Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಟಿಫನ್‌ಗೂ ಸೈ, ಸ್ನ್ಯಾಕ್ಸ್‌ಗೂ ಸೈ! ಮನೆಯಲ್ಲೇ ಈರುಳ್ಳಿ ಕಚೋರಿ ಮಾಡಿ.. ಎಷ್ಟು ಸುಲಭ ಗೊತ್ತಾ?
ಈರುಳ್ಳಿ ಕಚೋರಿ ತಿನ್ನಲು ತುಂಬಾ ರುಚಿ. ಬೆಳಗ್ಗಿನ ಟಿಫನ್ ಅಥವಾ ಸಂಜೆಯ ತಿಂಡಿಗೆ ಇದನ್ನು ಮಾಡಬಹುದು. ಇದನ್ನು ಹಸಿರು ಚಟ್ನಿಯೊಂದಿಗೆ ಸೇವಿಸಿದರೆ ಅದರ ಮಜವೇ ಬೇರೆ. ಬಹುತೇಕ ಜನರು ಇದನ್ನು ಟೀ ಅಥವಾ ಕಾಫಿಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ನೀವು ಎಂದಾದರೂ ಮನೆಯಲ್ಲಿ ಗರಿಗರಿಯಾದ ಈರುಳ್ಳಿ ಕಚೋರಿ (Onion Kachori) ಮಾಡಿದ್ದೀರಾ? ನೀವು ಪ್ಯಾಜ್ ಕಚೋರಿ (Pyaaz Kachori) ತಿನ್ನಲು ಇಷ್ಟಪಡುತ್ತೀರಾ? ಹೌದು ಎಂದಾದರೆ, ನೀವು ಹೊರಗೆ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಈರುಳ್ಳಿ ಕಚೋರಿ ಮಾಡಬಹುದು. ಬನ್ನಿ, ಈ ಖಾದ್ಯವನ್ನು (Onion Kachori Recipe) ಮಾಡುವ ಸುಲಭವಾದ ವಿಧಾನ ತಿಳಿಯೋಣ.
ಈರುಳ್ಳಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳು ಈರುಳ್ಳಿಯಲ್ಲಿ ಹೇರಳವಾಗಿವೆ. ಒಂದು ಈರುಳ್ಳಿ ಕೇವಲ 44 ಪ್ರಮಾಣದ ಕ್ಯಾಲೋರಿ ಹೊಂದಿದೆ. ಈರುಳ್ಳಿಯಲ್ಲಿ ವಿಟಮಿಮ್‌ಗಳು, ಖನಿಜ ಮತ್ತು ಫೈಬರ್ ಸಹ ಹೆಚ್ಚು ಪ್ರಮಾಣದಲ್ಲಿದೆ. ವಿಶೇಷವಾಗಿ ಈರುಳ್ಳಿಯಲ್ಲಿ ವಿಟಮಿನ್ ಸಿ ಅಧಿಕ ಇರುತ್ತದೆ. ಈರುಳ್ಳಿಯಲ್ಲಿ ಇಷ್ಟೆಲ್ಲಾ ಉತ್ತಮ ಅಂಶಗಳು ಇರುವಾಗ, ಇದರಿಂದ ಖಾದ್ಯ ಯಾಕೆ ಮಾಡಬಾರದು? ಹೌದು, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈರುಳ್ಳಿ ಕಚೋರಿ ಅಥವಾ ಪ್ಯಾಜ್ ಕಚೋರಿ ಬೆಳಗ್ಗಿನ ತಿಂಡಿಗೆ ಮಾಡಿದರೆ, ಆರೋಗ್ಯಕ್ಕೆ ಹಿತ ಮತ್ತು ಟೈಮ್ ಕೂಡ ಸೇವ್ ಆಗುತ್ತೆ.

