Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೊಸರು ಜೊತೆ ಸವಿಯಲು ಬಲು ಟೇಸ್ಟ್ ಸೌತೆಕಾಯಿ ಚಪಾತಿ
ನೀವು ಚಪಾತಿಯನ್ನು ಒಂದೇ ಟೇಸ್ಟ್‌ನಲ್ಲಿ ಮಾಡುವುದಕ್ಕಿಂತ ಭಿನ್ನ ರುಚಿಯ ಚಪಾತಿ ಟ್ರೈ ಮಾಡಿದರೆ ಸ್ವಲ್ಪ ಭಿನ್ನ ರುಚಿ ಅನಿಸುವುದು, ನೀವು ಬಗೆಬಗೆಯ ಚಪಾತಿ ತಯಾರಿಸಬಹುದ.
ಸೌತೆಾಯಿ ಚಪಾತಿ ಟೇಸ್ಟ್ ಮಾಡಿದ್ದೀರಾ? ಇಲ್ಲಾ ಅದ್ರೆ ಟ್ರೈ ಮಾಡಿ ನೋಡಿ, ಇದನ್ನು ತಯಾರು ಮಾಡಿ ಗಟ್ಟಿ ಮೊಸರು ಅಥವಾ ಚಟ್ನಿ, ಪಲ್ಯ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿ
ಸೌತೆಕಾಯಿ 1-2
ಗೋಧಿ ಹಿಟ್ಟು 1 ಕಪ್
ಖಾರದ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1/4 ಚಮಚ
ಜೀರಿಗೆ ಪುಡಿ 1/4 ಚಮಚ
ಬೆಳ್ಳುಳ್ಳಿ ಚಿಕ್ಕದಾಗಿ ಹೆಚ್ಚಿದ್ದು (ಜಜ್ಜಿರು ಹಸಿ ಮೆಣಸಾದರು ಸರಿ)
ಹಸಿ ಮೆಣಸು ಚಿಕ್ಕದಾಗಿ ಹೆಚ್ಚಿದ್ದು
ಎಣ್ಣೆ ಅಥವಾ ತುಪ್ಪ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
ನೀವು ಸೌತೆಕಾಯಿ ಸಿಪ್ಪೆ ಸುಲಿದು ಸೌತೆಕಾಯಿಯ್ನು ತುರಿಯಿರಿ
ಈಗ ಸೌತೆಕಾಯಿ ತುರಿಗೆ ಗೋಧಿ ಹಿಟ್ಟು ಸೇರಿಸಿ, ಇದರ ಮಸಾಲೆ ಸಾಮಗ್ರಿ ಸೇಿಸಿ,
ನಂತರ ಕಲೆಸಿ, ನಂತರ ಸ್ವಲ್ಪ ನೀರು, ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್
ಮಾಡಿ.
ಈ ಚಪಾತಿಗೆ ಉಂಡೆಕಟ್ಟಿ, ನಂತರ ಚಪಾತಿಗೆ ತಟ್ಟಿ ನಂತರ ಬೇಯಿಸಿ.
ಚಪಾತಿ ಬೇಯಿಸುವಾಗ ಎಣ್ಣೆ ಅಥವಾ ತುಪ್ಪ ಹಾಕಿ
ಈಗ ಬಿಸಿ-ಬಿಸಿ ಚಪಾತಿಯನ್ನು ಗಟ್ಟಿ ಮೊಸರು ಜೊತೆ ಸವಿಯಿರಿ, ತುಂಬಾನೇ
ರುಚಿಯಾಗಿರುತ್ತದೆ.
