Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ತರಕಾರಿ, ಬೇಳೆ ಬಳಸದೆ ಮಾಡುವ ಕಾಯಿ ಸಾರು..! ಅದ್ಭುತ ರುಚಿ..!
ಮಧ್ಯಾಹ್ನದ ಊಟದ ಸಮಯಕ್ಕೆ ಹಾಗೂ ರಾತ್ರಿ ಊಟಕ್ಕೆ ಒಂದು ಸಾರು ಇದ್ದರೆ ಅದರ ರುಚಿ ಬೊಂಬಾಟ್ ಆಗಿರುತ್ತೆ. ಅದ್ರಲ್ಲೂ ಕಾಯಿಯಿಂದ ಮಾಡುವ ಸಾರು ಅದ್ಭುತ ರುಚಿ ನೀಡಲಿದೆ, ನೀವು ಬೇಳೆ ಸಾರು, ಹೂರ್ಣ ಮಾಡುವಾಗ ಉಳಿದ ಹೂರ್ಣದಿಂದ ಮಾಡುವಂತಹ ಸಾರನ್ನು ಪ್ರಯತ್ನಿಸಿರಬಹುದು. ಇದು ಅನ್ನದ ಜೊತೆಗೆ ಅದ್ಭುತ ರುಚಿ ನೀಡಲಿದೆ.
ಹೀಗೆ ಅನ್ನದ ಜೊತೆಗೆ ಕಾಯಿ ಸಾರು ಕೂಡ ಸಾಂಪ್ರದಾಯಿಕವಾಗಿ ಬಹಳ ಕಾಲದಿಂದಲೂ ಮಾಡಿಕೊಂಡು ಬಂದಿರುವ ಸಾರು. ಹಳ್ಳಿ ಮನೆಗಳಲ್ಲಿ ಹಿರಿಯರು ಈ ಸಾರನ್ನು ಯಾವಾಗಲು ಮಾಡುತ್ತಿರುತ್ತಾರೆ. ಹಾಗೆ ಇದರಿಂದ ಆರೋಗ್ಯರಕರ ಲಾಭವೂ ಇದೆ ಎಂದು ನಂಬಲಾಗಿದೆ. ಹಾಗೆ ಕಾಯಿ ಸಾರು ಮಾಡಲು ಕಡಿಮೆ ಸಮಯ ಕಡಿಮೆ ವಸ್ತುಗಳಿದ್ದರೆ ಸಾಕು.

ನಾವು ಕೂಡ ಇಂದು ಅನ್ನದ ಜೊತೆಗೆ ಸವಿಯಲು ಕಾಯಿ ಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಕಾಯಿ ಸಾರು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಕಾಯಿ ಸಾರಿಗೆ ಒಂದು ಒಗ್ಗರಣೆ ಹಾಕಿ ಇಟ್ಟರೆ ಈ ಸಾರಿನ ರುಚಿ ಅದ್ಭುತವಾಗಿರುತ್ತೆ. ಹಾಗಾದ್ರೆ ಕಾಯಿ ಸಾರು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಯಿ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ತೆಂಗಿನ ಕಾಯಿ - 1/2 ಕಪ್
- ಸಾಂಬಾರ್ ಪುಡಿ - 2 ಟೀಸ್ಪೂನ್
- ಹುಣಸೆಹಣ್ಣು-5 ಗ್ರಾಂ
- ಜೀರಿಗೆ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1/4 ಕಪ್
- ಬೆಳ್ಳುಳ್ಳಿ-1
- ಹುರಿಗಡಲೆ - 1 tbs
- ಈರುಳ್ಳಿ - 2
- ಒಣ ಮೆಣಸಿನಕಾಯಿ - 2
- ಕರಿಬೇವು
- ಸಾಸಿವೆ
- ಇಂಗು
- ಅಡುಗೆ ಎಣ್ಣೆ
- ಉಪ್ಪು
ಕಾಯಿ ಸಾರು ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ಹಾಕಿಕೊಳ್ಳಿ. ನೀವು ತುರಿದು ಹಾಕಬಹುದು ಇಲ್ಲವೆ ಸಣ್ಣದಾಗಿ ಕತ್ತರಿಸಿಕೊಂಡು ಕೂಡ ಹಾಕಿಕೊಳ್ಳಬಹುದು. ಈರುಳ್ಳಿ, ಕೊತ್ತಂಬರಿ, ಬೆಳ್ಳುಳ್ಳಿ, ಹುರಿಗಡಲೆ, ಹುಣಸೆ ಹುಳಿ, ಸಾಂಬಾರ್ ಪುಡಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಅರಶಿಣ ಪುಡಿ ಹಾಕಿ ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಫ್ರೈ ಆಗಲು ಬಿಡಬೇಕು. ನಂತರ ಇದಕ್ಕೆ ರುಚಿಕೆ ತಕ್ಕಷ್ಟು ಉಪ್ಪು ಹಾಗೂ ತೆಳುವಾಗಿರಬೇಕು ಅಂದ್ರೆ ನೀರು ಹಾಕಿಕೊಳ್ಳಿ.
2 ನಿಮಿಷ ಸಣ್ಣಗೆ ಕುದಿಯಲು ಬಿಡಬೇಕು. ಒಂದು ಕುದಿಬಂದರೆ ಸಾಕಾಗುತ್ತದೆ. ಒಟ್ಟು 5 ನಿಮಿಷ ಕುದಿಬಂದರೆ ಸಾಕು. ಕೊನೆಯಲ್ಲಿ ರುಚಿ ನೋಡಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಕಾಯಿ ಸಾರು ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದಕ್ಕೆ ಯಾವುದೇ ತರಕಾರಿ ಬಳಸದೆ ಮಾಡಬಹುದು.



Click it and Unblock the Notifications