ಈರುಳ್ಳಿ ಕಚೋರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮೈದಾ ಅಥವಾ ಗೋಧಿ ಹಿಟ್ಟು - ಎರಡು ಕಪ್
• ಈರುಳ್ಳಿ - 3 (ಸಣ್ಣಗೆ ಹೆಚ್ಚಿದ)
• ಸೋಂಪು - ಒಂದು ಚಮಚ
• ಕೊತ್ತಂಬರಿ ಪುಡಿ - ಒಂದು ಚಮಚ
• ಒಣ ಮಾವಿನ ಪುಡಿ - ಅರ್ಧ ಚಮಚ
• ಕೆಂಪು ಮೆಣಸಿನ ಪುಡಿ - ಅರ್ಧ ಚಮಚ
• ಅರಿಶಿನ - ಕಾಲು ಚಮಚ
• ಹಸಿ ಮೆಣಸಿನಕಾಯಿ - ಎರಡು (ಸಣ್ಣಗೆ ಹೆಚ್ಚಿದ)
• ತುರಿದ ಶುಂಠಿ - ಒಂದು ಚಮಚ
• ಕಡಲೆ ಹಿಟ್ಟು - ಎರಡು ಚಮಚ
• ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ
• ಅಡುಗೆ ಎಣ್ಣೆ
• ರುಚಿಗೆ ತಕ್ಕಷ್ಟು ಉಪ್ಪು
• ಅಗತ್ಯಕ್ಕೆ ಬೇಕಾದಷ್ಟು ನೀರು
ಈರುಳ್ಳಿ ಕಚೋರಿ ತಯಾರಿಸುವ ವಿಧಾನ
ಮೊದಲನೆಯದಾಗಿ, ಒಂದು ತಟ್ಟೆಯಲ್ಲಿ ಹಿಟ್ಟು, ಉಪ್ಪು ಮತ್ತು ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಬೆರೆಸಿಕೊಳ್ಳಿ. ಬಳಿಕ, ಹಿಟ್ಟನ್ನು ಗಟ್ಟಿಯಾಗಲು ಬಿಡಿ. ನಂತರ, ಒಂದು ಬಾಣಲೆಗೆ ಎರಡು ದೊಡ್ಡ ಚಮಚ ಅಡುಗೆ ಎಣ್ಣೆಯನ್ನು ಹಾಕಿ, ಬಿಸಿ ಮಾಡಿ. ಈಗ ನೀವು ಅದೇ ಬಾಣಲೆಯಲ್ಲಿ ಸೋಂಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಬೇಕು. ಇದಾದ ಬಳಿಕ, ಕಡಲೆ ಹಿಟ್ಟು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಸುಮಾರು 2 ನಿಮಿಷಗಳ ಕಾಲ ಹುರಿಯಿರಿ.
ಈಗ ನೀವು ಬಾಣಲೆಯಲ್ಲಿ ಕೊತ್ತಂಬರಿ ಪುಡಿ, ಅರಿಶಿನ, ಕೆಂಪು ಮೆಣಸಿನಕಾಯಿ, ಒಣ ಮಾವಿನ ಪುಡಿ ಮತ್ತು ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ಹಾಗೆಯೇ ಈ ಮಿಶ್ರಣಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ತಣ್ಣಗಾಗಲು ಬಿಡಿ. ಈಗ ನೀವು ಹಿಟ್ಟಿನ ಉಂಡೆಗಳನ್ನು ಮಾಡಿ, ಅವುಗಳ ಮಧ್ಯದಲ್ಲಿ ಈರುಳ್ಳಿ ಸ್ಟಫಿಂಗ್ ಅನ್ನು ತುಂಬಿ. ಸ್ಟಫಿಂಗ್ ಅನ್ನು ತುಂಬಿದ ಬಳಿಕ, ಉಂಡೆಗಳನ್ನು ಮುಚ್ಚಿ ಮತ್ತು ಹಗುರವಾದ ಕೈಗಳಿಂದ ಸ್ವಲ್ಪ ಸುತ್ತಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಇದರಲ್ಲಿ ಕಚೋರಿ ಹಾಕಿ. ಕಚೋರಿಗಳನ್ನು ಕಡಿಮೆ ಉರಿಯಲ್ಲಿ ಅವು ಎರಡೂ ಬದಿಗಳಿಂದ ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ( ಗರಿಗರಿಯಾಗುವವರೆಗೆ) ಫ್ರೈ ಮಾಡಿ. ನಂತರ ಕಚೋರಿ ತಟ್ಟೆಗೆ ಹಾಕಿ. ಇಷ್ಟು ಮಾಡಿದರೆ, ಈರುಳ್ಳಿ ಕಚೋರಿಗಳು ಸಿದ್ಧವಾಗುತ್ತವೆ. ನೀವು ಹಸಿರು ಚಟ್ನಿ ಅಥವಾ ಚಹಾದೊಂದಿಗೆ ಬಿಸಿಬಿಸಿ ಕಚೋರಿಗಳನ್ನು ಸೇವಿಸಬಹುದು. ಮನೆಯಲ್ಲಿ ತಯಾರಿಸಿದ ಈರುಳ್ಳಿ ಕಚೋರಿಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತವೆ.



Click it and Unblock the Notifications
