Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೆಳಗ್ಗೆ ತಿಂಡಿಗೆ ಹತ್ತಿಯಂತಹ ಬಾಳೆಹಣ್ಣಿನ ಬನ್ಸ್ ಮಾಡಿ: ಇಲ್ಲಿದೆ ಹೋಟೆಲ್ ಸ್ಟೈಲ್ ವಿಧಾನ!
ಮನೆಯಲ್ಲಿ ಬೆಳಗ್ಗೆ ತಿಂಡಿಗೆ ನೀವು ನಿತ್ಯ ಒಂದೊಂದು ರೀತಿಯ ತಿನಿಸುಗಳ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಅದ್ರಲ್ಲೂ ಕೆಲವರು ಹೋಟೆಲ್ ಶೈಲಿಯ ತಿಂಡಿಗಳ ಮಾಡಿ ಸವಿಯೋದಕ್ಕೆ ಇಷ್ಟಪಡುತ್ತಾರೆ. ಅದ್ರಲ್ಲೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಸವಿಯುವಂತಹ ಬನ್ಸ್ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ಸಾಮಾನ್ಯವಾಗಿ ಬೆಳಗ್ಗೆ ತಿಂಡಿ ಸಮಯದಲ್ಲಿ ಬನ್ಸ್ ಹಾಗೂ ತರಕಾರಿ ಕುರ್ಮ ಬಾಯಿ ರುಚಿ ಹೆಚ್ಚಿಸುವ ತಿಂಡಿ ಎನ್ನಬಹುದು.
ನೀವು ಉಡುಪಿ, ಮಂಗಳೂರು ತಿನಿಸುಗಳ ಸವಿಯುವ ಉದ್ದೇಶದಿಂದ ಹೋಟೆಲ್‌ಗೆ ತೆರೆಳಿದರೆ ಖಂಡಿತ ನೀವು ಅಲ್ಲಿ ಬನ್ಸ್ ನೋಡಿರುತ್ತೀರಿ. ಮೃದುವಾದ, ಉಬ್ಬಿರುವ ಬನ್ಸ್ ಅನ್ನು ಸವಿಯುತ್ತಿದ್ದರೆ ಮತ್ತೆ ಮತ್ತೆ ಸವಿಯುವ ಮನಸಾಗೋದು ಖಚಿತ. ಅದ್ರಲ್ಲೂ ಈ ಮಂಗಳೂರು ಬನ್ಸ್ ಎಲ್ಲರ ನೆಚ್ಚಿನ ಖಾದ್ಯ. ಬಾಳೆಹಣ್ಣು ಬಳಸಿ ಮಾಡುವ ಬನ್ಸ್ ಮೃದು ಹತ್ತಿಯಂತೆ, ಸಿಹಿ ಸಿಹಿಯಾಗಿ ಬರಲಿದೆ.
ಈ ಬನ್ಸ್ ಅನ್ನು ಬಹಳ ಸುಲಭವಾಗಿ, ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ನೀವು ಸಹ ವಿಶೇಷ ದಿನದಲ್ಲಿ ಅಥವಾ ವಿಶೇಷ ಸಮಯದಲ್ಲಿ ಈ ತಿಂಡಿಯನ್ನು ಮನೆಯಲ್ಲಿ ಮಾಡಬಹುದು. ಹಾಗಾದ್ರೆ ಬೆಳಗ್ಗೆ ತಿಂಡಿಗೆ ಮನೆಯಲ್ಲಿ ಈ ಮಂಗಳೂರು ಬನ್ಸ್ ಮಾಡುವುದು ಹೇಗೆ ನೋಡೋಣ. ಬಾಳೆಹಣ್ಣಿನ ಬನ್ಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾಳೆಹಣ್ಣು ಬನ್ಸ್ ಮಾಡಲು ಬೇಕಾಗುವ ವಸ್ತುಗಳು
- ಬಾಳೆಹಣ್ಣು
- ಮೈದಾ ಹಿಟ್ಟು
- ಎಣ್ಣೆ
- ಸಕ್ಕರೆ
- ಮೊಸರು
- ಉಪ್ಪು
- ಜೀರಿಗೆ
- ಸೋಡಾ ಪುಡಿ
ಬಾಳೆಹಣ್ಣು ಬನ್ಸ್ ಮಾಡುವ ವಿಧಾನವೇನು?
ಮೊದಲು ದೊಡ್ಡದಾಗಿರುವ 2 ಬಾಳೆಹಣ್ಣನ್ನು ಬೌಲ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ಅದು ಅಂಟು ಅಂಟಾದ ಪೇಸ್ಟ್ ಆಗಬೇಕು. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿಕೊಳ್ಳಿ. 3ರಿಂದ 4 ಚಮಚ ಹಾಕಿಕೊಂಡು ಮಿಕ್ಸ್ ಮಾಡಿ ಸಕ್ಕರೆ ಕರಗುವಂತೆ ಮಾಡಿ. ಈಗ ಇದಕ್ಕೆ ಸ್ವಲ್ಪ ಮೊಸರು, ಜೀರಿಗೆ, ಉಪ್ಪು, ಸೋಡಾ, ಎಣ್ಣೆ ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಈಗ ಇದಕ್ಕೆ ಮೈದಾ ಹಿಟ್ಟನ್ನು ಹಾಕಿಕೊಳ್ಳಿ. ಮೈದಾ ಹಿಟ್ಟು ಬೇಡ ಎಂದರೆ ಗೋಧಿ ಹಿಟ್ಟು ಕೂಡ ಬಳಸಬಹುದು. ನಿಧಾನವಾಗಿ ಕಲಸಿಕೊಳ್ಳುತ್ತಾ ಇರಿ. ಇದು ಗಟ್ಟಿಯಾಗಿ ಬರಬೇಕು. ಬಹಳ ಗಟ್ಟಿಯಾದರೆ ಸ್ವಲ್ಪ ಸ್ವಲ್ಪ ನೀರು ಸಹ ಹಾಕಿಕೊಳ್ಳಬಹುದು. ಹಿಟ್ಟನ್ನು ಚೆನ್ನಾಗಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ಬರಬೇಕು.
ನಂತರ ಹಿಟ್ಟಿನ ಮೇಲೆ ಎಣ್ಣೆ ಸವರಿ ಒಂದು ಪಾತ್ರೆಯಲ್ಲಿ ಮುಚ್ಚಿ ಇಟ್ಟುಕೊಳ್ಳಿ. ಈ ಹಿಟ್ಟನ್ನು ಸುಮಾರು 5 ಗಂಟೆಯಾದರು ಹಾಗೆಯೇ ಬಿಡಬೇಕು. ಅನಂತರ ಮತ್ತೆ ಮಿಕ್ಸ್ ಮಾಡಿ ಹದ ಮಾಡಿಕೊಳ್ಳಿ.
ಈಗ ಹಿಟ್ಟನ್ನು ಚಪಾತಿ ಲಟ್ಟಿಸುವ ಮುನ್ನ ಮಾಡುವ ಉಂಡೆಯಂತೆ ಮಾಡಿಕೊಂಡು ಲಟ್ಟಣಿಗೆಯಲ್ಲಿ ದಪ್ಪವಾಗಿ ಲಟ್ಟಿಸಿಕೊಳ್ಳಿ. ಚಪಾತಿಯಂತೆ ತೆಳುವಾಗಿ ಲಟ್ಟಿಸಬೇಡಿ. ದಪ್ಪವಾಗಿ ಇರಲಿ.
ನಿಮ್ಮ ಹಸ್ತಕ್ಕಿಂತ ಚೂರು ದೊಡ್ಡದಾಗಿದ್ದರೆ ಸಾಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಈ ಬನ್ಸ್ ಅನ್ನು ಒಂದೊಂದಾಗಿ ಹಾಕಿ ಕರಿದುಕೊಳ್ಳುವುದು ಉತ್ತಮ. ಎರಡೂ ಕಡೆ ಚೆನ್ನಾಗಿ ಕರಿಯಲು ಬಿಡಿ. ಉಬ್ಬಿ ಬರುವಂತೆ ಮಾಡಲು ಮೇಲೆ ಎಣ್ಣೆ ಹಾಕುತ್ತಾ ಇರಬೇಕು. ಇಷ್ಟಾದರೆ ನಿಮ್ಮ ಮುಂದೆ ಹೋಟೆಲ್ ರುಚಿಯ ಈ ಬನ್ಸ್ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
