Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಖತ್ ರುಚಿಯ ಜೋಳದ ಕಟ್ಲೆಟ್ ಟ್ರೈ ಮಾಡಿ..! 5 ನಿಮಿಷ ಸಾಕು
ಸಂಜೆ ಸಮಯದ ಸ್ನ್ಯಾಕ್ಸ್ಗೆ ನೀವು ಏನೆಲ್ಲಾ ಉಪಹಾರ ಸವಿದಿರುತ್ತೀರಿ. ಚಿಕನ್ ಕಟ್ಲೆಟ್, ತರಕಾರಿ ಕಟ್ಲೆಟ್ ಸಹ ಸವಿದಿರುತ್ತೀರಿ, ಆರೋಗ್ಯ ಹಾಗೂ ಬಾಯಿ ರುಚಿಯ ಹೆಚ್ಚಿಸುವ ಈ ಕಟ್ಲೆಟ್ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಗರಿ ಗರಿಯಾದ ಈ ಕಟ್ಲೆಟ್ಗಳನ್ನು ಒಂದೊಂದಾಗಿ ತಿನ್ನುತ್ತಿದ್ದರೆ ಆ ದಿನ ಊಟವೇ ಮರೆತು ಹೋಗಿರುತ್ತೆ. ಮಾಂಸಹಾರಿಗಳಿಗೆ ಚಿಕನ್ ಕಟ್ಲೆಟ್ ರುಚಿ ನೀಡಿದರೆ ಸಸ್ಯಹಾರಿಗಳಿಗೆ ತರಕಾರಿ ಕಟ್ಲೆಟ್, ಜೋಳದ ಕಟ್ಲೆಟ್ ಅತ್ಯುತ್ತಮ ರುಚಿ ನೀಡಲಿದೆ.
ಒಮ್ಮೆ ನೀವು ಕಟ್ಲೆಟ್ ಮಾಡಿ ಇಟ್ಟು ಊಟ ಸಮಯದಲ್ಲೋ ಅಥವಾ ಏನಾದರು ಸ್ನ್ಯಾಕ್ಸ್ ಸವಿಯಬೇಕು ಎಂಬ ಮನಸಾದಾಗ ಬಿಸಿ ಮಾಡಿಕೊಂಡು ಸವಿಯಬಹುದು. ವಿಭಿನ್ನವಾಗಿ ಬಾಯಿಗೆ ರುಚಿ ಎನಿಸುವ ಕಟ್ಲೆಟ್ ಮಾಡಿ ಸೇವಿಸಿದರೆ ನಿತ್ಯ ಸೇವಿಸುವ ತರಕಾರಿಯ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚೇ ಸೇವಿಸುವುದು ಖಂಡಿತಾ.
ಅದ್ರಲ್ಲೂ ನಾವಿಂದು ಈ ಜೋಳದಿಂದ ಮಾಡುವ ರುಚಿಕರ ಕಟ್ಲೆಟ್ ಕುರಿತು ತಿಳಿದುಕೊಳ್ಳೋಣ. ಜೋಳದಿಂದ ಮಾಡಿದ ಈ ಕಟ್ಲೆಟ್ಗಳು ಎಷ್ಟೊಂದು ರುಚಿಕರ ಆಗಿರುತ್ತೆ ಅಂದ್ರೆ ಒಮ್ಮೆ ಸವಿದರೆ ನೀವು ಮತ್ತೆ ಮತ್ತೆ ಸವಿಯಲು ಮುಂದಾಗೋದು ಪಕ್ಕ. ಹಾಗಾದ್ರೆ ನಾವಿಂದು ಈ ಜೋಳದ ಕಟ್ಲೆಟ್ ಮಾಡೋದು ಹೇಗೆ ಎಂಬುದನ್ನು ತಿಳಿಯೋಣ.