ಸಲಹೆ: ಚಪಾತಿ ಮಾಡುವಾಗ ಸ್ವಲ್ಪ ಬೆಣ್ಣೆ ಹಾಕಿ ನಂತರ
ಸರ್ವ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
ನೀವು ಮೊಸರು ಜೊತೆಗೆ ಸವಿಯುವುದಾದರೆ ಚಪಾತಿ ಬಿಸಿ ಬಿಸಿಯಾಗಿರಬೇಕು, ಅದೇ ಚಪಾತಿ
ಸ್ವಲ್ಪ ತಣ್ಣಗಾದರೆ ಅಂದರೆ ನೀವು ಲಂಚ್‌ಗೆ ತೆಗೆದುಕೊಂಡು ಹೋಗುವುದಾದರೆ ಮೊಸರಿಗೆ
ಪಲ್ಯ ಸೂಟ್ ಅಗುತ್ತೆ.
ಸೌತೆಕಾಯಿಯ ಪ್ರಯೋಜನಗಳು
ಸೌತೆಕಾಯಿಯಲ್ಲಿ ನೀರಿನಂಶ ಅಧಿಕವಿರುವುದರಿಂದ ಚಪಾತಿ ತಿಂದಾಗ ಉಂಟಾಗುವ ಬಾಯಾರಿಕೆ ಉಂಟಾಗುವುದು. ದೇಹದಲ್ಲಿ ನೀರಿನಂಶ ತಡೆಗಟ್ಟಲು ಸಹಕಾರಿ.
ಸೌತೆಕಾಯಿ ರಕ್ತದೊತ್ತಡವನ್ನು ತಡೆಗಟ್ಟಲು ಸಹಕಾರಿ
ಇದರಲ್ಲಿ ನೀರಿನಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಇರುವುದರಿಂದ ದೇಹದಲ್ಲಿ
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಮಧುಮೇಹಿಗಳಿಗೆ ಒಳ್ಳೆಯದು
ಮಧುಮೇಹಿಗಳು ತಮ್ಮ ಡಯಟ್‌ನಲ್ಲಿ ಚಪಾತಿ ಸೇರಿಸುತ್ತಾರೆ. ಚಪಾತಿ ಮಾಡುವಾಗ ಹೀಗೆ
ಸೌತೆಕಾಯಿ ಸೇರಿಸಿದರೆ ಟೇಸ್ಟ್ ಸೂಪರ್, ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.
ಮಧುಮೇಹಿಗಳು ಸ್ನ್ಯಾಕ್ಸ್ ಸಮಯದಲ್ಲಿ ಎಣ್ಣೆ ಪದಾರ್ಥ, ಕುರುಕಲು ತಿಂಡಿ ಬದಲು
ಇದನ್ನು ತಿನ್ನುವುದು ಒಳ್ಳೆಯದು.
ಸೌತೆಕಾಯಿ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ
ಸೌತೆಕಾಯಿ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ದೇಹದಲ್ಲಿರುವ ಕಶ್ಮಲವನ್ನು
ಮಲ-ಮೂತ್ರದ ಮೂಲಕ ಹೊರಹಾಕುತ್ತದೆ.
ಜೀರ್ಣಕ್ರಿಯೆಗೆ ಒಳ್ಳೆಯದು
ಗೋಧಿ ಜೊತೆ ಹೀಗೆ ಸೌತೆಕಾಯಿ ಸೇರಿಸಿದರೆ ಜೀರ್ಣಕ್ರಿಯೆಗೆ ಕೂಡ ತುಂಬಾ ಒಳ್ಳೆಯದು. ಚಪಾತಿ ತಿಂದಾಗ ಕೆಲವರಿಗೆ ಬೇಗನೆ ಜೀರ್ಣವಾಗಲ್ಲ, ಹೀಗೆ ಮಿಕ್ಸ್ ಮಾಡಿ ತಿಂದರೆ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.
ಚಪಾತಿಯನ್ನು ನೀವು ಹಲವು ರುಚಿಯಲ್ಲಿ ತಿನ್ನಬಹುದು, ಮೆಂತೆ ಸೊಪ್ಪು ಅಥವಾ ಸಬ್ಸಿಗೆ ಸೊಪ್ಪು ಇವುಗಳನ್ನು ಕೂಡ ಇದರ ಜೊತೆ ಮಿಕ್ಸ್ ಮಾಡಿ ತಿನ್ನಬಹುದು.



Click it and Unblock the Notifications
