Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಬ್ಬದ ಸಂಭ್ರಮ ಹೆಚ್ಚಿಸುವ ಗರಿಗರಿ ಕೋಡುಬಳೆ ಮಾಡಿ..! ಎಷ್ಟು ಸುಲಭ ಗೊತ್ತಾ?
ಶ್ರಾವಣ ಮಾಸದಲ್ಲಿ ಮತ್ತೊಂದು ವಿಶೇಷ ಹಬ್ಬ ಎಂದರೆ ಅದು ಕೃಷ್ಣ ಜನ್ಮಾಷ್ಠಮಿ. ಈ ಹಬ್ಬದಲ್ಲಿ ಹಲವು ರೀತಿ ತಿಂಡಿ ಮಾಡುವುದು ನಿಮ್ಮ ಆಲೋಚನೆ ಆಗಿರಬಹುದು. ಹಾಗೆ ಶ್ರಾವಣದಲ್ಲಿ ಬಹಳಷ್ಟು ಹಬ್ಬಗಳು ಬಂದೇ ಬರುತ್ತವೆ. ಈ ಹಬ್ಬಗಳಲ್ಲಿ ಸಿಹಿ ತಿಂಡಿ, ಕರಿದ ತಿಂಡಿಗಳು ಮಾಡಿಯೇ ಮಾಡುತ್ತೀರಿ. ಹಾಗೆ ಈ ಹಬ್ಬದಲ್ಲು ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ಹಾಗೆ ಕೃಷ್ಣನಿಗೂ ಮೆಚ್ಚಿನ ತಿಂಡಿ ಮಾಡಿ ಸವಿಯುವುದು ಹೇಗೆ ನೋಡೋಣ.
ಅದ್ರಲ್ಲೂ ಕರಿದ ತಿಂಡಿಗಳೆಂದರೆ ಎಲ್ಲರಿಗೂ ಇಷ್ಟವಾಗುವಂತಹ ರುಚಿ ರುಚಿಯ ಕೋಡುಬಳೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಕೋಡುಬಳೆ ಎಲ್ಲಾ ಹಬ್ಬದಲ್ಲೂ ಮಾಡಬಹುದಾದ ಹಾಗೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಹಬ್ಬದ ಅಡುಗೆ ರುಚಿಯಾಗಬೇಕಾದ್ರೆ ಈ ರೀತಿ ಕೋಡುಬಳೆ ಇರಬೇಕು. ಇದನ್ನು ಹಲವು ಬಗೆಯಲ್ಲಿ ಮಾಡಬಹುದು.

ನಾವಿಂದು ಮಸಾಲೆ ಭರಿತವಾಗಿ ಎಲ್ಲರ ಬಾಯಲ್ಲಿ ನೀರು ತರಿಸುವಂತಹ ರುಚಿ ರುಚಿಯಾದ ಕೋಡುಬಳೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗಾದ್ರೆ ಗರಿ ಗರಿಯಾದ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ ಹಿಟ್ಟು
- ಮೈದಾ ಹಿಟ್ಟು
- ಹುರಿಗಡಲೆ
- ಇಂಗು
- ಉಪ್ಪು
- ಕರಿಬೇವು
- ಖಾರದ ಪುಡಿ
- ಒಣ ಕೊಬ್ಬರಿ
ಮಸಾಲ ಕೋಡುಬಳೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ಅಳತೆ ಕಪನಲ್ಲಿ 1 ಕಪ್ ಅಕ್ಕಿ ಹಿಟ್ಟು ಹಾಕಿ ಬಳಿಕ ಇದಕ್ಕೆ ಕಾಲು ಕಪ್ ಮೈದಾ ಹಿಟ್ಟು ಹಾಕಿ ಒಂದೆರಡು ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಈಗ ಮಿಕ್ಸಿ ಜಾರ್‌ನಲ್ಲಿ ಕಾಲು ಕಪ್ ಹುರಿಗಡಲೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಕಪ್ ಒಣ ಕೊಬ್ಬರಿ, ಉಪ್ಪು ಖಾರದ ಪುಡಿ, ಇಂಗು, ಕರಿಬೇವು ಹಾಕಿ ಮತ್ತೆ ಮಿಕ್ಸರ್‌ನಲ್ಲಿ ಪುಡಿ ಮಾಡಿಕೊಳ್ಳಿ.
ಈಗ ರುಬ್ಬಿರುವ ಈ ಪುಡಿಯನ್ನು ಕೂಡ ಅಕ್ಕಿ, ಮೈದಾ ಜೊತೆಗೆ ಸೇರಿಸಿ ಮಿಕ್ಸ್ ಮಾಡಿಕೊಂಡು ಚಿಟಿಕೆ ಅಜ್ವೈನಾ ಕೂಡ ಇದಕ್ಕೆ ಹಾಕಿಕೊಳ್ಳಬೇಕು. ನಂತರ 2 ಸ್ಪೂನ್ ಬಿಸಿ ಎಣ್ಣೆ ಕೂಡ ಇದಕ್ಕೆ ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಕೈಯಿಂದಲೇ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಈ ಹಿಟ್ಟು ತೀರ ತೆಳುವಾಗಿ ಇರಬಾರದು ಹಾಗೆ ದಪ್ಪವೂ ಆಗಬಾರದು. ಆ ರೀತಿ ಹದ ಮಾಡಿ.
ಚಪಾತಿ ಹಿಟ್ಟಿನಂತಹ ಹದಕ್ಕೆ ಬಂದರೂ ಸಾಕಾಗುತ್ತದೆ. ಈಗ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಪಾತಿ ಮಣೆಯಲ್ಲಿ ಉದ್ದ ಉದ್ದ ಕಡ್ಡಿಯ ರೀತಿಯಲ್ಲಿ ಮಾಡಿಕೊಳ್ಳಿ ಈ ಕಡ್ಡಿಯಾಕಾರವಾಗಿ ಹಿಟ್ಟನ್ನು ಲಟ್ಟಿಸಿ ಎರಡೂ ತುದಿಗಳನ್ನು ಅಂಟಿಸಿಕೊಂಡು ಕೋಡುಬಳೆ ಆಕಾರಕ್ಕೆ ತನ್ನಿ. ಇದು ನೋಡಲು ದಪ್ಪವಾಗಿರಲಿ. ಹಾಗೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಹಲವು ಕೋಡುಬಳೆಗಳ ಅದರಲ್ಲಿ ಹಾಕಿ ಕರಿಯಲು ಬಿಡಿ. ಚೆನ್ನಾಗಿ ಕರಿದ ಬಳಿಕ ತೆಗೆದು ಜರಡಿಯಲ್ಲಿ ಹಾಕಿಡಿ. ಇಷ್ಟಾದರೆ ಸವಿಯಲು ನಿಮ್ಮ ಮುಂದೆ ರುಚಿ ರುಚಿಯ ಕೋಡುಬಳೆ ರೆಡಿಯಾಗುತ್ತದೆ. ಹಬ್ಬದಲ್ಲಿ ಈ ಕೋಡುಬಳೆ ಸವಿಯಲು ಬಹಳ ಇಷ್ಟವಾಗುತ್ತೆ. ಹಾಗೆ ಸುಲಭವಾಗಿ ಇದನ್ನು ಮಾಡಿ ಮುಗಿಸಬಹುದು. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಹಲವು ದಿನಗಳ ಕಾಲ ಇಟ್ಟು ಇದನ್ನು ಸವಿಯಬಹುದು.



Click it and Unblock the Notifications
