Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೌತೆಕಾಯಿ, ಅರ್ಧ ಕಪ್ ಮೊಸರು ಇದ್ದರೆ ಈ ರುಚಿಯ ಮಜ್ಜಿಗೆ ಹುಳಿ ಮಾಡಿ!
ನಿತ್ಯ ಮಧ್ಯಾಹ್ನದ ಊಟದೊಂದಿಗೆ ನೀವು ಬಗೆ ಬಗೆಯ ಸಾಂಬಾರ್, ಚಟ್ನಿ, ಪಲ್ಯ, ಗೊಜ್ಜು ಈ ರೀತಿ ರುಚಿ ರುಚಿಯ ಖಾದ್ಯಗಳ ಮಾಡುವುದು ಸಾಮಾನ್ಯ. ಅದ್ರಲ್ಲೂ ಈಗ ಬಿಸಿಲಿನ ಸಮಯ ಆಗಿರೋದ್ರಿಂದ ಈ ಸಮಯದಲ್ಲಿ ದೇಹಕ್ಕೆ ತಂಪು ತರುವಂತಹ ಹಾಗೆ ಕಡಿಮೆ ಮಸಾಲೆ ಪದಾರ್ಥಗಳ ಬಳಸಿ ಮಾಡುವಂತಹ ಸಾಂಬಾರ್, ಹುಳಿ ಮಾಡಿ ಸವಿಯುವುದು ನೋಡಬಹುದು. ಮಧ್ಯಾಹ್ನದ ಊಟಕ್ಕೆ ಈ ಹುಳಿ ಬಹಳ ರುಚಿ ತರಲಿದೆ.
ಹೀಗಾಗಿ ನಾವಿಂದು ಸುಲಭವಾಗಿ ಮಾಡುವ, ರುಚಿ ರುಚಿಯಾದ ಹುಳಿ ಕುರಿತಾಗಿ ತಿಳಿಯೋಣ. ಮಜ್ಜಿಗೆ ಹುಳಿ ಮಾಡಿ ಸವಿಯುವ ಕುರಿತು ನೀವು ತಿಳಿದಿರುತ್ತೀರಿ. ಸುಲಭವಾಗಿ ಮಧ್ಯಾಹ್ನದ ಊಟಕ್ಕೆ ಹಾಗೆ ಒಂದು ಒಗ್ಗರಣೆ ಹಾಕಿ ಈ ಹುಳಿಗಳನ್ನು ಮಾಡಬಹುದು. ಅದ್ರಲ್ಲೂ ಹಲವು ತರಕಾರಿಗಳನ್ನು ಬಳಸಿಕೊಂಡು ಈ ಹುಳಿ ತಯಾರಿಸಬಹುದು.

ನಾವಿಂದು ಇಂತಹ ವಿಶೇಷ ರುಚಿಯ ಹುಳಿಗಳಲ್ಲಿ ಸೌತೆಕಾಯಿ ಬಳಸಿಕೊಂಡು ಮಾಡುವ ಮೊಸರು, ಮಜ್ಜಿಗೆ ಹುಳಿ ಕುರಿತಾಗಿ ತಿಳಿದುಕೊಳ್ಳೋಣ. ಮೊಸರು ಹಾಕಿ ಮಾಡುವಂತಹ ಹಲವು ಹುಳಿಗಳನ್ನು ನೀವು ಸಹ ಸವಿದಿರುತ್ತೀರಿ. ಅದ್ರಲೂ ಈ ಸೌತೆಕಾಯಿ ಬಳಸಿಕೊಂಡು ಮಾಡುವ ಹೊಸ ರೀತಿಯ ಹುಳಿ ನಿಮಗೆ ಬಹಳ ರುಚಿ ತರಲಿದೆ. ಸಾಮಾನ್ಯವಾಗಿ ಬಿಸಿಲಿನಲ್ಲಿ ಇದು ದೇಹಕ್ಕೆ ತಂಪು ತರಲಿದೆ.
ಹಾಗಾದ್ರೆ ಸೌತೆಕಾಯಿ ಬಳಸಿಕೊಂಡು ಮೊಸರು ಮಜ್ಜಿಗೆ ಹುಳಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸೌತೆಕಾಯಿ ಮೊಸರು ಹುಳಿ ಮಾಡಲು ಬೇಕಾಗುವ ವಸ್ತುಗಳು
- ಸೌತೆಕಾಯಿ
- ಮೊಸರು
- ಎಣ್ಣೆ
- ಒಣ ಮೆಣಸು
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಉಪ್ಪು
- ತೆಂಗಿನಕಾಯಿ - 1/4 ಕಪ್
- ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ
- ಸಾಸಿವೆ - 1/4 ಟೀಸ್ಪೂನ್
- ಈರುಳ್ಳಿ
- ಕರಿಬೇವು
- ಅರಿಶಿನ ಪುಡಿ
ಸೌತೆಕಾಯಿ ಮೊಸರು ಹುಳಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಸಿ ಮೆಣಸು, ಒಂದು ಚಿಕ್ಕ ಈರುಳ್ಳಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಟ್ಟಕೊಳ್ಳಿ. ಈಗ ಒಂದು ಬೌಲ್‌ಗೆ 2 ಕಪ್ ಮೊಸರು ಹಾಕಿ ಸ್ವಲ್ಪ ನೀರು ಸಹ ಹಾಕಿಕೊಂಡು ಅದನ್ನು ಸ್ವಲ್ಪ ತೆಳುವಾಗುವಂತೆ ಮಿಕ್ಸ್ ಮಾಡುತ್ತಾ ತೆಳು ಮಾಡಿ.
ಈಗ ಅಂಗಡಿಯಲ್ಲಿ ಸಿಗುವ ಉದ್ದ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಒಣ ಮೆಣಸು, ಈರುಳ್ಳಿ ಹಾಕಿಕೊಂಡು ಫ್ರೈ ಆಗಲು ಬಿಡಿ. 2 ನಿಮಿಷ ಬಿಟ್ಟ ಬಳಿಕ ಇದಕ್ಕೆ ಕರಿಬೇವು, ಅರಶಿಣ ಪುಡಿ, ಉಪ್ಪು ಸಹ ಹಾಕಿಕೊಂಡು ಫ್ರೈ ಮಾಡಿ.
ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಸೌತೆಕಾಯಿಯನ್ನು ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮೊದಲು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಅರ್ಧ ಕಪ್ ನೀರು ಹಾಕಿ ಮಿಕ್ಸ್ ಮಾಡಿ. 1 ನಿಮಿಷ ಹಾಗೆಯೆ ಬಿಟ್ಟು ಅನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಮತ್ತೆ ಉಳಿದ ಮೊಸರನ್ನು ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಸೌತೆಕಾಯಿ ಮೊಸರು ಹುಳಿ ಸಿದ್ದವಾಗುತ್ತೆ. ಊಟದೊಂದಿಗೆ ಇದು ಬಹಳ ರುಚಿ ನೀಡಲಿದೆ.



Click it and Unblock the Notifications
