Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಹಿ ಅಲ್ಲ ಸಿಹಿ! ಹಾಗಲಕಾಯಿ ಫ್ರೈ ಪಕೋಡ ಮಾಡಿ, ಮಕ್ಕಳು ಇಷ್ಟಪಟ್ಟು ತಿಂತಾರೆ
ಹಾಗಲಕಾಯಿ ಎಂದಾಕ್ಷಣ ಥಟ್ಟನೆ ನೆನಪಾಗೋದು ಅದರ ಕಹಿ. ಬಹುತೇಕರ ಹಾಗಲಕಾಯಿಯನ್ನು ಇಷ್ಟಪಡುವುದಿಲ್ಲ. ಅದಕ್ಕೆ ಕಾರಣ ಅದು ತುಂಬಾನೇ ಕಹಿ. ಆದರೆ, ಮಧುಮೇಹಿಗಳಿಗೆ ಹಾಗಲಕಾಯಿ (Karela) ಬಹಳ ಒಳ್ಳೆಯದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಗರ್ ಇರುವವರಿಗೆ ಯಕೃತ್ತನ್ನು ನಿರ್ವಿಷಗೊಳಿಸಲು ಹೆಲ್ತ್ ಮಾಡುತ್ತದೆ. ಆದ್ದರಿಂದ, ಎಲ್ಲರೂ ಹಾಗಲಕಾಯಿಯನ್ನು ತಿನ್ನಲೇಬೇಕು. ಆದರೆ, ಮನೆಯಲ್ಲಿ ಮಕ್ಕಳಿದ್ದರೆ ಹಾಗಲಕಾಯಿಯನ್ನು (Bitter Gourd) ತಿನ್ನೋದೇ ಇಲ್ಲ. ಅದೇ ಹಾಗಲಕಾಯಿಯ ಕಹಿ ಕಡಿಮೆ ಮಾಡಿದರೆ, ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ನೋಡಿ.
ಹೌದು, ಹಾಗಲಕಾಯಿ ಅನೇಕ ಜನರು ತಿನ್ನಲು ಇಷ್ಟಪಡುವುದಿಲ್ಲ. ಮನೆಯಲ್ಲಿ ಹಾಗಲಕಾಯಿಯನ್ನು ಬಳಸಿ ಏನೇ ಮಾಡಿದರೂ, ಬಹುತೇಕರು ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಅದನ್ನು ಸಂಪೂರ್ಣವಾಗಿ ಬೇಡ ಅಂತಾರೆ. ಆದರೆ, ನಾವಿಂದು ಹಾಗಲಕಾಯಿ ಪಕೋಡ ಮಾಡುವ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದರಿಂದ ಹಾಗಲಕಾಯಿ ತಿನ್ನುವಾಗ ನಿಮಗೆ ಕಹಿಯ ಅನುಭವ ಆಗಲ್ಲ. ನೀವು ಒಮ್ಮೆ ಇದನ್ನು ಟ್ರೈ ಮಾಡಿದರೆ, ಖಂಡಿತವಾಗಿಯೂ ಮತ್ತೆ ಮತ್ತೆ ಮನೆಯಲ್ಲಿ ಮಾಡಲು ಬಯಸುತ್ತೀರಿ. ಇನ್ನೇಕೆ ತಡ, ಹಾಗಲಕಾಯಿ ಫ್ರೈ ಪಕೋಡ (Bitter Gourd Pakoda Recipe) ಮಾಡುವ ವಿಧಾನ ತಿಳಿಯೋಣ ಬನ್ನಿ.

