Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವೆಂದು ಮಾಡಿರದ ಕೊತ್ತಂಬರಿ ಸೊಪ್ಪಿನ ಸ್ಪೆಷಲ್ ಚಟ್ನಿ ಇದು..! ಸವಿದು ನೋಡಿ!
ನಾವು ಬೆಳಗ್ಗೆ ತಿಂಡಿಗೆ ಇಲ್ಲವೆ ಊಟಕ್ಕೆ ಸ್ಪೆಷಲ್ ಆಗಿರುವ ಚಟ್ನಿ ಮಾಡಲು ಮುಂದಾಗಿರುತ್ತೇವೆ. ಹಲವು ರೀತಿಯ ತರಕಾರಿಗಳು, ಬೇಳೆ ಕಾಳುಗಳ ಬಳಸಿ ಚಟ್ನಿ ಮಾಡಿ ಸವಿದಿರುತ್ತೇವೆ. ತಿಂಡಿಯ ಜೊತೆಗೆ ಚಟ್ನಿ ಮಾಡಿದರೆ ಮಾತ್ರವೇ ಬ್ರೇಕ್‌ಫಾಸ್ಟ್‌ಗೆ ಉತ್ತಮ ರುಚಿ ಬರುತ್ತದೆ. ಎಲ್ಲರ ಮನೆಯಲ್ಲೂ ಇದು ಕಾಮನ್ ಆಗಿ ಮಾಡಿಯೇ ಮಾಡಿರುತ್ತಾರೆ.
ಅದರಲ್ಲೂ ತೆಂಗಿನ ಕಾಯಿ ಚಟ್ನಿ, ಹುರಿಗಡಲೆ, ನೆಲಗಡಲೆ, ಹೀಗೆ ಹತ್ತಾರು ಬಗೆಯ ಚಟ್ನಿ ಮಾಡಿ ಸವಿದಿರುತ್ತೇವೆ. ಹಾಗೆ ಹಸಿರು ತರಕಾರಿಗಳ ಬಳಸಿ ಒಂದಿಷ್ಟು ಚಟ್ನಿ, ಪಲ್ಯ ಮಾಡುವುದು ಸಾಮಾನ್ಯ. ಅದ್ಭುತ ರುಚಿಯ ಚಟ್ನಿ ಇದ್ದರೆ ತಿಂಡಿಯನ್ನು ಅಷ್ಟೇ ಹೆಚ್ಚಾಗಿ ಸವಿಯುತ್ತೇವೆ. ಹಾಗೆ ನಾವು ವಿವಿಧ ಹೊಸ ಬಗೆಯ ಚಟ್ನಿ ಮಾಡುವ ಪ್ರಯತ್ನ ಮಾಡಿರುತ್ತೇವೆ.

ಹೀಗಾಗಿ ನಾವಿಂದು ಹೊಸ ರೀತಿಯಲ್ಲಿ ಕೊತ್ತಂಬರಿ ಸೊಪ್ಪಿನ ಅತ್ಯುದ್ಭುತ ರುಚಿಯ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಹಾಗಾದ್ರೆ ಈ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಬೇಕು? ಈ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಕೊತ್ತಂಬರಿ ಸೊಪ್ಪು
- ಟೊಮ್ಯಾಟೊ - 4
- ಹಸಿ ಮೆಣಸು
- ಕೊತ್ತಂಬರಿ ಬೀಜ
- ಜೀರಿಗೆ
- ಬೆಳ್ಳುಳ್ಳಿ
- ಹುಣಸೆಹಣ್ಣು
- ಕರಿಬೇವು
- ಎಣ್ಣೆ
- ಉಪ್ಪು
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕದೆಯೇ ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಕರಿಬೇವು, ಧನಿಯಾ ಕಾಳು, ಜೀರಿಗೆ, ಹುಣಸೆ ಹಣ್ಣು ಹಾಕಿಕೊಂಡು ಬಳಿಕ ಸ್ಪೂನ್ ಎಣ್ಣೆ ಹಾಕಿಕೊಂಡು ಬಳಿಕ ಒಲೆ ಹಚ್ಚಿ ಫ್ರೈ ಮಾಡಿಕೊಳ್ಳಿ. ಸುಮಾರು 2 ನಿಮಿಷಗಳ ಕಾಲ ಈ ವಸ್ತುಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಕೊತ್ತಂಬರಿ ಸೊಪ್ಪನ್ನು ಕಡ್ಡಿ ಇರುವಂತೆಯೇ ಸೇರಿಸಿಕೊಳ್ಳಿ. ಅಂದರೆ ಈ ಸೊಪ್ಪನ್ನು ಕತ್ತರಿಸಿಕೊಳ್ಳುವ ಅಗತ್ಯವಿಲ್ಲ. ಹಾಗೆ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಈ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. ಹಾಗೆ 2 ನಿಮಿಷ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಂಡು ಮತ್ತೆ 2 ನಿಮಿಷ ತಣ್ಣಗಾಗಲು ಬಿಡಿ.
ಈಗ ಅದೇ ಬಾಣಲೆಗೆ ಎರಡು ಟೊಮೆಟೋ ಹಾಕಿಕೊಂಡು ಎಣ್ಣೆ ಹಾಕಿ ಫ್ರೈ ಮಾಡಬೇಕು. ದೊಡ್ಡ ದೊಡ್ಡ ಪೀಸ್ ಆಗಿ ಟೊಮೆಟೋ ಹೆಚ್ಚಿಕೊಂಡಿರಿ. ಅನಂತರ ತಣ್ಣಗಾದ ಪದಾರ್ಥಗಳನ್ನು ಈಗ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಮಿಕ್ಸಿ ಜಾರ್‌ಗೆ ಉಪ್ಪು ಕೂಡ ಹಾಕಿಕೊಂಡು ಅದರ ಜೊತೆಗೆ ಫ್ರೈ ಮಾಡಿರುವ ಟೊಮೆಟೋ ಕೂಡ ಹಾಕಿಕೊಳ್ಳಿ.
ಮೊದಲು ನೀರು ಹಾಕದೆ ಒಂದೆರಡು ಸುತ್ತು ರುಬ್ಬಿದ ಬಳಿಕ ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದು ತರಿತರಿಯಾಗಿ ಇರಬೇಕು. ಈ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಕೊತ್ತಂಬರಿ ಸೊಪ್ಪಿನ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮಾಡಿ ಸವಿಯಬಹುದು, ತಿಂಡಿಯ ಜೊತೆಗೆ ಊಟಕ್ಕೂ ಕೂಡ ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications
