Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಿಟ್ಟು ರುಬ್ಬದೆ ದಿಢೀರ್ ಮಾಡಿ ಜೋಳದ ದೋಸೆ..! 5 ನಿಮಿಷವೂ ಹಿಡಿಯಲ್ಲ..!
ನೀವು ಬ್ರೇಕ್ಫಾಸ್ಟ್ ಸ್ವಲ್ಪ ಅದ್ಭುತ ರುಚಿ ನೀಡಲಿ ಎಂಬ ಕಾರಣಕ್ಕೆ ಹೊಸದಾಗಿ ಪ್ರಯತ್ನಿಸುವ ಅಭ್ಯಾಸ ಇಟ್ಟುಕೊಂಡಿರಬಹುದು. ಹಾಗೆ ಹೊಸದಾಗಿ ಅಲ್ಲದಿದ್ದರೂ ದೋಸೆಯನ್ನೇ ವಿಶೇಷ ರೀತಿಯಲ್ಲಿ ಮಾಡಿ ಸವಿಯಲು ಮುಂದಾಗಿರಬಹುದು. ಸಾಮಾನ್ಯವಾಗಿ ನಾವು ಉದ್ದು, ಅಕ್ಕಿ ನೆನೆಸಿಟ್ಟು ಬಹುತೇಕ ಎಲ್ಲಾ ವಿಧವಾದ ದೋಸೆ ಸವಿಯುತ್ತೇವೆ. ಆದ್ರೆ ಅದರಲ್ಲೂ ಒಂದಿಷ್ಟು ವಿಶೇಷ ಹಾಗೂ ವಿಭಿನ್ನ ರುಚಿಯಲ್ಲಿ ಮಾಡಬಹುದು.
ಇನ್ನು ದೋಸೆ ಅಂದರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಮನೆ ಮಂದಿ ಎಲ್ಲಾ ಕುಳಿತು ದೋಸೆ ಸವಿಯಲು ಇಷ್ಟಪಡುತ್ತಾರೆ. ಒಂದು ಚಟ್ನಿ ಅಥವಾ ಸಾಂಬಾರ್ ಇದ್ದರೆ ಸಾಕು, ದೋಸೆ ಸವಿಯಲು ಅದ್ಭುತ ರುಚಿ ನೀಡುತ್ತೆ. ಅದರಲ್ಲು ಮಸಾಲೆ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ರವೆ ದೋಸೆ ಎಲ್ಲರು ಇಷ್ಟಪಡುವ ಬಗೆಯಾಗಿದೆ. ಆದ್ರೆ ನಾವಿಂದು ವಿಶೇಷ ಎನಿಸುವಂತಹ ವಿಭಿನ್ನ ದೋಸೆ ಮಾಡಿ ಸವಿಯಲು ಮುಂದಾಗೋಣ.

ನಾವಿಂದು ಜೋಳದ ಹಿಟ್ಟಿನಲ್ಲಿ ದೋಸೆ ಕುರಿತು ತಿಳಿಯೋಣ. ಸಾಮಾನ್ಯವಾಗಿ ಜೋಳದ ಹಿಟ್ಟಿನಿಂದ ರೊಟ್ಟಿ ಮಾಡಿ ಸವಿಯುವುದು ನೀವು ನೋಡಿರಬಹುದು. ಹಾಗೆ ಖಡಕ್ ರೊಟ್ಟಿಯನ್ನು ನೀವು ಕೂಡ ಸವಿದಿರಬಹುದು. ಆದ್ರೆ ಜೋಳದ ಹಿಟ್ಟಿನ ನೀರ್ ದೋಸೆ ಎಂದಾದ್ರು ಸವಿದಿದ್ದೀರಾ? ನಾವಿಂದು ಈ ವಿಶೇಷ ರುಚಿಯ ದೋಸೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಈ ಜೋಳದ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಜೋಳದ ದೋಸೆ ಮಾಡಲು ಬೇಕಾಗುವ ಪದಾರ್ಥಗಳು?
- ಜೋಳದ ಹಿಟ್ಟು - 250 ಗ್ರಾಂ
- ಈರುಳ್ಳಿ
- ಹಸಿರು ಮೆಣಸಿನಕಾಯಿ
- ಜೀರಿಗೆ
- ಶುಂಠಿ
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಉಪ್ಪು
- ಕರಿಬೇವು
- ಅಕ್ಕಿ ಹಿಟ್ಟು
- ಎಣ್ಣೆ
ಜೋಳದ ದೋಸೆ ಮಾಡುವ ವಿಧಾನವೇನು?
ಒಂದು ಬೌಲ್ನಲ್ಲಿ ಜೋಳದ ಹಿಟ್ಟು ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿಮೆಣಸು ಹಾಕಿ, ಹಾಗೆ ಇದಕ್ಕೆ ಜೀರಿಗೆ, ತುರಿದ ಶುಂಠಿ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಕರಿಬೇವು, 2 ಸ್ಪೂನ್ ಅಕ್ಕಿ ಹಿಟ್ಟು, ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಹಿಟ್ಟು ತೆಗೆದುಕೊಂಡ ಅಳತೆಯಷ್ಟೇ ನೀರು ಹಾಕಿಕೊಂಡು ಮಿಕ್ಸ್ ಮಾಡಿ.
ಈ ಹಿಟ್ಟು ಗಂಟು ಗಂಟಾಗದಂತೆ ನೋಡಿಕೊಳ್ಳಿ. ಚೆನ್ನಾಗಿ ನೀರಾಗಿ ಬರುವಂತೆ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಬಾರದು, ಇದು ನೀರ್ ದೋಸೆಯಂತೆ ಬರಬೇಕಾದರೆ ನೀರು ಹೆಚ್ಚಾಗಿ ಬಳಸಿ, ಮತ್ತೆ ಬೇಕಾದರೆ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ 10 ನಿಮಿಷ ಹಿಟ್ಟನ್ನು ಇಡಿ.
10 ನಿಮಿಷದ ಬಳಿಕ ಒಲೆ ಮೇಲೆ ಕಾವಲಿ ಇಟ್ಟು ಕಾವಲಿ ಕಾದ ಬಳಿಕ ಬೇಕಾದರೆ ಎಣ್ಣೆ ಹಚ್ಚಿಕೊಳ್ಳಬಹುದು. ಈಗ ನೀರು ದೋಸೆ ಹಾಕಿಕೊಳ್ಳುವಂತೆ ಹಿಟ್ಟನ್ನು ಹಾಕಿ. ಹಾಗೆ ಮೇಲೆ ಎಣ್ಣೆ ಹಾಕಿಕೊಂಡು 2 ನಿಮಿಷ ಬಿಟ್ಟು ತಿರುಗಿಸಿ ಹಾಕಿಕೊಳ್ಳಿ. ಡೀಪ್ ಫ್ರೈ ಮಾಡಿದಷ್ಟು ಇದರ ರುಚಿ ಅದ್ಭುತವಾಗಿ ಬರಲಿದೆ. ಇಷ್ಟಾದರೆ ನಿಮ್ಮ ಮುಂದೆ ಜೋಳದ ಹಿಟ್ಟಿನ ದೋಸೆ ರೆಡಿಯಾಗುತ್ತೆ. ದಿಢೀರ್ ಎಂದು ಮಾಡಿಕೊಳ್ಳಬಹುದಾದ ದೋಸೆ ಇದಾಗಿದೆ. ಈ ರೀತಿಯ ದೋಸೆ ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.
ಇದಕ್ಕೆ ಹಿಂದಿನ ದಿನ ನೆನೆಸಿಡುವುದು ಬೇಡ, ರುಬ್ಬಿಕೊಳ್ಳುವುದು ಕೂಡ ಬೇಡ. ಹಾಗೆ ದಿಢೀರ್ ಎಂದು ರೆಡಿ ಮಾಡಿಕೊಳ್ಳಬಹುದು.



Click it and Unblock the Notifications
