Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಟೇಸ್ಟಿ & ಹೆಲ್ದಿ! ಸೌತೆಕಾಯಿ ಸ್ಯಾಂಡ್ವಿಚ್ ಮಾಡೋದು ಹೇಗೆ? 10 ನಿಮಿಷ ಸಾಕು
ಸ್ಯಾಂಡ್ವಿಚ್ ಅಂದ್ರೆ ಹೀಗಿರಬೇಕು! ಈ ಸ್ಯಾಂಡ್ವಿಚ್ ತಿಂದ್ರೆ ಪ್ರೋಟೀನ್ ಗ್ಯಾರಂಟಿ. ಹೌದು, ಸ್ಯಾಂಡ್ವಿಚ್ ಅಂದ್ರೆ ಬರೀ ಬೆಣ್ಣೆ, ಜಾಮ್ ಅಷ್ಟೇ ಅಲ್ಲ, ಅದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದಾಗಿರಬಹುದು. ನಾವಿಂದು ನಿಮಗೆ ಅಂತಹ ಒಂದು ವಿಶೇಷ ಸ್ಯಾಂಡ್ವಿಚ್ ರೆಸಿಪಿ ತಿಳಿಸಲಿದ್ದೇವೆ. ಪ್ರತಿದಿನ ಒಂದೇ ರೀತಿಯ ಆಹಾರ ತಿಂದು ಬೇಸರವಾಗಿದ್ದರೆ, ಈ ಹೈ-ಪ್ರೋಟೀನ್ ಸೌತೆಕಾಯಿ ಸ್ಯಾಂಡ್ವಿಚ್ (Cucumber Sandwich) ಖಂಡಿತ ನಿಮ್ಮ ಆಯ್ಕೆ ಬದಲಾಯಿಸಬಹುದು. ಇದು ಕೇವಲ ರುಚಿಯಾಗಿರುವುದು ಮಾತ್ರವಲ್ಲ, ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನೂ ನೀಡುತ್ತದೆ.
ಹೈ-ಪ್ರೋಟೀನ್ ಸೌತೆಕಾಯಿ ಸ್ಯಾಂಡ್ವಿಚ್ ಅನ್ನು ಸರಳ ಪದಾರ್ಥಗಳಿಂದ ತಯಾರಿಸಬಹುದು. ಇದು ಕಾಟೇಜ್ ಚೀಸ್, ವೈಟ್ ಮಿಸೊ, ಸೋಯಾ ಸಾಸ್ ಮತ್ತು ರೈಸ್ ವಿನೆಗರ್ ಮಿಶ್ರಣದಿಂದ ತಯಾರಿಸಿದ ಕ್ರೀಮಿ ಸ್ಪ್ರೆಡ್ ಅನ್ನು ಒಳಗೊಂಡಿದೆ. ಈ ಮಿಶ್ರಣವು ಪ್ರೋಟೀನ್ನ ಕ್ರೀಮಿ ಬೂಸ್ಟ್ ಅನ್ನು ನೀಡುತ್ತದೆ. ಇದು ಸೌತೆಕಾಯಿಯ ಗರಿಗರಿ ಮತ್ತು ತಾಜಾ ರುಚಿಗೆ ಪರಿಪೂರ್ಣ ಜೋಡಿಯಾಗಿದೆ. ಈ ಸ್ಯಾಂಡ್ವಿಚ್ ತಯಾರಿಸಲು 15 ನಿಮಿಷಗಳ ಸಮಯ ಬೇಕಾಗುತ್ತದೆ. ಹಾಗಿದ್ರೆ, ಹೈ-ಪ್ರೋಟೀನ್ ಸೌತೆಕಾಯಿ ಸ್ಯಾಂಡ್ವಿಚ್ ಮಾಡುವ ವಿಧಾನ ತಿಳಿಯೋಣ ಬನ್ನಿ.

ಸೌತೆಕಾಯಿ ಸ್ಯಾಂಡ್ವಿಚ್ ಬೇಕಾಗುವ ಪದಾರ್ಥಗಳು
• ಕಡಿಮೆ ಕೊಬ್ಬಿನ ಕಾಟೇಜ್ ಚೀಸ್ - ಮುಕ್ಕಾಲು ಕಪ್ (ಉಪ್ಪುರಹಿತ)
• ಬಿಳಿ ಮಿಸೋ (ಬಿಳಿ ಅಕ್ಕಿ) - ಒಂದು ಸ್ಪೂನ್
• ಸೋಯಾ ಸಾಸ್ - ಅರ್ಧ ಸ್ಪೂನ್ (ಕಡಿಮೆ ಸೋಡಿಯಂ ಹೊಂದಿರುವ)
• ಅಕ್ಕಿ ವಿನೆಗರ್ - ಒಂದೂವರೆ ಸ್ಪೂನ್
• ಸಣ್ಣಗೆ ಹೆಚ್ಚಿದ ಈರುಳ್ಳಿ ಎಲೆಗಳು - ಒಂದು ಸ್ಪೂನ್
• ಕಪ್ಪು ಎಳ್ಳು - ಅರ್ಧ ಸ್ಪೂನ್
• ಗೋಧಿ ಬ್ರೆಡ್ - ಎರಡು ಹೋಳು (ಹಗುರವಾಗಿ ಟೋಸ್ಟ್ ಮಾಡಿದ ಸ್ಲೈಸ್ಗಳು)
• ಸೌತೆಕಾಯಿ - ಮುಕ್ಕಾಲು ಕಪ್
• ಕ್ಯಾರೆಟ್ - ಕಾಲು ಕಪ್ (ರಿಬ್ಬನ್ಗಳಾಗಿ ಕತ್ತರಿಸಿದ್ದು)
• ಮೂಲಂಗಿ - ಎರಡು ಸ್ಪೂನ್
• ಅವಕಾಡೊ - ಅರ್ಧ (ತೆಳುವಾಗಿ ಹೆಚ್ಚಿದ್ದು)

