸುವ ತಂಬುಳಿ ಮಾಡುವ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ. ತಂಬುಳಿಯಲ್ಲೂ ಹಲವು ಬಗೆಗಳಿವೆ. ಎಲ್ಲವೂ ಊಟದೊಂದಿಗೆ ಅದ್ಭುತ ರುಚಿ ನೀಡಲಿವೆ.

ಮಧ್ಯಾಹ್ನದ ಊಟದೊಂದಿಗೆ ಯಾವುದಾದರು ತಂಬುಳಿ ಇದ್ದರೆ ನಿಮ್ಮ ಊಟ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಊಟದೊಂದಿಗೆ ಸವಿಯಲು ಮಾಡುವ ರುಚಿ ರುಚಿಯ ಸೌತೆಕಾಯಿ ತಂಬುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ತಂಬುಳಿ ಊಟದೊಂದಿಗೆ ಅದ್ಭುತ ರುಚಿ ನೀಡಲಿದೆ. ಹಾಗೆ ಇದನ್ನು ಸವಿಯೋದು ನಿಮ್ಮ ದೇಹದ ಉಷ್ಣತೆ ಕಾಪಾಡಲು ಹಾಗೆ ಸಮತೋಲನದಲ್ಲಿ ಇಡಲು ಸಹಾಯ ಮಾಡಲಿದೆ.
ಹಾಗಾದ್ರೆ ಈ ಸೌತೆಕಾಯಿ ತಂಬುಳಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೌತೆಕಾಯಿ ತಂಬುಳಿ ಮಾಡಲು ಅಗತ್ಯ ವಸ್ತುಗಳು
- ಸೌತೆಕಾಯಿ
- ಶುಂಠಿ - 1/4 ಇಂಚು
- ಹಸಿ ಮೆಣಸಿನಕಾಯಿ - 3
- ತೆಂಗಿನಕಾಯಿ ತುರಿ
- ಕರಿಬೇವು
- ಕೆಂಪು ಮೆಣಸಿನಕಾಯಿ
- ಜೀರಿಗೆ
- ಸಾಸಿವೆ - 1/4 ಚಮಚ
- ಮೊಸರು - 1/2 ಕಪ್
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸೌತೆಕಾಯಿ ತಂಬುಳಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಇದನ್ನು ಕೆಳಗೆ ಇಳಿಸಿಕೊಳ್ಳಿ. ಈಗ ಮಿಕ್ಸಿ ಕಾರ್‌ಗೆ ತೆಂಗಿನಕಾಯಿ ತುರಿ, ಅರ್ಧ ಭಾಗದಷ್ಟು ಸೌತೆಕಾಯಿ, ಶುಂಠಿ, ಹಸಿ ಮೆಣಸು, ಉಪ್ಪು, ಸ್ವಲ್ಪ ನೀರು ಹಾಕಿ ಚಟ್ನಿಯಂತೆ ಮೊದಲು ರುಬ್ಬಿಕೊಳ್ಳಿ.
3 ಸುತ್ತು ರುಬ್ಬಿಕೊಂಡ ಬಳಿಕ ಇದಕ್ಕೆ 1 ಕಪ್ ಮೊಸರು ಹಾಕಿ ಮತ್ತೆ 1 ಸುತ್ತು ರುಬ್ಬಿಕೊಳ್ಳಿ. ಈ ರುಬ್ಬಿಕೊಂಡ ಎಲ್ಲಾ ಪೇಸ್ಟ್ ಅನ್ನು ಒಗ್ಗರಣೆ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ. ಮಿಕ್ಸಿ ಜಾರ್‌ಗೆ ನೀರು ಹಾಕಿ ಅದನ್ನು ಕೂಡ ಈ ಪಾತ್ರೆಗೆ ಹಾಕಿ ಸೇರಿಸಿಕೊಳ್ಳಿ. ಈ ತಂಬುಳಿ ತೆಳುವಾಗಿ ಬರಬೇಕು.
ಈಗ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡ ಸೌತೆಕಾಯಿಯನ್ನು ಸಹ ಹಾಕಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ತಂಬುಳಿ ಸಿದ್ದವಾಗುತ್ತೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ. ಮಧ್ಯಾಹ್ನದ ಊಟದೊಂದಿಗೆ ಈ ತಂಬುಳಿ ಸವಿಯಲು ಸಿಕ್ಕರೆ ನಿಮ್ಮ ಊಟದ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications
