Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
2 ವಸ್ತು ಇದ್ರೆ ಪೂರಿ ರೆಡಿ..! ಸೈಡ್ ಬ್ಯುಸಿನೆಸ್ ಆಗಿಯೂ ಹಣ ಮಾಡಬಹುದು!!
ನೀವು ರಸ್ತೆ ಬದಿಯ ಪಾನಿಪೂರಿ, ಗೋಲ್ ಗಪ್ಪವನ್ನ ಬಾಯಿ ಚಪ್ಪರಿಸಿ ಸವಿದಿರುತ್ತೀರಿ. ಪಾನಿಪೂರಿ, ಮಸಾಲ ಪೂರಿ, ಅಂದ್ರೆ ಯಾರಿಗೆ ತಾನೆ ಇಷ್ಟವಾಗೊಲ್ಲ. ಮಕ್ಕಳು, ಕಾಲೇಜು ಹುಡುಗ ಹುಡುಗಿಯರು, ಹಿರಿಯರು ಎಲ್ಲರು ಬಹಳ ಇಷ್ಟ ಪಟ್ಟು ಸವಿಯುತ್ತಾರೆ. ಸಂಜೆ ಸಮಯದಲ್ಲಿ ಈ ಅಂಗಡಿಗಳ ಮುಂದೆ ಜನರ ದಂಡೇ ನೆರೆದಿರುತ್ತೆ.
ಹಾಗೆ ನಾವು ಈ ಪಾನಿಪೂರಿಯನ್ನು ಮನೆಯಲ್ಲೂ ಕೂಡ ಮಾಡಿ ಸವಿದಿರುತ್ತೇವೆ. ಅಲ್ಲದೆ ಅಂಗಡಿಯಲ್ಲಿ ಸಿಗುವ ಪೂರಿಯನ್ನು ತಂದು ಮನೆಯಲ್ಲಿ ಮಾಡಿರುತ್ತೇವೆ, ಆದ್ರೆ ನಾವಿಂದು ಮನೆಯಲ್ಲೇ ಈ ಪೂರಿಯನ್ನು ಮಾಡುವ ಕುರಿತು ತಿಳಿಯೋಣ. ಏಕೆಂದರೆ ಈ ಪೂರಿಯನ್ನು ಮಾಡುವಾಗ ಯಾವ ರೀತಿಯ ವಸ್ತು ಬಳಸುತ್ತಾರೆ ಹೇಗೆಲ್ಲಾ ಹಿಟ್ಟನ್ನು ಮಾಡುತ್ತಾರೆ ಎಂಬ ಹಲವು ವಿಡಿಯೋಗಳ ನೋಡಿದ್ದೇವೆ.

ಹಾಗೆ ರಸ್ತೆ ಬದಿಯ ತಿನಿಸುಗಳು ಆರೋಗ್ಯದ ದೃಷ್ಟಿಯಿಂದ ಎಷ್ಟು ಅಪಾಯಕಾರಿಯಾಗಿ ಬದಲಾಗಿವೆ ಎಂಬುದನ್ನು ಕೂಡ ನಾವು ನೋಡಿದ್ದೇವೆ. ಹೀಗಾಗಿ ಮನೆಯಲ್ಲೇ ಇಂತಹ ರುಚಿಕರ ತಿನಿಸುಗಳ ಮಾಡಿ ಸವಿಯಲು ಜನ ಮುಂದಾಗುತ್ತಾರೆ. ಹಾಗೆ ಈ ಪೂರಿಯನ್ನು ಕೆಲವರು ಸೈಡ್ ಬ್ಯುಸಿನೆಸ್ ಆಗಿಯೂ ಮಾಡುತ್ತಾರೆ. ಮನೆಯಲ್ಲೇ ಪೂರಿಗಳ ಮಾಡಿ ಅದನ್ನು ಮಾರಾಟ ಮಾಡುತ್ತಾರೆ.
ಹಾಗಾದ್ರೆ ನಾವಿಂದು ಈ ಪೂರಿಯನ್ನು ಮನೆಯಲ್ಲೇ ಮಾಡುವುದು ಹೇಗೆ ಎಂಬ ಕುರಿತು ತಿಳಿದುಕೊಳ್ಳೋಣ. ಪೂರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ಪೂರಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ಚಿರೋಟಿ ರವೆ ಅಥವಾ ಹೋಳಿಗೆ ರೆವೆ
- ಎಣ್ಣೆ
ಪೂರಿ ಮಾಡುವ ವಿಧಾನವೇನು?
ಒಂದು ತಟ್ಟೆಯಲ್ಲಿ ಎರಡು ಕಪ್ ಚಿರೋಟಿ ರವೆ ತೆಗೆದುಕೊಂಡು ಮಿಕ್ಸ್ ಮಾಡಿ ನಂತರ ಇದಕ್ಕೆ ಮುಕ್ಕಾಲು ಕಪ್‌ನಷ್ಟು ಬಿಸಿ ಎಣ್ಣೆಯನ್ನು ಹಾಕಿ ಕಲಸಿಕೊಳ್ಳಬೇಕು. ಈ ಎಣ್ಣೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ. ಈಗ ಉಗುರು ಬೆಚ್ಚಗಿನ ನೀರುನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು.
ಈ ಹಿಟ್ಟನ್ನು 10 ನಿಮಿಷ ಹದ ಮಾಡಬೇಕು. ಇದು ಚಪಾತಿ ಹಿಟ್ಟಿಗಿಂತ ಮೃದುವಾಗಿ ಬರಬೇಕು. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಈ ಹಿಟ್ಟನ್ನು ಒಣಗಲು ಬಿಡಬೇಡಿ. ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಬಟ್ಟೆ ಅಥವಾ ಎಣ್ಣೆ ಹಚ್ಚಿರುವ ಪ್ಲಾಸ್ಟಿಕ್ ಮುಚ್ಚಿ ಇಡಿ. ಈಗ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಕಟ್ಟಿಕೊಂಡು ನಂತರ ಚಪಾತಿಯಂತೆ ಲಟ್ಟಿಸಿಕೊಳ್ಳಬೇಕು.
ಲಟ್ಟಿಸಿಕೊಂಡ ಬಳಿಕ ಯಾವುದಾದರು ಅಳತೆಯ ವೃತ್ತಾಕಾರದ ವಸ್ತುವಿನಿಂದ ಈ ಚಪಾತಿಯಂತಹ ಹಿಟ್ಟನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಒಂದು ಚಪಾತಿಯಂತಹ ರಚನೆಯಲ್ಲಿ ಸುಮಾರು 6ರಿಂದ 8 ಪುರಿ ಬರುವಂತೆ ಕತ್ತರಿಸಿಕೊಳ್ಳಿ. ಒಂದೊಂದೇ ಪೂರಿಯನ್ನು ಲಟ್ಟಿಸಿಕೊಂಡರೆ ಸಮಯ ಹಿಡಿಯುತ್ತದೆ, ಹೀಗಾಗಿ ಪ್ಲಾನ್ ಅನುಸರಿಸಿದರೆ ಬೇಗ ಮಾಡಬಹುದು.
ಈಗ ಒಲೆ ಮೇಲೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ಪೂರಿಯನ್ನು ಎಣ್ಣೆಗೆ ಬಿಟ್ಟು ಮಧ್ಯಮ ಉರಿಯಲ್ಲಿ ಕರಿದುಕೊಳ್ಳಿ. ಪೂರಿಯನ್ನು ಎರಡೂ ಕಡೆಗಳಲ್ಲಿ ಚೆನ್ನಾಗಿ ಕರಿದುಕೊಳ್ಳಿ. ಎಣ್ಣೆಗೆ ಬಿಟ್ಟಾಗ ಪೂರಿ ಉಬ್ಬಿಕೊಂಡು ಬರುತ್ತದೆ. ಪೂರಿಯನ್ನು ಎಣ್ಣೆಯಿಂದ ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಪ್ಲಾಸ್ಟಿಕ್ ಕವರ್‌ಗೆ ಹಾಕಿಕೊಂಡು ಗಾಳಿ ಹೋಗದಂತೆ ಕಟ್ಟಿದರೆ ಆಯಿತು.
ಇದನ್ನು ನೀವು ಮನೆಯಲ್ಲಿ ಪಾನಿಪೂರಿ ಸವಿಯಲು ಮಾಡಬಹುದು, ಇಲ್ಲವೆ ಈ ಪೂರಿಗಳನ್ನ ಮಾಡಿ ಮಾರಾಟ ಕೂಡ ಮಾಡಬಹುದು. ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
