Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಜೋಳದ ಅಂಬಲಿ ಅನ್ನೋ ಅಮೃತ: ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?
ನೀವು ದೇಹಕ್ಕೆ ಶಕ್ತಿ ನೀಡುವಂತಹ ಹಲವು ಖಾದ್ಯಗಳ ಮಾಡಿ ಸವಿಯೋದನ್ನು ಅಭ್ಯಾಸ ಮಾಡಿಕೊಂಡಿರಬಹುದು. ನಿತ್ಯ ಸೇವಿಸುವ ತಿಂಡಿ, ಊಟ, ಮಸಾಲೆ ಭರಿತ ಖಾದ್ಯಗಳು, ಮಾಂಸ ಇದೆಲ್ಲದರ ನಡುವೆ ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಹಾಗೆ ಸಮತೋಲನ ಕಾಪಾಡುವಂತಹ ಖಾದ್ಯಗಳು ಕೂಡ ಅಗತ್ಯವಾಗಿ ಬೇಕಾಗುತ್ತದೆ.
ಇಂತಹ ಖಾದ್ಯಗಳಲ್ಲಿ ಸಾಂಪ್ರದಾಯಿಕ ಶೈಲಿಯ ಅಡುಗೆ ಅಥವಾ ಖಾದ್ಯಗಳು ಯಾವಾಗಲು ನಿಮಗೆ ಸಹಾಯ ಮಾಡುತ್ತವೆ, ಇವು ನಿಮ್ಮ ದೇಹವನ್ನು ಸಮತೋಲನದಲ್ಲಿಡುವುದು, ಶಕ್ತಿ ನೀಡುವ ಜೊತೆಗೆ ನಿಮಗೆ ಬಲ ನೀಡುವ ಖಾದ್ಯಗಳಾಗಿವೆ. ಅದ್ರಲ್ಲೂ ವಿವಿಧ ವಸ್ತುಗಳಿಂದ ಮಾಡಲ್ಪಡುವ ಅಂಬಲಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ.

ಅಂಬಲಿಗಳಲ್ಲಿ ಹತ್ತು ಹಲವು ರೀತಿಯ ಅಂಬಲಿ ನೀವು ಸೇವಿಸಿರಬಹುದು. ಅದ್ರಲ್ಲಿ ಮುಖ್ಯವಾಗಿ ರಾಗಿ ಅಂಬಲಿ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಗೆ ಈ ರಾಗಿ ಅಂಬಲಿ ನೀಡುವುದು ಅವರಲ್ಲಿ ಜೀರ್ಣಕ್ರಿಯೆ ದೇಹಕ್ಕೆ ಬಹಳ ಪ್ರಯೋಜನ ನೀಡಲಿದೆ. ಹಾಗೆ ನಾವಿಂದು ಜೋಳದಿಂದ ಮಾಡುವಂತಹ ರುಚಿ ರುಚಿಯಾದ ಅಂಬಲಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಜೋಳದಿಂದ ಮಾಡುವ ಪ್ರತಿಯೊಂದು ಖಾದ್ಯಗಳು ನಮಗೆ ಬಹಳ ಪ್ರಯೋಜನಕಾರಿ ಆದ್ರೆ ಈ ಅಂಬಲಿ ನಿಮ್ಮಲ್ಲಿ ಹೊಸ ರೀತಿಯ ಆಸ್ವಾದ ನೀಡಲಿದೆ. ಹಾಗಾದ್ರೆ ರುಚಿ ರುಚಿಯ ಈ ಜೋಳದ ಅಂಬಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೋಳದಿಂದ ಅಂಬಲಿ ಮಾಡಲು ಬೇಕಾಗುವ ವಸ್ತುಗಳು
- ಜೋಳದ ಹಿಟ್ಟು
- ಮೊಸರು
- ಶುಂಠಿ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಬೆಳ್ಳುಳ್ಳಿ
- ಉಪ್ಪು
- ಜೀರಿಗೆ
ಜೋಳದಿಂದ ಅಂಬಲಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿಕೊಂಡು ಬಿಸಿಯಾಗಲು ಬಿಡಿ. ಈಗ ಮತ್ತೊಂದು ಪಾತ್ರೆಯಲ್ಲಿ 1 ಕಪ್ ಮೊಸರು ಹಾಕಿ ಅದಕ್ಕೆ 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಮಜ್ಜಿಗೆ ರೀತಿ ಬರಬೇಕು. 5 ನಿಮಿಷ ಕಡೆದು ಮಜ್ಜಿಗೆ ಮಾಡಿ.
ಈಗ ಒಂದು ಬೌಲ್ನಲ್ಲಿ ಅರ್ಧ ಕಪ್ ಜೋಳದ ಹಿಟ್ಟು ಹಾಕಿಕೊಂಡು ಅದಕ್ಕೆ 1 ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು. ಗಂಟುಗಳಿಲ್ಲದಂತೆ ಮಿಶ್ರಣ ಮಾಡಿ. ಈಗ ಒಲೆ ಮೇಲಿರುವ ಕುದಿಯುತ್ತಿರುವ ನೀರಿಗೆ ಉಪ್ಪು ಹಾಕಿ ಬಳಿಕ ಮಿಕ್ಸ್ ಮಾಡಿದ್ದ ಜೋಳದ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ.
ಈಗ ಒಂದು ಕುಟಾಣಿಯಲ್ಲಿ ಜೀರಿಗೆ, ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿ ಇಟ್ಟುಕೊಳ್ಳಿ. ಈಗ ಮೊದಲು ಮಾಡಿದ್ದ ಮಜ್ಜಿಗೆಗೆ ಮತ್ತೆ ಸ್ವಲ್ಪ ನೀರು ಹಾಕಿ. ಈಗ ಈ ಮಜ್ಜಿಗೆಯನ್ನು ಜೋಳದ ಹಿಟ್ಟಿಗೆ ಹಾಕಿ ಮತ್ತೆ ಮಿಕ್ಸ್ ಮಾಡಬೇಕು. ಅನಂತರ ಜಜ್ಜಿಕೊಂಡಿದ್ದ ಬೆಳ್ಳುಳ್ಳಿ ಜೀರಿಗೆ ಪದಾರ್ಥಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತಕ್ಷಣ ಸೇವಿಸುವುದಾದರೆ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿಕೊಳ್ಳಬಹುದು. ಹಾಗೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಕುಡಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ಜೋಳದ ಅಂಬಲಿ ಸಿದ್ದವಾಗುತ್ತೆ. ನೀವಿದನ್ನು ಒಮ್ಮೆ ಕುಡಿದು ನೋಡಿದ್ರೆ ನಿತ್ಯ ಇದನ್ನು ಸೇವಿಸುತ್ತೀರಿ. ಇದು ದೇಹಕ್ಕೆ ಹಲವು ರೀತಿಯ ಪ್ರಯೋಜನಗಳ ನೀಡಲಿದೆ. ಮಕ್ಕಳಿಗೆ ಇದನ್ನು ಮಾಡಿ ನೀಡುವುದು ಅವರ ಆರೋಗ್ಯ ಹಾಗೆ ದೇಹಕ್ಕೆ ಬಹಳ ಉತ್ತಮ ಖಾದ್ಯ ಆಗಿರಲಿದೆ.



Click it and Unblock the Notifications