Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬ್ರೇಕ್ಫಾಸ್ಟ್ಗೆ ಥಟ್ ಅಂತ ಮಾಡಿ ಕೊತ್ತಂಬರಿ ರೈಸ್.! ವಿಧಾನ ಇಲ್ಲಿದೆ.!
ನೀವು ಬೆಳಗ್ಗೆ ಮಾಡುವ ತಿಂಡಿ ವಿಭಿನ್ನವಾಗಿ ರುಚಿ ರುಚಿಯಾಗಿ ಇರಲಿ ಎಂದುಕೊಳ್ಳುತ್ತೀರಿ, ಹೀಗಾಗಿ ಗಡಿಬಿಡಿಯಲ್ಲೂ ಅತ್ಯುತ್ತಮ ರುಚಿಯ ತಿಂಡಿಯನ್ನು ಮಾಡುವ ಕುರಿತು ಯಾವಾಗಲು ಆಲೋಚಿಸಿರುತ್ತೀರಿ. ಇಂತಹ ಸಮಯದಲ್ಲಿ ಹಲವು ರೀತಿಯ ರೈಸ್ ಐಟಂಗಳ ಮಾಡಿ ಸವಿಯುವುದು ನೋಡಬಹುದು. ಅದ್ರಲ್ಲೂ ಹೆಚ್ಚಾಗಿ ಚಿತ್ರಾನ್ನ, ಪುಳಿಯೋಗರೆ, ಪಲಾವ್, ಟೊಮೆಟೋ ಬಾತ್ ಹೀಗೆ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ನೋಡಬಹುದು.
ಹಾಗೆ ರೈಸ್ನಿಂದ ಮಾಡುವ ಖಾದ್ಯಗಳನ್ನು ಸುಲಭವಾಗಿ ಕಡಿಮೆ ಸಮಯದಲ್ಲ ಮಾಡಬಹುದಾಗಿರೋದ್ರಿಂದ ಎಲ್ಲರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಹಲವು ಬಗೆಯ ಅನ್ನದಿಂದ ಮಾಡುವ ಖಾದ್ಯಗಳು ಬೆಳಗ್ಗೆ ಸವಿದು ಬಾಕ್ಸ್ಗೆ ಹಾಕಿಕೊಂಡು ಹೋಗುವುದು ನೋಡಬಹುದು. ಇಂತಹ ಸಮಯದಲ್ಲಿ ನಾವು ಸ್ಪೆಷಲ್ ರೆಸಿಪಿಯಾಗಿ ಕೊತ್ತಂಬರಿ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ.

ಕೊತ್ತಂಬರಿ ರೈಸ್ ಮಾಡಲು ಕೆಲವೇ ವಸ್ತು ಹಾಗೆ ಕಡಿಮೆ ಸಮಯ ಸಾಕಾಗುತ್ತದೆ. ಹಾಗಾದ್ರೆ ಈ ಕೊತ್ತಂಬರಿ ರೈಸ್ ಮಾಡುವುದು ಹೇಗೆ? ಕೊತ್ತಂಬರಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊತ್ತಂಬರಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಎಣ್ಣೆ
- ಶುಂಠಿ
- ಬೆಳ್ಳುಳ್ಳಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಕಡಲೆ ಬೀಜ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕರಿಬೇವು
- ಈರುಳ್ಳಿ
- ಉಪ್ಪು
ಕೊತ್ತಂಬರಿ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಣ್ಣ ಶುಂಠಿ, ಬಿಡಿಸಿಕೊಂಡಿರುವ ಬೆಳ್ಳುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ. ಹಾಗೆ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದನ್ನು ಆದಷ್ಟು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾಗಲು ಕಡಲೆ ಬೀಜ ಹಾಕಿ ಫ್ರೈ ಮಾಡಿ. 1 ನಿಮಿಷದ ಬಳಿಕ ಸ್ವಲ್ಪ ಕಡಲೆ ಬೇಳೆ, ಉದ್ದಿನ ಬೇಳೆ ಸಹ ಹಾಕಿಕೊಂಡು ಅದರ ಬಣ್ಣ ಬದಲಾಗುವವರೆಗೂ ಪ್ರೈ ಮಾಡಿಕೊಳ್ಳಿ. 2ರಿಂದ 3 ನಿಮಿಷದ ಬಳಿಕ ಸಾಸಿವೆ ಹಾಗೂ ಜೀರಿಗೆ ಹಾಕಿ ಫ್ರೈ ಮಾಡಿ ನಂತರ ಕರಿಬೇವು, ಹಾಗೂ ಈರುಳ್ಳಿ ಸಹ ಹಾಕಿಕೊಂಡು ಫ್ರೈ ಆಗಲು ಬಿಡಿ.
ಮತ್ತೆ 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಮಿಕ್ಸಿಯಲ್ಲಿ ಹಾಕಿ ರುಬ್ಬಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿಕೊಂಡು ಫ್ರೈ ಮಾಡಬೇಕು. ಹಸಿ ವಾಸನೆ ಹೋಗಿ ಚೆನ್ನಾಗಿ ಎಣ್ಣೆ ಬಿಟ್ಟುಕೊಂಡಾಗ ಇದಕ್ಕೆ ಮೊದಲೇ ಮಾಡಿಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ಹಾಕಿಕೊಳ್ಳಬೇಕು.
ಅನ್ನ ಹಾಕಿಕೊಂಡ ಬಳಿಕ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮಸಾಲೆ ಚೆನ್ನಾಗಿ ರೈಸ್ಗೆ ಹಿಡಿಯುವಂತೆ ತಿರುಗಿಸಿಕೊಳ್ಳಿ. ಬೇಕಾದರೆ ಜೊನೆಯಲ್ಲಿ ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕೊತ್ತಂಬರಿ ರೈಸ್ ರೆಡಿಯಾಗುತ್ತದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಅಥವಾ ಊಟಕ್ಕೂ ಕೂಡ ಮಾಡಿ ಸವಿಯಬಹುದು.
ಈ ರೈಸ್ ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳಿಂದ ಐಟ್ ಎಂದು ಮಾಡಬಹುದು. ಹಾಗೆ ರುಚಿಯಲ್ಲೂ ಕೂಡ ಅದ್ಭುತವಾಗಿರುತ್ತೆ, ನೀವು ಇದಕ್ಕೆ ಪೇಸ್ಟ್ ರುಬ್ಬಿಕೊಳ್ಳುವಾಗ ಬೇಕಿದ್ದರೆ ಒಂದೆರಡು ಪುದಿನ ಎಲೆಗಳನ್ನು ಕೂಡ ಸೇರಿಸಿಕೊಳ್ಳಬಹುದು. ಇದರಿಂದ ರೈಸ್ನಿಂದ ಘಮಲು ಬರುತ್ತದೆ. ರುಚಿಯೂ ಹೆಚ್ಚಾಗುತ್ತದೆ.



Click it and Unblock the Notifications
