Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಘಮ ಘಮಿಸುವ ಸೌತೆಕಾಯಿ ದೋಸೆ ಮಾಡಿ ನೋಡಿ..! ಇಲ್ಲಿದೆ ಸರಳವಾದ ರೆಸಿಪಿ
ಎಲ್ಲರ ಮನೆಯಲ್ಲೂ ಉದ್ದಿನ ದೋಸೆ ಮಾಡಿಯೇ ಮಾಡುತ್ತಾರೆ. ದೋಸೆ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಾಯಿ ಚಪ್ಪರಿಸಿ ಸವಿಯುತ್ತಾರೆ. ದೋಸೆ ಜೊತೆಗೆ ಯಾವುದಾದರೊಂದು ಚಟ್ನಿ ಇದ್ದರಂತು ಎಲ್ಲರು ಒಂದು ದೋಸೆ ಹೆಚ್ಚಿಗೆ ಸವಿಯುತ್ತಾರೆ. ಹಾಗೆ ಈ ದೋಸೆ ಮಾಡುವ ವಿಧಾನವವೂ ಕೂಡ ಒಂದೊಂದು ಕಡೆ ಒಂದೊಂದು ರೀರಿ ಇರುತ್ತೆ. ಬಗೆ ಬಗೆಯ ದೋಸೆ ಮಾಡಿ ಸವಿಯುವುದು ಕೂಡ ಒಂದು ಹವ್ಯಾಸವಾಗಿದೆ.
ಇನ್ನು ಕೇವಲ ದೋಸೆಗಳ ಮಾಡಲೆಂದೇ ಹೋಟೆಲ್‌ಗಳಿವೆ. ಈ ಹೋಟೆಲ್‌ನಲ್ಲಿ ದೋಸೆ ಬಿಟ್ಟು ಬೇರೆ ಏನೂ ಸಿಗುವುದಿಲ್ಲ. ಆದ್ರೆ ದೋಸೆ ಮಾತ್ರ ಈ ಹೋಟೆಲ್‌ನ ಫೇಮಸ್ ಖಾದ್ಯ ಆಗಿರುತ್ತೆ, ದೋಸೆಯಲ್ಲಿ ಹತ್ತಾರು ಬಗೆ ಮಾಡಬಹುದಾದರು ಕೆಲವೊಂದು ತುಂಬಾನೆ ಫೇಮಸ್. ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಬೆಣ್ಣೆ ದೋಸೆ ಹೀಗೆ ಮತ್ತೊಂದಿಷ್ಟು ಬಗೆ ನೀವು ಸವಿದಿರುತ್ತೀರಿ.

ನಾವಿಂದು ಈ ಎಲ್ಲಾ ದೋಸೆಗಳಂತೆ ವಿಶೇಷ ಸಂದರ್ಭದಲ್ಲಿ, ವಿಭಿನ್ನವಾಗಿ ಮಾಡುವಂತಹ ಸೌತೆಕಾಯಿ ದೋಸೆ ಕುರಿತು ತಿಳಿಸಲಿದ್ದೇ. ದೋಸೆಗಳನ್ನು ಹಲವು ರೀತಿಯಲ್ಲಿ ಮಾಡಬಹುದು ಎಂಬಂತೆ ಈ ಸೌತೆಕಾಯಿ ದೋಸೆ ಕೂಡ ಅತ್ಯಂತ ಮೃದುವಾಗಿ ರುಚಿಕರವಾಗಿಯೂ ಇರಲಿದೆ. ಹಾಗಾದ್ರೆ ಈ ದೋಸೆ ಮಾಡುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಹಾಗಾದ್ರೆ ಸಾಂಪ್ರದಾಯಿಕ ಶೈಲಿಯಲ್ಲಿ ಸೌತೆಕಾಯಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಎಂಬೆಲ್ಲಾ ಮಾಹಿತಿಯನ್ನು ನಾವಿಂದು ತಿಳಿಯೋಣ.
ಸೌತೆಕಾಯಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಸೌತೆಕಾಯಿ
- ತೆಂಗಿನ ಕಾಯಿ ತುರಿ
- ಅಕ್ಕಿ
- ಜೀರಿಗೆ
- ಅಡುಗೆ ಸೋಡಾ
- ಎಣ್ಣೆ
ಸೌತೆಕಾಯಿ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ ಅಕ್ಕಿ ಹಾಕಿ ಚೆನ್ನಾಗಿ ತೊಳೆದು ನೆನೆಸಿಡಬೇಕು. ಒಂದು ಅಳತೆಗೆ ಕಪ್ ತೆಗೆದುಕೊಂಡು 2 ಕಪ್ ಅಕ್ಕು ತೆಗೆದುಕೊಳ್ಳಿ. ಅಕ್ಕಿಯ ನೀರು ತೆಗೆದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ನಂತರ ಮುಕ್ಕಾಲು ಕಪ್ ತೆಂಗಿನ ಕಾಯಿ ತುರಿ ಹಾಗೂ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬುವಾಗಲೇ ಉಪ್ಪು ಹಾಕಿಕೊಳ್ಳುವುದು ಉತ್ತಮ.
ಈಗ ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ ಜಾರ್‌ಗೆ ನೀರು ಹಾಕಿ ತೊಳೆದು ಚೆನ್ನಾಗಿ ಕಲಸಿ ಮುಚ್ಚಳ ಮುಚ್ಚಿ ಒಂದು ರಾತ್ರಿ ಬಿಡಬೇಕು. ಈಗ ಒಂದು ಸೌತೆಕಾಯಿಯನ್ನು ಅರ್ಧಕ್ಕೆ ಕತ್ತರಿಸಿಕೊಂಡು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಮಿಕ್ಸಿ ಜಾರ್‌ಗೆ ಹಾಕಿ, ಜೀರಿಗೆ ಹಾಕಿ ರುಬ್ಬಿಕೊಳ್ಳಬೇಕು, ಎಷ್ಟು ನುಣ್ಣಗೆ ಸಾಧ್ಯವೂ ಅಷ್ಟು ರುಬ್ಬಿಕೊಳ್ಳಿ.
ನಂತರ ಈ ಹಿಟ್ಟನ್ನು ಕೂಡ ಅಕ್ಕಿ ಹಿಟ್ಟಿನ ಜೊತೆಗೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟು ಗಟ್ಟಿಯಾಗಿದ್ದರೂ ಕೂಡ ಸೌತೆಕಾಯಿ ಹಾಕಿದ ಕೂಡಲೆ ಹಿಟ್ಟು ತೆಳುವಾಗುತ್ತದೆ. ಈಗ ಒಲೆ ಮೇಲೆ ದೋಸೆ ಕಾವಲಿ ಇಟ್ಟುಕೊಂಡು ಬಿಸಿಯಾಗಲು ಬಿಡಿ. ನಂತರ ಅದಕ್ಕೆ ಎಣ್ಣೆ ಹಚ್ಚಿಕೊಂಡು ರುಬ್ಬಿಕೊಂಡಿರುವ ಈ ದೋಸೆ ಹಿಟ್ಟನ್ನು ಅದರ ಮೇಲೆ ಹಾಕಿ.
ಎರಡೂ ಕಡೆ ದೋಸೆಯನ್ನು ಕರಿಸುಕೊಂಡರೆ ಸಖತ್ ಟೇಸ್ಟ್ ಬರಲಿದೆ. ನೀವು ಬೇಕಾದರೆ ಒಂದು ಚಿಟಿಕೆ ಅಡುಗೆ ಸೋಡಾ ಹಾಕಿಕೊಳ್ಳಬಹುದು. ಹಾಕದೇ ಇದ್ದರೂ ನಡೆಯುತ್ತದೆ. ಈ ದೋಸೆ ಅತ್ಯಂತ ರುಚಿಕರವಾಗಿ, ತುಂಬಾನೆ ಮೃದುವಾಗಿರುತ್ತೆ. ಇದಕ್ಕೆ ಯಾವುದಾದರು ಒಂದು ಚಟ್ನಿ ಮಾಡಿ ಸವಿದರ ಅದ್ಭುತವಾಗಿರುತ್ತೆ.



Click it and Unblock the Notifications
