Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಯಲ್ಲಿ ನೀರು ತರಿಸುವ ಗರಿ ಗರಿಯಾದ ಮಿನಿ ಕೋಡುಬಳೆ: ಮಾಡುವ ವಿಧಾನವಿದು!
ಮನೆಯಲ್ಲಿ ಸ್ನ್ಯಾಕ್ಸ್ ಆಗಿ ಇಲ್ಲವೆ ರುಚಿ ರುಚಿಯ ತಿಂಡಿಯ ರೂಪದಲ್ಲಿ ನಾವು ಹಲವು ಖಾದ್ಯ ಸವಿಯಲು ಮುಂದಾಗುತ್ತೇವೆ. ಅದ್ರಲ್ಲೂ ವಿಶೇಷವಾಗಿ ರುಚಿ ರುಚಿಯ ಕರಿದ ತಿಂಡಿಗಳು ಅಂದ್ರೆ ಎಲ್ಲಿರಿಗೂ ಇಷ್ಟವಾಗುತ್ತೆ. ಇನ್ನು ನಾವು ಚಕ್ಕುಲಿ, ವಡೆ, ಕೋಡುಬಳೆ, ಖಾರ, ಬೂಂದಿ ಕಾಳುಗಳು ಹೀಗೆ ಹಲವು ಬೇಕರಿ ರುಚಿಯ ತಿಂಡಿಗಳ ಮನೆಯಲ್ಲಿ ಮಾಡಿ ಸವಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ.
ಇತ್ತ ಕರಿದ ತಿಂಡಿಗಳಲ್ಲಿ ಈ ಕೋಡುಬಳೆಗಳನ್ನು ನಾವು ಮನೆಯಲ್ಲಿ ಮಾಡಿ ಸವಿಯುವುದನ್ನು ಇಷ್ಟಪಡುತ್ತೇವೆ. ಆದ್ರೆ ಮಾರುಕಟ್ಟೆಯಲ್ಲಂತು ವಿವಿಧ ಬಗೆಯ, ವಿವಿಧ ರುಚಿ ನೀಡುವ ಕೋಡುಬಳೆಗಳು ಬಾಯಲ್ಲಿ ನೀರು ತರಿಸುತ್ತವೆ. ಇನ್ನು ಈ ಕೋಡುಬಳೆಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬಹಳ ರುಚಿಕರ ಈ ತಿಂಡಿ ಬಹಳ ದಿನಗಳ ಕಾಲ ಇಟ್ಟು ಕೂಡ ಸವಿಯಬಹುದು.

ಹಾಗೆ ಈ ರುಚಿ ರುಚಿಯ ಕೋಡುಬಳೆ ತಿಂಡಿಯನ್ನು ಮನೆಯಲ್ಲಿ ಮಾಡುವುದು ಹೇಗೆ ನೋಡೋಣ. ಅದ್ರಲ್ಲೂ ಮಿನಿ ಕೋಡುಬಳೆ ಮಾಡಿ ಸವಿಯುವ ವಿಧಾನ ಕುರಿತಾಗಿ ತಿಳಿದುಕೊಳ್ಳೋಣ. ಮಿನಿ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿನಿ ಕೋಡುಬಳೆ ಮಾಡಲು ಬೇಲಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 1 ಕಪ್
- ಚಿರೋಟಿ ರವೆ- ಅರ್ಧ ಕಪ್
- ಮೈದಾ ಹಿಟ್ಟು- ಅರ್ಧ ಕಪ್
- ಖಾರದ ಪುಡಿ
- ಉಪ್ಪು
- ಎಣ್ಣೆ
- ಅಜ್ನೈನಾ
- ಇಂಗು
ಮಿನಿ ಕೋಡುಬಳೆ ಮಾಡುವ ವಿಧಾನವೇನು?