ಜೋಳದ ಕಟ್ಲೆಟ್ ಮಾಡಲು ಬೇಕಾಗುವ ಪದಾರ್ಥಗಳೇನು? ಯಾವ ರೀತಿ ಮಾಡಬೇಕು? ಹಿಟ್ಟು ಹೇಗೆ ರೆಡಿ ಮಾಡಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೋಳದ ಕಟ್ಲೆಟ್ ಮಾಡಲು ಬೇಕಾಗುವ ವಸ್ತುಗಳು
- ಜೋಳ- 1 ಕಪ್
- ಆಲೂಗಡ್ಡೆ -1
- ಶುಂಠಿ
- ಅವಲಕ್ಕಿ-1 ಕಪ್
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ಚಾಟ್ ಮಸಾಲ
- ಖಾರದ ಪುಡಿ
- ಒಂಕಾಳು
- ಗರಂ ಮಸಾಲ
ಜೋಳದ ಕಟ್ಲೆಟ್ ಮಾಡುವುದು ಹೇಗೆ
ಮೊದಲು ಒಂದು ಬೌಲ್ನಲ್ಲಿ ಕಾಲು ಕಪ್ ಗಟ್ಟಿ ಅವಲಕ್ಕಿ ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಒಂದು ಕಪ್ ಬೇಯಿಸಿದ ಜೋಳ ತೆಗೆದುಕೊಂಡು ತರಿ ತರಿಯಾಗುವಂತೆ ಪುಡಿ ಮಾಡಿಕೊಂಡು ಬದಿಗೆ ಇಟ್ಟುಕೊಳ್ಳಿ. ಈಗ ಒಂದು ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಪುಡಿ ಪುಡಿ ಮಾಡಿ ಒಂದು ಬೌಲ್ಗೆ ಹಾಕಿ.
ಒಂದು ದೊಡ್ಡ ಬೌಲ್ ತೆಗೆದುಕೊಂಡು ಆಲೂಗಡ್ಡೆ, ಜೋಳದ ಹಿಟ್ಟು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಚಾಟ್ ಮಸಾಲ, ಖಾರದ ಪುಡಿ, ಓಂಕಾಳು, ಗರಂ ಮಸಾಲ ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಈಗ ಅವಲಕ್ಕಿ ಪುಡಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇದನ್ನು ಮಿಕ್ಸ್ ಮಾಡುವಾಗ ನೀರು ಹಾಕಿಕೊಳ್ಳಬೇಡಿ. ಹಾಗೆಯೇ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಹಿಟ್ಟು ತೆಗೆದುಕೊಂಡು ನಿಮಗೆ ಎಷ್ಟು ದೊಡ್ಡದಾಗಿ ಬೇಕೋ ಅಷ್ಟು ದೊಡ್ಡದಾಗಿ ತಟ್ಟಿಕೊಂಡು ಇಡಿ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಎಣ್ಣೆ ಹಚ್ಚಿಕೊಳ್ಳಿ. ಕಾವಲಿ ಬಿಸಿಯಾದಾಗ ತಟ್ಟಿಕೊಂಡಿರುವ ಕಟ್ಲೆಟ್ಗಳನ್ನ ಅದರ ಮೇಲೆ ಹಾಕಿ ಕಾಯಿಸಿಕೊಳ್ಳಿ.
ಒಮ್ಮೆ ಮೂರರಿಂದ ನಾಲ್ಕು ಕಟ್ಲೆಟ್ ಕಾಯಿಸಿಕೊಳ್ಳಿ. ಕಟ್ಲೆಟ್ ಅನ್ನು ತಿರುವಿಹಾಕಿಕೊಳ್ಳುತ್ತಾ ಫ್ರೈ ಮಾಡಿ. ಸುಮಾರು 15ರಿಂದ 20 ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಜೋಳದ ಕಟ್ಲೆಟ್ ರೆಡಿಯಾಗಿರುತ್ತದೆ, ಇದನ್ನು ನೀವು ಚಟ್ನಿ, ಸಾಸ್ ಜೊತೆಗೂ ಸವಿಯಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಈ ರೆಸಿಪಿ ಟ್ರೈ ಮಾಡಿ ನೋಡಿ.



Click it and Unblock the Notifications
