Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
10 ನಿಮಿಷದಲ್ಲಿ ಗರಿ ಗರಿಯಾದ ಪಕೋಡ ಮಾಡಿ ನೋಡಿ..! ಮಾಡೋದು ಹೇಗೆ?
ಸಂಜೆ ಸಮಯದಲ್ಲಿ ನಾವು ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಟೀ ಇಲ್ಲವೆ ಕಾಫಿಯ ಜೊತೆಗೆ ಒಂದಿಷ್ಟು ಸ್ನ್ಯಾಕ್ಸ್ ಇದ್ದರೆ ಅದರ ರುಚಿ ದುಪ್ಪಟ್ಟಾಗುವ ಜೊತೆಗೆ ನಮ್ಮ ಹೊಟ್ಟೆಯು ತುಂಬಲಿದೆ. ಹೀಗಾಗಿ ಹಲವರ ಮನೆಯಲ್ಲೇ ಒಂದಿಷ್ಟು ಸ್ನ್ಯಾಕ್ಸ್ ಮಾಡುತ್ತಾರೆ, ಮತ್ತೆ ಕೆಲವರು ಹೊರಗಡೆಯಿಂದ ಖರೀದಿಸಿ ತಂದು ಸವಿಯುತ್ತಾರೆ.
ಅದರಲ್ಲೂ ಸಂಜೆ ಸಮಯದಲ್ಲಿ ಸಮೋಸಾ, ಪಾನಿಪೂರಿ, ಗೋಬಿ, ಬೋಂಡಾ, ಬಜ್ಜಿ ಹೀಗೆ ಹತ್ತಾರು ರೀತಿಯ ಖಾದ್ಯ ಸವಿಯುವುದು ನೋಡಬಹುದು. ಅದರಲ್ಲೂ ನಾವು ರಸ್ತೆ ಬದಿಯಲ್ಲಿ ಸಿಗುವಂತಹ ಪಕೋಡವನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತೆ. ರುಚಿ ರುಚಿಯ ಪಕೋಡ ಜೊತೆಗಿದ್ದರೆ ಟೀ ಕಾಫಿ ಮಾತ್ರವಲ್ಲ ಊಟದ ರುಚಿಯನ್ನು ಹೆಚ್ಚಿಸಲಿದೆ.

ಆದ್ರೆ ಹಲವರಿಗೆ ಪಕೋಡ ಮಾಡುವಂತಹ ಸುಲಭದ ವಿಧಾನದ ಕುರಿತು ತಿಳಿದಿರುವುದಿಲ್ಲ. ಆದ್ರೆ ರಸ್ತೆ ಬದಿಯಲ್ಲಿ ಸಿಗುವಂತಹ ರುಚಿ ರುಚಿಯ ಪಕೋಡ ಮನೆಯಲ್ಲಿ ಮಾಡೋದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೆಯಲ್ಲಿ ಈ ಪಕೋಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಪಕೋಡ ಮಾಡವ ವಿಧಾನವೇನು?, ಪಕೋಡ ಮಾಡಲು ಎಷ್ಟು ಸಮಯದಲ್ಲಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರುಚಿ ರುಚಿ ಪಕೋಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಈರುಳ್ಳಿ
- ಹಸಿ ಮೆಣಸು
- ಸೋಡಾ ಪುಡಿ
- ಎಣ್ಣೆ
- ಉಪ್ಪು
- ಬಿಳಿ ಎಳ್ಳು
ರುಚಿ ರುಚಿ ಪಕೋಡ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ಮೂರು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಹಾಗೆ ಸ್ವಲ್ಪ ಕಡಲೆ ಬೀಜವನ್ನು ಹುರಿದು ಎರಡು ಭಾಗವಾಗಿ ಕುಟ್ಟಿಕೊಂಡು ಈ ಬೌಲ್ಗೆ ಹಾಕಿ. ಹಾಗೆ ಹುರಿಗಡಲೆಯನ್ನು ಕೂಡ ತರಿತರಿಯಾಗಿ ಪುಡಿ ಮಾಡಿ ಇದಕ್ಕೆ ಹಾಕಿಕೊಳ್ಳಿ. ಇದು ಕೂಡ 2 ಸ್ಪೂನ್ ಬಳಸಿಕೊಂಡರೆ ಸಾಕು.
ನಂತರ ಇದಕ್ಕೆ ಬಿಳಿ ಎಳ್ಳು, 1 ಸ್ಪೂನ್ ಅಕ್ಕಿ ಹಿಟ್ಟು, ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸಿನಕಾಯಿ, ಸೋಡಾ, 1 ಸ್ಪೂನ್ ಎಣ್ಣೆ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೈಯಿಂದ ಈ ಹಿಟ್ಟು ಹದ ಆಗುವವರೆಗೂ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದು ಕಪ್ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನೀರನ್ನು ನೋಡಿ ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಮಿಕ್ಸ್ ಮಾಡುತ್ತಾ ಹದಾ ಮಾಡಿಕೊಳ್ಳಬೇಕು. ಹಿಟ್ಟು ಉಂಡೆಕಟ್ಟುವಷ್ಟು ಹದವಾಗಬೇಕು. ನಂತರ ಹಿಟ್ಟನ್ನು ಉಂಡೆ ಕಟ್ಟಿಕೊಳ್ಳಿ. ಕೈಗೆ ನೀರು ಅದ್ದಿಕೊಂಡು ಉಂಡೆ ಕಟ್ಟಿಕೊಳ್ಳಿ. ಉಂಡೆ ಕಟ್ಟಿಕೊಳ್ಳುವಾಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ.
ಎಣ್ಣೆ ಬಿಸಿಯಾದ ಬಳಿಕ 5ರಿಂದ 6 ಪಕೋಡ ಒಂದು ಬಾರಿಗೆ ಕರಿಯಬಹುದು. 5ರಂದ 6 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಇದನ್ನು ಮನೆಯಲ್ಲಿ ನೀವು ಆರಾಮವಾಗಿ ಮಾಡಿಕೊಳ್ಳಬಹುದು. ಇದನ್ನು ಊಟದ ಜೊತೆಗೆ ಟೀ ಕಾಫಿ ಜೊತೆಗೆ ಸವಿಯಲು ನೀಡಿದರೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