ಒಂದು ದೊಡ್ಡ ಪಾತ್ರೆಯಲ್ಲಿ ಅಳತೆ ಪ್ರಮಾಣದಲ್ಲಿ ಒಂದು 1 ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಚಿರೋಟಿ ರವೆ, ಅರ್ಧ ಕಪ್ ಮೈದಾ ಹಿಟ್ಟು, ಖಾರದ ಪುಡಿ, ಇಂಗು, ಓಂಕಾಳು ಅಥವಾ ಅಜ್ವೈನಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬಿಸಿ ಬಿಸಿಯಾದ ಎಣ್ಣೆಯನ್ನು ಹಾಕಿಕೊಂಡು ಮಿಕ್ಸ್ ಮಾಡಬೇಕು.
ಕೈಯಿಂದ ಚೆನ್ನಾಗಿ ಹಿಟ್ಟು ಹದವಾಗುಂತೆ, ಎಣ್ಣೆ ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಬೇಕು. ಬಳಿಕ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಳ್ಳತ್ತಾ ಗಂಟುಗಳು ಇಲ್ಲದ ಹಾಗೆ ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಇದು ಚಪಾತಿ ಹಿಟ್ಟಿನ ಹದವಾಗಿ ಬರಬೇಕು. ನಂತರ ಹಿಟ್ಟಿನ ಸ್ವಲ್ಪ ಭಾಗ ತೆಗೆದುಕೊಳ್ಳಬೇಕು.
ನಿಂಬೆ ಗಾತ್ರದ ಹಿಟ್ಟನ್ನು ಚೆನ್ನಾಗಿ ತಟ್ಟೆಯ ಮೇಲೆ ಇಟ್ಟು ಉಜ್ಜಿಕೊಳ್ಳಬೇಕು. ಉದ್ದ ಕಡ್ಡಿ ಆಕಾರವಾಗಿ ಉಜ್ಜಿಕೊಳ್ಳಬೇಕು. ನಂತರ ನಿಮ್ಮ ಒಂದು ಬೆರಳಿನ ಗಾತ್ರದಷ್ಟು ಮಧ್ಯದಲ್ಲಿ ರಂಧ್ರವನ್ನು ಬಿಟ್ಟು ಹಿಟ್ಟನ್ನು ಎರಡೂ ಬದಿಯಲ್ಲಿ ಅಂಟಿಸಬೇಕು. ಚಕ್ರದಂತೆ ಈ ಕೋಡುಬಳೆಯನ್ನು ಸುತ್ತಿಕೊಳ್ಳಬೇಕು. ಗಾತ್ರ ಚಿಕ್ಕದಾಗಿ ಇರಬೇಕು. ಇದೇ ವಿಧಾನದಲ್ಲಿ ಎಲ್ಲಾ ಹಿಟ್ಟನ್ನು ಮಿನಿ ಕೋಡುಬಳೆಯಾಗಿ ಮಾಡಿಕೊಳ್ಳಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿಟ್ಟು ಅದು ಕಾದ ಬಳಿಕ ಒಟ್ಟಿಗೆ ಹಲವು ಕೊಡುಬಳೆಗಳನ್ನು ಎಣ್ಣೆಗೆ ಹಾಕಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಿನಿ ಕೋಡುಬಳೆ ಸಿದ್ದವಾಗುತ್ತೆ ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಮಾಡಿ ನೊಡಿ. ಈ ರೀತಿಯ ರುಚಿ ನೀಡುವ ಕೋಡುಬಳೆಯನ್ನು ನೀವು ಬೇಕರಿಗಳಿಂದ ತಂದು ಸವಿದಿರುತ್ತೀರಿ, ಆದ್ರೆ ಮನೆಯಲ್ಲಿ ಈ ರೀತಿಯಾಗಿ ಮಾಡಿದ್ರೆ ಅದರ ರುಚಿ ದುಪ್ಪಟ್ಟಾಗಿರುತ್ತೆ. ಹಾಗೆ ಇದನ್ನು ಇಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿಟ್ಟರೆ ಹಲವು ದಿನಗಳ ಕಾಲ ಇಟ್ಟು ಆಗಾಗ ಸವಿಯಬಹುದು.



Click it and Unblock the Notifications
