Latest Updates
-
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ
ಟೇಸ್ಟಿ + ಹೆಲ್ದಿ: ಫುಲ್ ಪ್ರೋಟೀನ್ ಪ್ಯಾಕ್! ಈ ಕಪ್ಪು ಕಡಲೆ ದೋಸೆ ಟ್ರೈ ಮಾಡಿ.. ಕರಾಮತ್ತು ನೋಡಿ
ಆ ದೋಸೆ, ಈ ದೋಸೆ ಬೇಡ.. ಒಮ್ಮೆ ಈ ಪ್ರೋಟೀನ್ ಭರಿತ ದೋಸೆ ಟ್ರೈ ಮಾಡಿ. ಇದು ತೂಕ ಇಳಿಸಿಕೊಳ್ಳಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹ ಪ್ರಯೋಜನಕಾರಿ. ಹೌದು, ದಕ್ಷಿಣ ಭಾರತದಲ್ಲಿ ದೋಸೆಯು ಒಂದು ಪ್ರಮುಖ ಆಹಾರ. ಮಸಾಲೆ ದೋಸೆ, ನೀರ್ ದೋಸೆ, ರವೆ ದೋಸೆ, ಸೆಟ್ ದೋಸೆ ಹೀಗೆ ಅನೇಕ ವಿಧದ ದೋಸೆಗಳನ್ನು ತಯಾರಿಸಲಾಗುತ್ತದೆ. ಪ್ರತಿಯೊಂದು ದೋಸೆಯು ತನ್ನದೇ ಆದ ರುಚಿ ಮತ್ತು ವಿನ್ಯಾಸ ಹೊಂದಿರುತ್ತದೆ. ಆದರೆ, ಕಪ್ಪು ಕಡಲೆ ದೋಸೆಯು (Kala Chana Dosa) ತನ್ನ ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಗುಣಗಳಿಂದಾಗಿ ಜನಪ್ರಿಯವಾಗಿದೆ.
ಕರಿ ಕಡಲೆಗಳು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ. ಇವುಗಳನ್ನು ದೋಸೆಯಾಗಿ ತಯಾರಿಸಿದಾಗ, ರುಚಿ ಮತ್ತು ಪೋಷಣೆ ಎರಡೂ ಡಬಲ್ ಆಗುತ್ತದೆ. ಈ ದೋಸೆ ರುಚಿಯಲ್ಲಿ ಅದ್ಭುತ. ಅಷ್ಟೇ ಅಲ್ಲದೆ, ದೇಹದ ತೂಕ ಇಳಿಸಿಕೊಳ್ಳಲು ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹ ಸಹಕಾರಿಯಾಗಿದೆ. ವಿಶೇಷವೆಂದರೆ, ಇದನ್ನು ತಯಾರಿಸುವುದು ತುಂಬಾ ಸುಲಭ. ನೀವು ಇದನ್ನು ಉಪಾಹಾರ ಅಥವಾ ಭೋಜನಕ್ಕೆ ಬೇಕಾದರೂ ಬಳಸಬಹುದು. ಬನ್ನಿ, ಈ ರುಚಿಕರ ಮತ್ತು ಪೌಷ್ಟಿಕಾಂಶ ಭರಿತ ಕರಿ ಕಡಲೆ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು (Kala Chana Dosa Recipe) ತಿಳಿಯೋಣ.

ಕಪ್ಪು ಕಡಲೆ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಕರಿ ಕಡಲೆ - 1 ಕಪ್
• ಅಕ್ಕಿ - 1/2 ಕಪ್
• ಹಸಿ ಮೆಣಸಿನಕಾಯಿ - 2 ರಿಂದ 3
• ಶುಂಠಿ - 1 ಇಂಚು
• ಈರುಳ್ಳಿ - 1
• ಜೀರಿಗೆ - 1/2 ಸ್ಪೂನ್
• ಕೊತ್ತಂಬರಿ ಸೊಪ್ಪು
• ಉದ್ದಿನ ಬೇಳೆ - 1/4 ಕಪ್
• ಮೆಂತೆ ಕಾಳು - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - ಸ್ವಲ್ಪ
ಕಪ್ಪು ಕಡಲೆ ದೋಸೆ ಮಾಡುವ ವಿಧಾನ
ಮೊದಲು, ಕಪ್ಪು ಕಡಲೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಒಂದು ವೇಳೆ ಬೇಗನೆ ತಯಾರಿಸಬೇಕು ಎಂದರೆ, ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಕಡಲೆ ಮತ್ತು ಅಕ್ಕಿಯನ್ನು ಮಿಕ್ಸರ್ಗೆ ಹಾಕಿ. ಇದಕ್ಕೆ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತಯಾರಾದ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಉಪ್ಪು ಸೇರಿಸಿ. ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ತೆಳು ಮಾಡಿಕೊಳ್ಳಿ.

ಈಗ ಗ್ಯಾಸ್ ಆನ್ ಮಾಡಿ, ತವಾವನ್ನು ಬಿಸಿ ಮಾಡಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ತವಾ ಮೇಲೆ ಹರಡಿ. ಮಧ್ಯಮ ಉರಿಯಲ್ಲಿ ದೋಸೆಯನ್ನು ಎರಡೂ ಕಡೆ ಗೋಲ್ಡ್ ಕಲರ್ ಬರುವವರೆಗೆ ಫ್ರೈ ಮಾಡಿ. ಬಳಿಕ, ತವಾ ಮೇಲಿಂದ ತೆಗೆದು, ಪಾತ್ರೆಗೆ ಹಾಕಿ. ಇಷ್ಟು ಮಾಡಿದರೆ, ಕರಿ ಕಡಲೆ ದೋಸೆ ಸವಿಯಲು ಸಿದ್ಧ. ಈ ಬಿಸಿ ದೋಸೆಯನ್ನು ಹಸಿರು ಚಟ್ನಿ, ಟೊಮೆಟೊ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.
ದೋಸೆ ಗರಿಗರಿಯಾಗಿ ಬರಲು ಹಿಟ್ಟನ್ನು ತಯಾರಿಸುವಾಗ ಕಡಿಮೆ ನೀರನ್ನು ಬಳಸಿ. ನಿಮಗೆ ಬೇಕೆಂದರೆ ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಅಂದರೆ, ಕ್ಯಾರೆಟ್, ಕ್ಯಾಪ್ಸಿಕಂ ಸಹ ಸೇರಿಸಬಹುದು. ತವಾ ನಾನ್ ಸ್ಟಿಕ್ ಆಗಿದ್ದರೆ ದೋಸೆಯನ್ನು ಸುಲಭವಾಗಿ ತೆಗೆಯಬಹುದು. ಕರಿ ಕಡಲೆ ದೋಸೆ ರುಚಿ ಮತ್ತು ಆರೋಗ್ಯದ ಅತ್ಯುತ್ತಮ ಸಂಯೋಜನೆಯಾಗಿದೆ. ಇದನ್ನು ಒಮ್ಮೆ ಟ್ರೈ ಮಾಡಿ ಮತ್ತು ನಿಮ್ಮ ಕುಟುಂಬಕ್ಕೆ ರುಚಿಕರ ಮತ್ತು ಆರೋಗ್ಯಕರ ತಿಂಡಿಯ ಟ್ರೀಟ್ ನೀಡಿ.



Click it and Unblock the Notifications
