Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇದು ಮಾಮೂಲಿ ರೈಸ್ ಅಲ್ಲ..ತೆಂಗಿನಕಾಯಿ ರೈಸ್..! ಮಾಡೋದು ಸುಲಭ.!
ಬೆಳಗ್ಗೆಯ ತಿಂಡಿ ಮಾಡ್ಬೇಕು ಅಂದ್ರೆ ನೀವು ಹೆಚ್ಚು ಆಲೋಚನೆಯಲ್ಲಿ ಮುಳುಗಬೇಕು. ಯಾಕಂದ್ರೆ ನಿತ್ಯ ಒಂದೇ ರೀತಿ ತಿಂಡಿ ಮಾಡುವುದು ಅಂದ್ರೆ ನಿಮಗೂ ಬೇಜಾರು ತಿನ್ನಲ್ಲು ಸಹ ಅಷ್ಟೇ ಬೇಜಾರು. ಆದ್ರೆ ಹೊಸದಾಗಿ ಮಾಡೋದಾದ್ರು ಏನು? ಇದು ಎಲ್ಲರಿಗೂ ಕಾಡುವ ಸಾಮಾನ್ಯ ಪ್ರಶ್ನೆಯಾಗಿದೆ.
ನಿತ್ಯ ಬೆಳಗಾದರೆ ಯಾವುದಾದರು ಒಂದು ತಿಂಡಿ ಮಾಡಬೇಕು. ಆದ್ರೆ ನೀವು ದಿನಕ್ಕೊಂದು ರೆಸಿಪಿ ಮಾಡಲು ಇಚ್ಛಿಸಿದರೆ ಈ ತೆಂಗಿನಕಾಯಿ ರೈಸ್ ಮಾಡಿನೋಡಿ. ಬೇರೆಲ್ಲಾ ಅನ್ನಕ್ಕಿಂತ ಹೆಚ್ಚು ರುಚಿಕರ ಮತ್ತು ಇನ್ನಷ್ಟು ಸೇವಿಸಬೇಕು ಎಂಬ ಆಸೆ ಮೂಡುವಷ್ಟು ರುಚಿ ಹೊಂದಿರುತ್ತದೆ. ಹೆಸರೇ ಹೇಳುವಂತೆ ತೆಂಗಿನಕಾಯಿ ತುರಿಯನ್ನು ಬಳಸಿ ಮಾಡಬಹುದಾದ ರೈಸ್ ಇದಾಗಿದೆ. ಹೀಗಾಗಿ ಸಿಕ್ಕಾಪಟ್ಟೆ ರುಚಿ ಹಾಗೂ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಸಾಮಾನ್ಯವಾಗಿ ತೆಂಗಿನಕಾಯಿಂದ ಮಾಡಲಾಗುವ ಖಾದ್ಯಗಳು ತಮ್ಮ ಅದ್ಭುತವಾದ ರುಚಿ ಮತ್ತು ಸರಳತೆಗಾಗಿ ಪ್ರಸಿದ್ಧಿಯನ್ನು ಪಡೆದಿವೆ. ಇದರಲ್ಲಿ ಬಳಸಲಾಗುವ ಸರಳ ಪದಾರ್ಥಗಳು ಮತ್ತು ಗಿಡ ಮೂಲಿಕೆಗಳು ಇದರ ಅದ್ಭುತ ರುಚಿಗೆ ಕಾರಣವಾಗಿರುತ್ತವೆ. ಇಂತಹ ಆಹಾರಗಳಲ್ಲಿ ತೆಂಗಿನಕಾಯಿ ರೈಸ್ ರೆಸಿಪಿ ಸಹ ಒಂದು.
ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳು ಸಹ ಕಡಿಮೆ. ಹಾಗಾದರೆ ತೆಂಗಿನಕಾಯಿ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ತೆಂಗಿನಕಾಯಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
ತೆಂಗಿನಕಾಯಿ (ತುರಿ) - 1 ಕಪ್
ಅನ್ನ - 1 ಬೌಲ್
ಜೀರಿಗೆ - 1/4 ಟೀಸ್ಪೂನ್
ಸಾಸಿವೆ - 1/4 ಟೀಸ್ಪೂನ್
ನೆಲ ಕಡಲೆ - 1 tbs
ಉದ್ದಿನಬೇಳೆ - 1 tbs
ಹುರಿಗಡಲೆ - 1 ಟೀಸ್ಪೂನ್
ಗೋಡಂಬಿ - 10 ಪಿಸಿಗಳು
ಶುಂಠಿ-1/2 ಇಂಚು
ಕೆಂಪು ಮೆಣಸಿನಕಾಯಿ - 3
ಹಸಿರು ಮೆಣಸಿನಕಾಯಿ - 3
ಕರಿಬೇವಿನ ಎಲೆಗಳು - 1 tbs
ನೀರು - 1/2 ಕಪ್
ಅಡುಗೆ ಎಣ್ಣೆ
ರುಚಿಗೆ ಉಪ್ಪು
ತೆಂಗಿನಕಾಯಿ ರೈಸ್ ಮಾಡುವ ವಿಧಾನ
ಮೊದಲು ತೆಂಗಿನ ತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನಿರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ತೆಂಗಿನ ಹಾಲು ಮಾಡಿಕೊಳ್ಳಬೇಕು. ಈ ಹಾಲು ತೆಗೆದು ಬದಿಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಹುರಿಗಡಲೆ, ಕಡಲೆ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಗೋಡಂಬಿ ಹಾಕಿಕೊಳ್ಳಿ, ಇದಕ್ಕೆ ಶುಂಠಿ, ಒಣ ಮೆಣಸು, ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಎಣ್ಣೆ ಸ್ವಲ್ಪ ಜಾಸ್ತಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ತುರಿದ ತೆಂಗಿನ ಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ರುಬ್ಬಿಟ್ಟ ತೆಂಗಿನಕಾಯಿ ಹಾಲು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಒಂದು ನಿಮಿಷ ಬಿಟ್ಟು ಅದಕ್ಕೆ ಅನ್ನವನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನ್ನ ಹಾಕಿದ ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ಒಲೆ ಆಫ್ ಮಾಡಿದ 1 ನಿಮಿಷದ ವರೆಗೂ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ರುಚಿ ರುಚಿಯ ತೆಂಗಿನಕಾಯಿ ರೈಸ್ ರೆಡಿಯಾಗುತ್ತದೆ.



Click it and Unblock the Notifications