ಸೌತೆಕಾಯಿ ಸ್ಯಾಂಡ್ವಿಚ್ ಮಾಡುವ ವಿಧಾನ
ಈಗ ಸೌತೆಕಾಯಿ ಸ್ಯಾಂಡ್ವಿಚ್ ಮಾಡಲು ಪ್ರಾರಂಭಿಸೋಣ. ಮೊದಲಿಗೆ, ಒಂದು ಸಣ್ಣ ಆಹಾರ ಸಂಸ್ಕರಣ ಯಂತ್ರದಲ್ಲಿ ಕಾಲು ಕಪ್ ಕಾಟೇಜ್ ಚೀಸ್ ಹಾಕಿ. ಇದಕ್ಕೆ ಒಂದು ಚಮಚ ಮಿಸೊ, ಒಂದು ಚಮಚ ಸೋಯಾ ಸಾಸ್ ಮತ್ತು ಅರ್ಧ ಚಮಚ ರೈಸ್ ವಿನೆಗರ್ ಅನ್ನು ಹಾಕಿ. ಸುಮಾರು ಒಂದು ನಿಮಿಷ, ಅಗತ್ಯವಿರುವಂತೆ ಬದಿಗಳನ್ನು ಕೆರೆಯುತ್ತಾ, ನಯವಾಗುವವರೆಗೆ ಸಂಸ್ಕರಿಸಿ.
ಬಳಿಕ ಸಂಸ್ಕರಿಸಿದ ಮಿಶ್ರಣವನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ. ಈಗ ಅದಕ್ಕೆ ಒಂದು ಚಮಚ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಅರ್ಧ ಚಮಚ ಎಳ್ಳನ್ನು ಸೇರಿಸಿ, ಸರಿಹಾಗುವಂತೆ ಮಿಕ್ಸ್ ಮಾಡಿ. ಈ ಕಾಟೇಜ್ ಚೀಸ್ ಮಿಶ್ರಣದ ಅರ್ಧ ಭಾಗವನ್ನು ಪ್ರತಿಯೊಂದು ಟೋಸ್ಟ್ ಸ್ಲೈಸ್ಗಳ ಮೇಲೆ ಹರಡಿ. ಮತ್ತೊಂದು ಬಟ್ಟಲಿನಲ್ಲಿ, ಮೂರನೇ ಒಂದು ಕಪ್ ಸೌತೆಕಾಯಿ, ಕ್ಯಾರೆಟ್ ಪಟ್ಟಿಗಳು ಮತ್ತು ಎರಡು ಚಮಚ ಮೂಲಂಗಿಯನ್ನು ಒಂದು ಚಮಚ ರೈಸ್ ವಿನೆಗರ್ನೊಂದಿಗೆ ಸಮವಾಗಿ ಲೇಪಿಸುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಒಂದು ಟೋಸ್ಟ್ ಸ್ಲೈಸ್ ಮೇಲೆ ಈ ತರಕಾರಿ ಮಿಶ್ರಣ ಮತ್ತು ಹೆಚ್ಚಿದ ಅವಕಾಡೊ ತುಂಡುಗಳನ್ನು ಜೋಡಿಸಿ. ನಂತರ, ಇನ್ನೊಂದು ಟೋಸ್ಟ್ ಸ್ಲೈಸ್ ಅನ್ನು ಹರಡಿದ ಭಾಗ ಕೆಳಗೆ ಇರುವಂತೆ, ಇದರ ಮೇಲೆ ಇರಿಸಿ. ಸ್ಯಾಂಡ್ವಿಚ್ ಅನ್ನು ಅರ್ಧಕ್ಕೆ ಕತ್ತರಿಸಿ ( ಅಡ್ಡಲಾಗಿ ಕತ್ತರಿಸಿ) ಮಕ್ಕಳಿಗೆ ತಿನ್ನಲು ನೀಡಿ.



Click it and Unblock the Notifications