ಹಾಗಲಕಾಯಿ ಫ್ರೈ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು
• ಹಾಗಲಕಾಯಿ - 5 ರಿಂದ 8
• ಕಡಲೆ ಹಿಟ್ಟು - 1 ಕಪ್
• ಅಕ್ಕಿ ಹಿಟ್ಟು - 2 ಸ್ಪೂನ್
• ಅರಿಶಿನ ಪುಡಿ - ಅರ್ಧ ಸ್ಪೂನ್
• ಕೆಂಪು ಮೆಣಸಿನ ಪುಡಿ - 1 ಚಮಚ
• ಕೊತ್ತಂಬರಿ ಸೊಪ್ಪು - 1 ಸ್ಪೂನ್
• ಅಜ್ವೈನ್ - ಅರ್ಧ ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ (ಹುರಿಯಲು)
• ನೀರು - ಅಗತ್ಯಕ್ಕೆ ತಕ್ಕಂತೆ
ಹಾಗಲಕಾಯಿ ಫ್ರೈ ಮಾಡುವ ವಿಧಾನ
ಹಾಗಲಕಾಯಿ ಫ್ರೈ ಪಕೋಡ ಮಾಡುವ ಮೊದಲು, ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳು ಇವೆಯೇ ಎಂದು ಚೆಕ್ ಮಾಡಿ. ಈಗ, ಹಾಗಲಕಾಯಿಯನ್ನು ತೆಗೆದುಕೊಂಡು ತೆಳುವಾದ ದುಂಡಗಿನ ಅಥವಾ ಉದ್ದನೆಯ ಹೋಳುಗಳಾಗಿ ಕತ್ತರಿಸಿಕೊಳ್ಳೋಣ. ಅದರ ಮೇಲೆ ಸ್ವಲ್ಪ ಉಪ್ಪು ಹಚ್ಚಬೇಕು. ಬಳಿಕ 15 ರಿಂದ 20 ನಿಮಿಷಗಳ ಬಿಟ್ಟು ನೀರಿನಲ್ಲಿ ತೊಳೆದು ಒಣಗಿಸಬೇಕು. ಇದಿಷ್ಟು ನೀವು ಮೊದಲು ಮಾಡಬೇಕಾದ ಕೆಲಸ.
ಈಗ ಒಂದು ಬಟ್ಟಲು ತೆಗೆದುಕೊಳ್ಳೋಣ. ಅದರಲ್ಲಿ ಕಡಲೆ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು, ಅರಿಶಿನ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಸೆಲರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಇದಾದ ಬಳಿಕ, ಹಾಗಲಕಾಯಿ (ಕರೇಲಾ) ಚೆನ್ನಾಗಿ ಲೇಪಿತವಾಗುವಂತೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕುವ ಮೂಲಕ ದ್ರಾವಣವನ್ನು ತಯಾರಿಸಿಕೊಳ್ಳೋಣ. ಈಗ ಕತ್ತರಿಸಿದ ಹಾಗಲಕಾಯಿಯನ್ನು ಕಡಲೆ ಹಿಟ್ಟಿನ ದ್ರಾವಣಕ್ಕೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ. ಇಷ್ಟು ಮಾಡಿದರೆ ಮುಕ್ಕಾಲು ಭಾಗ ಕೆಲಸ ಮುಗಿದಂತೆ.

ಇದಾದ ಬಳಿಕ, ಗ್ಯಾಸ್ ಹಚ್ಚೋಣ. ಒಂದು ಬಾಣಲೆ ತೆಗೆದುಕೊಂಡು ಅಡುಗೆ ಎಣ್ಣೆ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದ ನಂತರ, ಹಾಗಲಕಾಯಿ ತುಂಡುಗಳನ್ನು ನಿಧಾನವಾಗಿ ಅದರಲ್ಲಿ ಜಾರಿ ಬಿಡಬೇಕು. ನೆನಪಿಡಿ, ಕಡಿಮೆ ಉರಿಯಲ್ಲಿ ಅವು ಗೋಲ್ಡನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಬೇಕು. ಈಗ ಪಕೋಡಗಳನ್ನು ತೆಗೆದು ಪಾತ್ರೆಗೆ ಹಾಕಿ. ಅಥವಾ ಮನೆಯಲ್ಲಿ ಟಿಶ್ಯೂ ಪೇಪರ್ ಇದ್ದರೆ ಅದರ ಮೇಲೆ ಹಾಕಬಹುದು. ಹೀಗೆ ಮಾಡಿದರೆ ಹೆಚ್ಚಿನ ಎಣ್ಣೆ ಅಂಶ ಅದರಲ್ಲಿ ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ ಸಾಕು, ಬಿಸಿ ಬಿಸಿಯಾದ ಹಾಗಲಕಾಯಿ ಫ್ರೈ ಪಕೋಡ ರೆಡಿ. ಇದನ್ನು ಪುದೀನ ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಮಕ್ಕಳಿಗೆ ಅಥವಾ ಮನೆಗೆ ಬಂದ ಅತಿಥಿಗಳಿಗೆ ನೀಡಬಹುದು.



Click it and Unblock the Notifications