Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ರೀತಿಯ ತೆಂಗಿನಕಾಯಿ ಮಸಾಲ ಚಿತ್ರಾನ್ನ ನೀವೆಂದು ತಿಂದಿರಲ್ಲ..! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಬೆಳಗ್ಗೆ ತಿಂಡಿಗೆ ರೈಸ್‌ನಿಂದ ಮಾಡುವಂತಹ ಹಲವು ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ರೈಸ್‌ನಿಂದ ಮಾಡುವ ಪಲಾವ್, ಪುಳಿಯೋಗರೆ, ಚಿತ್ರಾನ್ನದಂತಹ ಖಾದ್ಯಗಳನ್ನು ಎಲ್ಲರು ಮಾಡುತ್ತಾರೆ. ಚಿತ್ರಾನ್ನ ಸಹ ಎಲ್ಲರ ನೆಚ್ಚಿನ ಖಾದ್ಯ, ಹೋಟೆಲ್, ಕ್ಯಾಂಟೀನ್‌ನಲ್ಲಿ ನೀಡುವಂತಹ ಚಿತ್ರಾನ್ನ ಎಲ್ಲರಿಗೂ ಇಷ್ಟವಾಗುತ್ತೆ.
ಚಿತ್ರಾನ್ನದಲ್ಲೂ ಹಲವು ಬಗೆಗಳಿರುವುದು ನೋಡಬಹುದು. ಹಾಗೆ ಮಸಾಲ ಚಿತ್ರಾನ್ನ ಅಂದ್ರೆ ಎಲ್ಲರ ಬಾಯಲ್ಲು ನೀರು ಬರುವುದು ನೋಡಬದುದು. ಮಸಾಲೆ ಭರಿತ ಚಿತ್ರಾನ್ನ ಎಲ್ಲರೂ ಇಷ್ಟಪಟ್ಟು ಸವಿಯುವ ಖಾದ್ಯ. ಆದ್ರೆ ಈ ಚಿತ್ರಾನ್ನ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ?

ಚಿತ್ರಾನ್ನ ಅಂದ್ರೆ ಕಡಿಮೆ ವಸ್ತುಗಳ ಬಳಸಿ ಥಟ್ ಅಂತ ಮಾಡಬಹುದು ಎಂಬ ತಿಳಿದಿರುತ್ತೀರಿ. ಆದ್ರೆ ರುಚಿ ರುಚಿಯ ಮಸಾಲ ಚಿತ್ರಾನ್ನ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಮಸಾಲೆ ತುಂಬಿರುವ ಚಿತ್ರಾನ್ನ ಅಂದರೆ ಎಲ್ಲರು ಇಷ್ಟಪಡುವುದು ನೋಡಬಹುದು. ಹಾಗೆ ಇದನ್ನು ಕೂಡ ಸುಲಭವಾಗಿ ಮಾಡಿ ಮುಗಿಸಬಹುದು.
ಮನೆಯಲ್ಲಿ ತೆಂಗಿನಕಾಯಿ ಮಸಾಲ ಚಿತ್ರಾನ್ನ ಮಾಡುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ತೆಂಗಿನಕಾಯಿ ಮಸಾಲ ಚಿತ್ರಾನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ತೆಂಗಿನಕಾಯಿ ಮಸಾಲ ಚಿತ್ರಾನ್ನ ಮಾಡಲು ಅಗತ್ಯವಾದ ವಸ್ತುಗಳು
- ಅನ್ನ
- ತೆಂಗಿನಕಾಯಿ
- ಹಸಿ ಮೆಣಸು
- ಕರಿಬೇವು
- ಒಣ ಮೆಣಸು
- ಜೀರಗೆ
- ಸಾಸಿವೆ
- ಇಂಗು
- ಉಪ್ಪು
- ಎಣ್ಣೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ನಿಂಬೆ ರಸ
- ಅರಶಿಣ ಪುಡಿ
ತೆಂಗಿನಕಾಯಿ ಮಸಾಲ ಚಿತ್ರಾನ್ನ ಮಾಡುವ ವಿಧಾನ ಇಲ್ಲಿದೆ
ಮೊದಲು ಒಂದು ಮಿಕ್ಸಿ ಜಾರ್‌ಗೆ ತುರಿದುಕೊಂಡಿರುವ ಅರ್ಧ ಕಪ್ ಕಾಯಿ, ಒಂದು ಗಡ್ಡೆ ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು, ಶುಂಠಿ, ಲವಂಗ, ಚಕ್ಕೆ, ಕೊತ್ತಂಬರಿ ಸೊಪ್ಪು ಸೇರಿಸಿಕೊಂಡು ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಈ ಮಸಾಲ ರುಬ್ಬಿಕೊಳ್ಳಬೇಕು. ಚಟ್ನಿಗಿಂತ ನುಣ್ಣಗೆ ರುಬ್ಬಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 4 ಸ್ಪೂನ್ ಎಣ್ಣೆ ಹಾಕಿ ಬಳಿಕ ಸ್ವಲ್ಪ ಶೇಂಗಾ ಬೀಜ ಹಾಕಿ ಹುರಿದುಕೊಳ್ಳಿ. ನಂತರ ಈ ಬೀಜಗಳನ್ನು ತೆಗೆದಿಟ್ಟುಕೊಳ್ಳಿ. ಈಗ ಎಣ್ಣೆಗೆ ಸಾಸಿವೆ, ಜೀರಿಗೆ, ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಇಂಗು ಕೂಡ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ.
ಈಗ ಕಾಲು ಸ್ಪೂನ್ ಅರಶಿಣ ಸಹ ಸೇರಿಸಿಕೊಂಡು ಮಿಶ್ರಣ ಚೆನ್ನಾಗಿ ಹುರಿದುಕೊಳ್ಳಿ. ಈಗ 1 ನಿಮಿಷ ಬಿಟ್ಟು ಹುರಿದುಕೊಂಡಿದ್ದ ಮಸಾಲೆ ಸೇರಿಸಿ ಕಾಲು ಕಪ್ ನೀರು ಹಾಕಿ ಉಪ್ಪು ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆಯಲ್ಲಿನ ನೀರು ಕಡಿಮೆಯಾಗುವವರೆಗೂ ಬೇಯಿಸಿ. 4 ನಿಮಿಷ ಆದರೂ ಬೇಯಿಸಿಕೊಳ್ಳಿ.
ಇದು ಗೊಜ್ಜಿನ ರೂಪಕ್ಕೆ ಬಂದ ಬಳಿಕ ಇದಕ್ಕೆ ನಿಂಬೆ ರಸ ಹಾಗೆ ಹುರಿದ ಕಡಲೆ ಬೀಜ ಹಾಕಿ ಒಲೆ ಆಫ್ ಮಾಡಿ ಮಿಕ್ಸ್ ಮಾಡಿಕೊಳ್ಳಿ. ಈಗ ಮೊದಲು ಮಾಡಿಕೊಂಡಿರುವ ಹುಡಿಯಾದ ಅನ್ನವನ್ನು ಸೇರಿಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ, ಹಾಕದೆಯೂ ಮಾಡಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತೆಂಗಿನಕಾಯಿ ಚಿತ್ರಾನ್ನ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಸವಿದು ನೋಡಿ.



Click it and Unblock the Notifications
