Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಟೇಸ್ಟಿ, ಗರಿಗರಿ ಬನಾನಾ ಚಿಪ್ಸ್! ನಿಮಿಷದಲ್ಲಿ ಬೇಕರಿ ಸ್ಟೈಲ್ನಲ್ಲಿ ರೆಡಿ.. ಮಾಡೋದು ಹೇಗೆ?
ಚಿಪ್ಸ್ ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಚಿಪ್ಸ್ ಫೇವರಿಟ್. ಮಕ್ಕಳಂತೂ ಚಿಪ್ಸ್ಗಾಗಿ ಹಠ ಮಾಡೋದು ಸಾಮಾನ್ಯ. ನಿಮ್ಮ ಮನೆಯಲ್ಲಿಯೂ ಮಕ್ಕಳು ಚಿಪ್ಸ್ ಬೇಕು ಅಂತ ಹಠ ಮಾಡ್ತಾರಾ? ಹಾಗಿದ್ರೆ, ನಿಮಿಷಗಳಲ್ಲಿ ಆರೋಗ್ಯಕರ ಬಾಳೆಹಣ್ಣಿನ ಚಿಪ್ಸ್ (Banana Chips) ಮಾಡಿಕೊಡಿ. ನಾಲ್ಕು ಬಾಳೆಹಣ್ಣುಗಳು ಇದ್ದರೆ ಸಾಕು, ಆರೋಗ್ಯಕರ ಬಾಳೆಹಣ್ಣಿನ ಚಿಪ್ಸ್ ಮಾಡಬಹುದು. ಹಾಗಿದ್ರೆ, ಬಾಳೆಕಾಯಿ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ವಿಧಾನವನ್ನು (Banana Chips Recipe) ತಿಳಿಯೋಣ.
ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಚಿಪ್ಸ್ ಸಿಗುತ್ತದೆ. ಇವು ಕಲರ್ ಫುಲ್ ಮತ್ತು ಆಕರ್ಷಕ ಪ್ಯಾಕೇಜಿಂಗ್ನಲ್ಲಿ ಬರುತ್ತವೆ. ಮಕ್ಕಳು ಇವುಗಳನ್ನು ತಿನ್ನಲು ಹಠ ಮಾಡುತ್ತಾರೆ. ಆದರೆ, ಇವುಗಳಲ್ಲಿರುವ ರಾಸಾಯನಿಕ, ಹೆಚ್ಚು ಉಪ್ಪು ಮತ್ತು ಎಣ್ಣೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ. ಈ ಪರಿಸ್ಥಿತಿಯಲ್ಲಿ ಮನೆಯಲ್ಲಿ ತಯಾರಿಸಿದ ಬಾಳೆಹಣ್ಣಿನ ಚಿಪ್ಸ್ ರುಚಿಕರ ಮತ್ತು ಆರೋಗ್ಯಕರ ಆಯ್ಕೆಯಾಗಿದೆ. ಇದನ್ನು ಕಚ್ಚಾ ಬಾಳೆಹಣ್ಣಿನಿಂದ ತಯಾರಿಸಬಹುದು. ಮತ್ತು ಇದನ್ನು ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ಮಾಡಬಹುದು. ಇದು ಫೈಬರ್ ಮತ್ತು ಶಕ್ತಿಯಿಂದ ಸಮೃದ್ಧವಾಗಿದೆ.

ಬಾಳೆಕಾಯಿ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಸಿಪ್ಪೆ ಸುಲಿದ ಬಾಳೆಹಣ್ಣು - 4
• ಎಣ್ಣೆ - ಹುರಿಯಲು
• ಉಪ್ಪು - ರುಚಿಗೆ ತಕ್ಕಂತೆ
• ಸ್ಪೈಸ್ - 2 ಸ್ಪೂನ್
• ಗರಂ ಮಸಾಲ - ಅರ್ಧ ಚಮಚ
• ಖಾರದ ಪುಡಿ - ಅರ್ಧ ಚಮಚ
ಬಾಳೆಕಾಯಿ ಚಿಪ್ಸ್ ತಯಾರಿಸುವ ವಿಧಾನ
ಮೊದಲು, ಬಾಳೆಹಣ್ಣನ್ನು ತೆಗದುಕೊಂಡು ಅದರ ಸಿಪ್ಪೆ ತೆಗೆದು, ಸಣ್ಣ ಅಥವಾ ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಗ್ಯಾನ್ ಆನ್ ಮಾಡಿ, ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಇದಾದ ಬಳಿಕ, ಕತ್ತರಿಸಿದ ಬಾಳೆಹಣ್ಣುಗಳನ್ನು ಬಿಸಿ ಬಾಣಲೆಯಲ್ಲಿ ಹಾಕಿ. ಮತ್ತು ಅವು ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಚಿಪ್ಸ್ ಗರಿಗರಿಯಾದ ಬಳಿಕ ಹೊರಗೆ ತೆಗೆದು, ಪಾತ್ರೆ ಅಥವಾ ಟಿಶ್ಯೂ ಪೇಪರ್ ಮೇಲೆ ಹಾಕಿ. ಇದಾದ ಬಳಿಕ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಿ. ಅದರಲ್ಲಿ ಹುರಿದ ಚಿಪ್ಸ್ ಹಾಕಿ. ಇದರ ಬಳಿಕ ಮಸಾಲಾ ಮತ್ತು ಸ್ವಲ್ಪ ಉಪ್ಪನ್ನು ಅದರ ಮೇಲೆ ಹಾಕಿ. ಇಷ್ಟು ಮಾಡಿದರೆ ಸಾಕು, ಮನೆಯಲ್ಲಿಯೇ ಬಾಳೆಹಣ್ಣಿನ ಚಿಪ್ಸ್ ಸಿದ್ಧವಾಗುತ್ತದೆ.

