Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಕ್ಕಿ ಉದ್ದು ಯಾವುದೂ ಬೇಡ, 10 ನಿಮಿಷದಲ್ಲಿ ಮಾಡಿ ಈ ರವೆ ಕ್ರಿಸ್ಪಿ ದೋಸೆ!!
ದೋಸೆ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಅದ್ರಲ್ಲೂ ಹತ್ತಾರು ಬಗೆಯ ದೋಸೆಗಳು ನಿಮಗೂ ಇಷ್ಟವಾಗುತ್ತೆ. ಹೋಟೆಲ್ನಲ್ಲಿ ನೀಡುವಂತಹ ವಿವಿಧ ಬಗೆಯ ದೋಸೆಗಳನ್ನು ಸವಿಯುವುದು ಅಂದ್ರೆ ಎಲ್ಲರ ಮೆಚ್ಚಿನ ತಿಂಡಿ ಸವಿದಂತಹ ಅನುಭವ. ಹಾಗೆ ಬೆಳಗ್ಗೆ ತಿಂಡಿ ಸಮಯಕ್ಕೆ ದೋಸೆ ಇದ್ದರೆ ಖುಷಿ ಖುಷಿಯಲ್ಲಿ ಅಂದಿನ ತಿಂಡಿ ಸವಿಯೋದು ನೋಡಬಹುದು.
ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ದೋಸೆ ಮಾಡಿ ಸವಿಯೋಕೆ ಇಷ್ಟಪಡುತ್ತಾರೆ. ಇನ್ನು ದೋಸೆ ಮಾಡೋದು ಅಂದ್ರೆ ಬಹುತೇಕರು ಹಿಂದಿನ ದಿನದಿಂದ ತಯಾರಿ ಮಾಡಿಕೊಳ್ಳಬೇಕು ಎಂಬ ಕಾರಣದಿಂದ ದೋಸೆ, ಇಡ್ಲಿ ಮಾಡುವುದರಿಂದ ಸ್ವಲ್ಪ ದೂರ ಉಳಿಯುತ್ತಾರೆ, ಆದ್ರೆ ನಾವಿಂದು ಹೇಳುವಂತಹ ದೋಸೆ ಮಾಡಲು ಈ ಯಾವುದೇ ತಯಾರಿಯ ಅಗತ್ಯವೂ ಇಲ್ಲ.

ಹೌದು ಸಾಮಾನ್ಯವಾಗಿ ಉದ್ದು ಅಕ್ಕಿ ನೆನೆಸಿಟ್ಟು ರುಬ್ಬಿ ಹಿಟ್ಟು ಮಾಡಿ ಬಳಿಕ ದೋಸೆ, ಇಡ್ಲಿ ಮಾಡಿ ಸವಿಯಬೇಕಾಗುತ್ತದೆ. ಆದ್ರೆ ಈ ರವೆ ದೋಸೆಯನ್ನು ನೀವು 10 ನಿಮಿಷದೊಳಗೆ ಮಾಡಿ ಮುಗಿಸಬಹುದು. ಹೌದು ಸುಲಭವಾಗಿ ಹಿಟ್ಟನ್ನು ರುಬ್ಬದೆಯೇ ತಕ್ಷಣಕ್ಕೆ ಸವಿಯಲು ಈ ರವೆ ದೋಸೆ ಮಾಡಬಹುದು.
ಹಾಗಾದ್ರೆ ಸುಲಭವಾಗಿ ಈ ರುಚಿ ರುಚಿಯ ರವೆ ದೋಸೆ ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ. ಈ ರವೆ ದೋಸೆ ಮಾಡಲು ಬೇಕಾಗುವ ವಸ್ತುಗಳು, ವಿಧಾನ, ಹಾಗೆ ಎಷ್ಟು ಸಮಯ ಹಿಡಿಯಲಿದೆ? ಹಿಟ್ಟು ಮಾಡಿಕೊಳ್ಳುವ ವಿಧಾನವೇನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ.
ರವೆ ದೋಸೆ ಮಾಡಲು ಬೇಕಾಗುವ ಅಗತ್ಯ ವಸ್ತುಗಳು
- ರವೆ
- ಅಕ್ಕಿ ಹಿಟ್ಟು
- ಗೋಧಿ ಹಿಟ್ಟು
- ಎಣ್ಣೆ
- ಉಪ್ಪು
- ಜೀರಿಗೆ
- ಶುಂಠಿ
ರವೆ ದೋಸೆ ಮಾಡುವ ವಿಧಾನವೇನು?
ಮೊದಲಿಗೆ 1 ಕಪ್ ರವೆ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ, ಹಾಗೆ 1 ಸ್ಪೂನ್ ಗೋಧಿ ಹಿಟ್ಟು ಹಾಕಿ, ನಂತರ ಜೀರಿಗೆ, ತುರಿದ ಶುಂಠಿ, ಉಪ್ಪು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಅನಂತರ 4 ಕಪ್ ನೀರು ಹಾಕಿ ಮಿಕ್ಸ್ ಮಾಡಿಕೊಂಡು ನೆನೆಯಲು ಬಿಡಿ. ಇದು ಸಂಪೂರ್ಣ ನೆನೆಯಲು ಸಮಯ ಬೇಕಾಗುತ್ತದೆ.
ಈಗ ಈ ನೆನೆಸಿಟ್ಟ ರವೆಗೆ 1 ಸ್ಪೂನ್ ಎಣ್ಣೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಂಡು ಬೇಕಿದ್ದರೆ ಮತ್ತೆ ಹಿಟ್ಟನ್ನು ತೆಳು ಮಾಡಿಕೊಳ್ಳಿ. ಹಾಗೆ ಒಂದು ಕಾವಲಿ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಬಿಸಿ ಮಾಡಿಕೊಳ್ಳಿ. ಕಾವಲಿ ಬಿಸಿಯಾದ ಬಳಿಕ ಈಗ ಮಾಡಿಕೊಂಡಿರುವ ರವೆ ಹಿಟ್ಟನ್ನು ಇದಕ್ಕೆ ಬಿಟ್ಟುಕೊಳ್ಳಿ.
ಸಾಮಾನ್ಯ ದೋಸೆ ಮಾಡಿದಂತೆಯೇ ಹಿಟ್ಟನ್ನು ಕಾವಲಿಗೆ ಹಾಕಿಕೊಳ್ಳಬೇಕು. ನೀವು ಎರಡೂ ಕಡೆ ಬೇಯಿಸಬಹುದು, ಇಲ್ಲವೆ ಒಂದೇ ಕಡೆ ರೋಸ್ಟ್ ಮಾಡಿಕೊಳ್ಳಬಹುದು. ನಿಮಗೆ ಹಿಟ್ಟಿಗೆ ಈರುಳ್ಳಿ ಸಹ ಹಾಕಿಕೊಂಡು ದೋಸೆ ಮಾಡಿಕೊಳ್ಳಬಹುದು. ಇದನ್ನು ರುಬ್ಬಿಕೊಳ್ಳುವುದು, ಅಥವಾ ಹುಳಿ ಬರಲು ಬಿಡುವ ಅವಶ್ಯಕತೆಯೂ ಬೇಡ. ಸಣ್ಣ ರವೆಗೆ ಅಕ್ಕಿ ಹಿಟ್ಟು ನೆನೆಸಿಟ್ಟರೆ ಸಾಕಾಗುತ್ತೆ.
ಕೇವಲ 10 ನಿಮಿಷದಲ್ಲಿ ಈ ದೋಸೆ ಮಾಡಬಹುದು. ಇನ್ನು ಈ ದೋಸೆಯೊಂದಿಗೆ ಯಾವುದಾದರು ಚಟ್ನಿ ಮೊಡಿ ಸವಿಯಲು ನೀಡಬಹುದು. ನೀವು ಸಹ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ.



Click it and Unblock the Notifications