ಬಾಳೆಹಣ್ಣಿನ ಚಿಪ್ಸ್ ಜೊತೆಗೆ ಬಾಳೆಹಣ್ಣಿನ ಶೇಕ್ (Banana Shake Recipe) ಕೂಡ ಮಾಡಬಹುದು. ಇದು ತುಂಬಾ ಆರೋಗ್ಯಕರ ಪಾನೀಯ. ಇದನ್ನು ಹಾಲು ಮತ್ತು ಮಾಗಿದ ಬಾಳೆಹಣ್ಣನ್ನು ಬೆರೆಸಿ ತಯಾರಿಸಲಾಗುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ಇದು ದೇಹವನ್ನು ಬಲಪಡಿಸುತ್ತದೆ ಮತ್ತು ಶಕ್ತಿ ತುಂಬುತ್ತದೆ. ಈ ಶೇಕ್ ಕುಡಿಯಲು ರುಚಿಕರವಾಗಿರುತ್ತದೆ. ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಹೊರತಾಗಿ, ಬೇಸಿಗೆಯಲ್ಲಿ ತಣ್ಣನೆಯ ಬಾಳೆಹಣ್ಣಿನ ಶೇಕ್ ಸೇವನೆ ಒಳ್ಳೆಯದು. ಇದು ಆಯಾಸ ನಿವಾರಿಸುತ್ತದೆ. ನಾವು ಮನೆಯಲ್ಲಿ ನಿಮಿಷಗಳಲ್ಲಿ ಬಾಳೆಹಣ್ಣಿನ ಶೇಕ್ ತಯಾರಿಸಬಹುದು.
ಬಾಳೆಹಣ್ಣಿನ ಶೇಕ್ ತಯಾರಿಸಲು ಬೇಕಾದ ಪದಾರ್ಥಗಳು
ಎರಡು ಹಣ್ಣಾಗಿರುವ ಬಾಳೆಹಣ್ಣು, 2 ಕಪ್ ತಣ್ಣಗಾದ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, 4 ರಿಂದ 5 ಐಸ್ ಕ್ಯೂಬ್ಗಳು, ಒಣ ಹಣ್ಣುಗಳು ಅಂದರೆ ಬಾದಾಮಿ, ಗೋಡಂಬಿ, ಪಿಸ್ತಾ. ಇವುಗಳನ್ನು ಕತ್ತರಿಸಿ ಬಳಸಬೇಕು. ಮೊದಲು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಕತ್ತರಿಸಿದ ಬಾಳೆಹಣ್ಣು, ಸಕ್ಕರೆ ಮತ್ತು ಸ್ವಲ್ಪ ಹಾಲು ಮಿಕ್ಸರ್ ಜಾರ್ಗೆ ಹಾಕಿ ಚೆನ್ನಾಗಿ ರುಬ್ಬಿ. ಬಳಿಕ ಹಾಲು ಮತ್ತು ಐಸ್ ಕ್ಯೂಬ್ ಹಾಕಿ. ಮಿಕ್ಸರ್ ಅನ್ನು ಆನ್ ಮಾಡಿ. ನೊರೆ ಬರುವವರೆಗೆ ಚೆನ್ನಾಗಿ ರಿಬ್ಬಿ. ಈಗ ಅದನ್ನು ಒಂದು ಲೋಟಕ್ಕೆ ಸುರಿಯಿರಿ. ಅದರ ಮೇಲೆ ಕತ್ತರಿಸಿದ ಒಣ ಹಣ್ಣುಗಳನ್ನು ಸೇರಿಸಿ. ಇಷ್ಟು ಮಾಡಿದರೆ, ಕೋಲ್ಡ್ ಬನಾನಾ ಶೇಕ್ ಸಿದ್ಧ.



Click it and Unblock the Notifications
